Womens Asia Cup 2024 India Women Vs Pakistan Women ದಾಂಬುಲಾ: ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿ ನಾಳೆ (ಶುಕ್ರವಾರ) ಶ್ರೀಲಂಕಾದಲ್ಲಿ ಆರಂಭವಾಗಲಿದ್ದು, ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು (India Women Vs Pakistan Women) ಎದುರಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ದಾಂಬುಲದ ರಣಗಿರಿ ದಾಂಬುಲ ಇಂಟರ್’ನ್ಯಾಷನಲ್ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿ ಗೆದ್ದಿರುವ ಭಾರತ ಮಹಿಳಾ ತಂಡ ಏಷ್ಯಾ ಕಪ್ ಟಿ20 ಟೂರ್ನಿಯಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ ಭಾರತ ಸಹಿತ 8 ತಂಡಗಳು ಭಾಗವಹಿಸಲಿವೆ. ಭಾರತ ತಂಡ ಎ ಗ್ರೂಪ್’ನಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳ ಜೊತೆ ಸ್ಥಾನ ಪಡೆದಿದೆ.
https://x.com/BCCIWomen/status/1813902015292191100
ಎರಡು ಗ್ರೂಪ್’ಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್’ಗೆ ಅರ್ಹತೆ ಪಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಜುಲೈ 28ರಂದು ದಾಂಬುಲದಲ್ಲಿ ನಡೆಯಲಿದೆ.
ಇದನ್ನೂ ಓದಿ : Ishan Kishan: ಹುಟ್ಟುಹಬ್ಬದ ದಿನ ಸಮಾಧಿ ಮಂದಿರಕ್ಕೆ ತೆರಳಿದ ಇಶಾನ್ ಕಿಶನ್, ಒಲಿಯುತ್ತಾನಾ ಸಾಯಿ ಬಾಬಾ ?
ಏಷ್ಯಾ ಕಪ್ ಮಹಿಳಾ ಟಿ20 ಟೂರ್ನಿ:
ಎ ಗ್ರೂಪ್: ಭಾರತ, ಪಾಕಿಸ್ತಾನ, ನೇಪಾಳ, ಯುಎಇ
ಬಿ ಗ್ರೂಪ್: ಶ್ರೀಲಂಕಾ, ಮಲೇಷ್ಯಾ, ಬಾಂಗ್ಲಾದೇಶ, ಥಾಯ್ಲೆಂಡ್

ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ಮಹಿಳಾ ತಂಡ (India Women’s Cricket team):
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗ್ಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸಜೀವನ್ ಸಜಾನ, ದೀಪ್ತಿ ಶರ್ಮಾ, ಆಶಾ ಶೋಭನಾ, ಪೂಜಾ ವಸ್ತ್ರಕಾರ್, ರಾಧಾ ಯಾದವ್.
ಇದನ್ನೂ ಓದಿ : ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಾ ? ಇನ್ನು ಮುಂದೆ ಕ್ರಿಕೆಟರ್ಸ್ ಈ ಕೆಲಸ ಮಾಡಲೇಬೇಕು
ಏಷ್ಯಾ ಕಪ್ ಟಿ20: ಭಾರತ V ಪಾಕಿಸ್ತಾನ ಪಂದ್ಯ
ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರೀಡಾಂಗಣ, ದಾಂಬುಲ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್
ಇದನ್ನೂ ಓದಿ : Indian Cricket Team : ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕ, ಏಕದಿನ ಸರಣಿಗೆ ರೋಹಿತ್ ಕ್ಯಾಪ್ಟನ್
ಏಷ್ಯಾ ಕಪ್ ಮಹಿಳಾ ಟಿ20 ಟೂರ್ನಿ: ಭಾರತ ತಂಡದ ಲೀಗ್ ಪಂದ್ಯಗಳ ವೇಳಾಪಟ್ಟಿ
ಜುಲೈ 19: ಭಾರತ Vs ಪಾಕಿಸ್ತಾನ (ಸಂಜೆ 7ಕ್ಕೆ, ದಾಂಬುಲ)
ಜುಲೈ 21: ಭಾರತ Vs ಯುಎಇ (ಮಧ್ಯಾಹ್ನ 2ಕ್ಕೆ, ದಾಂಬುಲ)
ಜುಲೈ 23: ಭಾರತ Vs ನೇಪಾಳ (ಸಂಜೆ 7ಕ್ಕೆ, ದಾಂಬುಲ)
Women’s Asia Cup 2024 India Women Vs Pakistan Women Match July 19th