Roger Federer final match : ರೋಜರ್ ಫೆಡರರ್ ಹಾಗೂ ರಫಾಲ್ ನಡಾಲ್ ಟೆನ್ನಿಸ್ ಲೋಕದ ದಿಗ್ಗಜರು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಇವರಿಬ್ಬರ ನಡುವಿನ ಪಂದ್ಯ ಎಷ್ಟರ ಮಟ್ಟಿಗೆ ರೋಚಕವಾಗಿರುತ್ತದೆ ಎಂದರೆ ಪ್ರೇಕ್ಷಕರು ಖುರ್ಚಿ ತುದಿಗೆ ಕುಳಿತುಕೊಳ್ಳಬೇಕು. ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಈ ಇಬ್ಬರು ಆಟಗಾರರು ಟೆನ್ನಿಸ್ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಟೆನ್ನಿಸ್ ಅಂಗಳದಲ್ಲಿ ಇವರಿಬ್ಬರು ಎಂತಹ ಸ್ಪರ್ಧಿಗಳಾಗಿದ್ದರೂ ಸಹ ಕ್ರೀಡೆಯ ಹೊರತಾಗಿ ಫೆಡರರ್ ಹಾಗೂ ನಡಾಲ್ ಉತ್ತಮ ಸ್ನೇಹಿತರು. ಫೆಡರರ್ ಟೆನ್ನಿಸ್ ಲೋಕಕ್ಕೆ ವಿದಾಯ ಘೋಷಿಸುವ ನಿರ್ಧಾರವನ್ನು ಕೈಗೊಂಡ ಸಂದರ್ಭದಲ್ಲಿ ಲೇವರ್ ಕಪ್ನ ಡಬಲ್ಸ್ ಪಂದ್ಯದಲ್ಲಿ ಶ್ರೇಷ್ಠ ಪ್ರತಿಸ್ಪರ್ಧಿ ಹಾಗೂ ನನ್ನ ಸ್ನೇಹಿತನ ಜೊತೆಯಲ್ಲಿ ನಾನು ಆಡಲು ಬಯಸುತ್ತೇನೆ ಎಂದು ಫೆಡರರ್ ಹೇಳಿದ್ದರು.
ಆಪ್ತ ಗೆಳೆಯ ನಡಾಲ್ ಜೊತೆಯಲ್ಲಿ ಲೇವರ್ ಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ರೋಜರ್ ಫೆಡರರ್ ಫಾನ್ಸೆಸ್ ಟಿಯಾಫೋ ಹಾಗೂ ಜ್ಯಾಜ್ಸಾಕ್ ಜೋಡಿ ಎದುರು ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. ಪಂದ್ಯ ಮುಗಿದ ಬಳಿಕ ನಡಾಲ್ ಫೆಡರರ್ಗೆ ಕಣ್ಣೀರಿನ ವಿದಾಯವನ್ನು ಹೇಳಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ .
All the Fedal feelings.#LaverCup pic.twitter.com/WKjhcADFoe
— Laver Cup (@LaverCup) September 24, 2022
ಅಂತಿಮ ಪಂದ್ಯದಲ್ಲಿ ರೋಜರ್ ಫೆಡರರ್ ಗೆಲುವಿನ ಮೂಲಕ ಟೆನ್ನಿಸ್ ಕೋರ್ಟ್ಗೆ ವಿದಾಯ ಹೇಳುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಘಾತಕಾರಿ ಬೆಳವಣಿಗೆ ಎಂಬಂತೆ ರೆಸ್ಟ್ ಆಫ್ ದಿ ವರ್ಲ್ಡರ್ ತಂಡದ ಫಾನ್ಸೆನ್ ಟಿಯಾಪೋ ಹಾಗೂ ಜ್ಯಾಕ್ ಸಾಕ್ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಫೆಡರರ್ ಹಾಗೂ ನಡಾಲ್ ಜೋಡಿಯ ವಿರುದ್ಧ ಗೆಲುವನ್ನು ಸಾಧಿಸಿತು. ಪಂದ್ಯದ ಕೊನೆಯಲ್ಲಿ ರೋಜರ್ ಫೆಡರರ್ ಕೊಂಚ ಭಾವುಕಾರಿದ್ದು ಕಂಡು ಬಂತು. ಆದರೆ ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ರಾಫಲ್ ನಡಾಲ್ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪಂದ್ಯದ ನಂತರ, ಫೆಡರರ್ ಕಣ್ಣೀರು ಹಾಕುವ ಮೊದಲು ನಡಾಲ್ ಮತ್ತು ಅವರ ಸಹ ಆಟಗಾರರನ್ನು ಅಪ್ಪಿಕೊಂಡರು. ಆಗ ನಡಾಲ್ ಕೂಡ ಕಣ್ಣೀರಿಡುತ್ತಿರುವುದನ್ನು ಕ್ಯಾಮರಾ ಕಣ್ಣಿಗೆ ಕಂಡಿತು.
ಇದನ್ನು ಓದಿ : Rohit Sharma World Record: ದಾಖಲೆಯ ಹೊಸ್ತಿಲ್ಲಿ ರೋಹಿತ್ ಶರ್ಮಾ.. ಇನ್ನೊಂದು ಸಿಕ್ಸರ್ ಬಾರಿಸಿದರೆ ಈ ವಿಶ್ವದಾಖಲೆ ನಂದೇ
ಇದನ್ನೂ ಓದಿ : DK= ‘D’eath Over ‘K’iller : ಟೀಮ್ ಇಂಡಿಯಾ ಫಿನಿಷರ್ ದಿನೇಶ್ ಕಾರ್ತಿಕ್‌ಗೆ ಹೊಸ ಬಿರುದು
Watch: Rafael Nadal could not hold back tears after Roger Federer’s final match