ಮಂಗಳವಾರ, ಏಪ್ರಿಲ್ 29, 2025
HomeSportsCricketVijay Hazare Trophy 2021 : ಪಾಂಡೆ, ಸಿದ್ದಾರ್ಥ್‌, ಸಮರ್ಥ ಆರ್ಭಟ : ಕ್ವಾರ್ಟರ್ ಫೈನಲ್...

Vijay Hazare Trophy 2021 : ಪಾಂಡೆ, ಸಿದ್ದಾರ್ಥ್‌, ಸಮರ್ಥ ಆರ್ಭಟ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

- Advertisement -

ಜೈಪುರ : ವೈಶಾಂಕ್‌ ವಿಜಯ ಕುಮಾರ್‌ ಅವರ ಬೌಲಿಂಗ್‌ ಆಕ್ರಮಣದ ಬೆನ್ನಲ್ಲೇ, ನಾಯಕ ಮನೀಶ್‌ ಪಾಂಡೆ, ಸಿದ್ದಾರ್ಥ್‌ ಕೆ.ವಿ. ಹಾಗೂ ಆರ್.‌ ಸಮರ್ಥ್‌ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ವಿಜಯ್‌ ಹಜಾರೆ ಟ್ರೋಫಿಯಲ್ಲಿ (Vijay Hazare Trophy 2021-22) ಕರ್ನಾಟಕ ತಂಡ ( Karnataka Won ) ರಾಜಸ್ತಾನ ತಂಡದ ವಿರುದ್ದ ಭರ್ಜರಿ ಎಂಟು ವಿಕೆಟ್‌ಗಳಿಂದ ಜಯಿಸುವ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಇದೀಗ ತಮಿಳುನಾಡು ವಿರುದ್ದ ಸೆಣೆಸಾಡಲು ಕರ್ನಾಟಕ ಸಜ್ಜಾಗಿದೆ.

ಜೈಪುರದ ಕೆಎಲ್ ಸೈನಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಕರ್ನಾಟಕ ತಂಡ ಮೊದಲು ಬೌಲಿಂಗ್‌ ನಡೆಸಿತ್ತು. ಪ್ರಸೀದ್ದ ಹಾಗೂ ವೃಶಾಂಕ್‌ ವಿಜಯ ಕುಮಾರ್‌ ದಾಳಿಗೆ ಸಿಲುಕಿದ್ದ ರಾಜಸ್ತಾನ ತಂಡ ಕೇವಲ 19 ರನ್‌ ಗಳಿಸುವಷ್ಟರಲ್ಲಿ ಬರೋಬ್ಬರಿ 5 ವಿಕೆಟ್‌ ಕಳೆದುಕೊಂಡಿತ್ತು. ರಾಜಸ್ತಾನ ತಂಡ ನಾಯಕ ದೀಪಕ್‌ ಹೂಡ ಆಕರ್ಷಕ ಶತಕ ಬಾರಿಸಿದ್ದಾರೆ. ಎಸ್‌.ವಿ. ಜೋಷಿ ೩೩ರನ್‌ ಹಾಗೂ ಬಿಶ್ನೋಯಿ 17ರನ್‌ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಎರಡಂಕಿ ರನ್‌ ದಾಖಲಿಸುವಲ್ಲಿ ವಿಫಲರಾಗಿದ್ದಾರೆ. 41.4ಓವರ್‌ಗಳಲ್ಲಿ ರಾಜಸ್ತಾನ ತಂಡ 199 ರನ್‌ಗಳಿಗೆ ಸರ್ವಪತನ ಕಂಡಿತ್ತು. ಕರ್ನಾಟಕ ಪರ ವೃಶಾಂಕ್‌ ವಿಜಯ ಕುಮಾರ್‌ 4, ಕೆ.ಗೌತಮ್‌ 2, ವೆಂಕಟೇಶ್‌ ಎಂ., ಪ್ರವೀಣ್‌ ದುಬೆ 1, ಎಂ. ಪ್ರಸೀದ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ರಾಜಸ್ತಾನ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಕಮಲೇಶ್‌ ನಾಗರಕೋಟಿ ಆರಂಭಿಕ ಆಘಾತ ನೀಡಿದ್ರು. 4 ರನ್‌ ಗಳಿಸಿದ್ದ ದೇವದತ್ತ ಪಡಿಕ್ಕಲ್‌ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಹಾದಿ ಹಿಡಿದಿದ್ರು. ನಂತರ ಬಂದ ಕೆ.ವಿ. ಸಿದ್ದಾರ್ಥ್‌ ಜೊತೆಯಾದ ಆರ್.‌ ಸಮರ್ಥ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ರು. ಈ ಜೋಡಿ ಮೊದಲ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದ್ರು. ಆರ್.‌ ಸಮರ್ಥ್‌ ೫೪ರನ್‌ ಬಾರಿಸಿ ಔಟಾದ್ರೆ, ಸಿದ್ದಾರ್ಥ್‌ ಜೊತೆಯಾದ ಮನೀಶ್‌ ಪಾಂಡೆ ತಮ್ಮ ಆಕರ್ಷಕ ಆಟದ ನೆರವಿನಿಂದ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ರು. ಮನೀಷ್‌ ಪಾಂಡೆ ೫೨ ಹಾಗೂ ಕೆ.ವಿ. ಸಿದ್ದಾರ್ಥ್‌ ೮೫ರನ್‌ ಬಾರಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡ 43.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 204ರನ್‌ ಬಾರಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಇನ್ನು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಜೈಪುರದ ಕೆ.ಎಲ್.‌ ಸೈನಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಸೈಯ್ಯದ್‌ ಮುಷ್ತಾಕ್‌ ಆಲಿ ಟ್ರೋಫಿಯ ಫೈನಲ್‌ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಕರ್ನಾಟಕಕ್ಕೆ ಉತ್ತಮ ಅವಕಾಶ ಎದುರಾಗಲಿದೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಸಾಕಷ್ಟು ಜಗಳವಾಡುತ್ತಾರೆ : ಕೊಹ್ಲಿ ವರ್ತನೆ ಬಗ್ಗೆ ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

ಇದನ್ನೂ ಓದಿ : ಬಿಗ್ ಸ್ಕ್ರಿನ್ ಗೆ ಮದ್ಯದ ದೊರೆ : ವೆಬ್ ಸೀರಿಸ್ ರೂಪದಲ್ಲಿ ವಿಜಯ್ ಮಲ್ಯ ಸ್ಟೋರಿ

ಇದನ್ನೂ ಓದಿ : ಲಖನೌ ತಂಡಕ್ಕೆ ಆಂಡಿ ಫ್ಲವರ್ ಕೋಚ್, ಗೌತಮ್ ಗಂಭೀರ್ ಮೆಂಟರ್, ಕೆಎಲ್ ರಾಹುಲ್ ನಾಯಕ

( Vijay Hazare Trophy 2021-22 Karnataka Won by 8 wickets )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular