ಸೋಮವಾರ, ಜೂನ್ 16, 2025
HomeSportsCricketIndia vs South Africa T20 : ಜುಲೈ 1, 2, 3ರಂದು ಭಾರತ-ದಕ್ಷಿಣ ಆಫ್ರಿಕಾ...

India vs South Africa T20 : ಜುಲೈ 1, 2, 3ರಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ಹಣ ವಾಪಸ್

- Advertisement -

ಬೆಂಗಳೂರು: ಮಳೆಯಿಂದ ರದ್ದಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ (India vs South Africa T20 )ಟಿಕೆಟ್ ಬೆಲೆಯ 50% ಹಣವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜುಲೈ 1, 2 ಮತ್ತು 3ರಂದು ವಾಪಸ್ ನೀಡಲಿದೆ.

ಈ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿದೆ. ಜೂನ್ 19ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಮಳೆಯಿಂದ ರದ್ದಾಗಿತ್ತು.

Tickets for the India vs South Africa T20 match return on July 1, 2 and 3

ಬಿಸಿಸಿಐ ನಿಯಮಗಳ ಪ್ರಕಾರ ಅಂತರಾಷ್ಟ್ರೀಯ ಪಂದ್ಯವೊಂದು ಕನಿಷ್ಠ ಒಂದು ಎಸೆತ ಕಂಡು ಮಳೆಯಿಂದ ರದ್ದಾದರೂ ಟಿಕೆಟ್ ಹಣ ವಾಪಸ್ ನೀಡಲಾಗುವುದಿಲ್ಲ. ಆದರೆ ಭಾರತ-ದಕ್ಷಿಣ ಆಫ್ರಿಕಾ 5ನೇ ಟಿ20 ಪಂದ್ಯದಲ್ಲಿ 3.3 ಓವರ್”ಗಳ ಆಟ ನಡೆದಿದ್ದರೂ, ಕ್ರಿಕೆಟ್ ಪ್ರಿಯರ ನೆರವಿಗೆ ನಿಂತಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆ ಟಿಕೆಟ್ ಮೊತ್ತದ 50% ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿತ್ತು. ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೇ ಟಿಕೆಟ್ ವಾಪಸ್ ದಿನಾಂಕ ಮತ್ತು ಸ್ಥಳವನ್ನು ತಿಳಿಸುವುದಾಗಿ ಹೇಳಿತ್ತು. ಅದರಂತೆ ಜುಲೈ 1, 2, 3ರಂದು ಟಿಕೆಟ್ ಹಣ ವಾಪಸ್ ಮಾಡುವುದಾಗಿ ತಿಳಿಸಿದೆ.

ಇದನ್ನೂ ಓದಿ : Mayank Agarwal : ರೋಹಿತ್‌ಗೆ ಕೋವಿಡ್, ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಒಲಿದ ಅದೃಷ್ಟ

ಇದನ್ನೂ ಓದಿ : ಐರ್ಲೆಂಡ್ ಯುವ ಆಟಗಾರನಿಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

Tickets for the India vs South Africa T20 match return on July 1, 2 and 3

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular