ನವದೆಹಲಿ : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣವಿಲ್ಲ, ಕ್ರಿಕೆಟ್ ಪಂದ್ಯಾವಳಿಗೂ ಇಲ್ಲಾ, ಇಂತಹ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟ, ನಟಿಯರು, ಕ್ರಿಕೆಟ್ ತಾರೆಯರು ಏನ್ ಮಾಡ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳದ್ದು.

ಸದಾ ಬಿಡುವಿಲ್ಲದೇ ಕ್ರಿಕೆಟ್ ನಲ್ಲಿ ತೊಡಗಿಕೊಳ್ಳುತ್ತಿದ್ದ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಮನೆಯಲ್ಲಿ ಉಳಿದುಕೊಳ್ಳುವುದೇ ತೀರಾ ಕಡಿಮೆ


ಇನ್ನು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಸಿನಿಮಾ ಶೂಟಿಂಗ್ ನಲ್ಲಿ ಸದಾ ಬ್ಯುಸಿಯಾಗಿಯೇ ಇರ್ತಾರೆ.

ಕೊರೊನಾ ಲಾಕ್ ಡೌನ್ ನಲ್ಲಿ ಅನುಷ್ಕಾ ವಿರಾಟ್ ಕೊಯ್ಲಿ ಹೇರ್ ಕಟ್ ಮಾಡಿರೋ ಪೋಟೋ ಸಖತ್ ವೈರಲ್ ಆಗಿತ್ತು.

ಆದ್ರೀಗ ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಉಳಿದುಕೊಂಡಿರುವ ದಂಪತಿಗಳು, ಟೈಂ ಪಾಸ್ ಮಾಡೋದಕ್ಕೆ ಮನೆಯಲ್ಲಿಯೇ ಕ್ರಿಕೆಟ್ ಆಡುತ್ತಾ ಕಾಲ ಕಳೆಯುತ್ತಿದ್ದಾರೆ.

ತನ್ನ ಪತ್ನಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಮನೆಯಂಗಳದಲ್ಲಿಯೇ ಬ್ಯಾಟಿಂಗ್ ಹೇಳಿಕೊಡ್ತಿದ್ದಾರೆ.


ಅನುಷ್ಕಾ ಮತ್ತು ಕೊಹ್ಲಿ ತಮ್ಮ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿ ಕ್ರಿಕೆಟ್ ಆಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಮೊದಲಿಗೆ ಅನುಷ್ಕಾ ಬ್ಯಾಟಿಂಗ್ ಮಾಡಿದ್ರೆ, ಕೊಯ್ಲಿ ಬೌಲಿಂಗ್ ಮಾಡಿದ್ರು. ನಂತರದ ಅನುಷ್ಕಾ ಬೌಲಿಂಗ್ ಗೆ ಕೊಯ್ಲಿ ಬ್ಯಾಟ್ ಬೀಸಿದ್ದಾರೆ.

ವಿರಾರ್ಶ್ ಅನ್ನುವವರು ತಮ್ಮ ಟ್ವೀಟರ್ ಖಾತೆಯಲ್ಲಿ ವಿರಾಟ್ ಮತ್ತು ಅನುಷ್ಕಾ ದಂಪತಿಗಳ ಕ್ರಿಕೆಟ್ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ವಿರಾಟ್ ಅನುಷ್ಕಾ ದಂಪತಿಗಳ ಕ್ರಿಕೆಟ್ ಆಟದ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.