ಭಾನುವಾರ, ಏಪ್ರಿಲ್ 27, 2025
HomekarnatakaWorld Coffee Conference : ಐದನೇ ವಿಶ್ವ ಕಾಫಿ ಸಮ್ಮೇಳನದ ರಾಯಭಾರಿ ಆಗಿ ಟೆನಿಸ್ ಆಟಗಾರ...

World Coffee Conference : ಐದನೇ ವಿಶ್ವ ಕಾಫಿ ಸಮ್ಮೇಳನದ ರಾಯಭಾರಿ ಆಗಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ

- Advertisement -

ಬೆಂಗಳೂರು : ಏಷ್ಯಾದಲ್ಲೇ ಮೊಟ್ಟ ಮೊದಲ ಬಾರಿಗೆ, (World Coffee Conference) ವಿಶ್ವ ಕಾಫಿ ಸಮ್ಮೇಳನ (WCC)ವನ್ನು ಭಾರತದಲ್ಲಿ ನಡೆಸಲಿದ್ದು, ಇದು ಐದನೇ ಸಮ್ಮೇಳನವಾಗಿದೆ. ಜಾಗತಿಕ ಸಮ್ಮೇಳನದ ಐದನೇ ಆವೃತ್ತಿಯು ಬೆಂಗಳೂರಿನಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ನಡೆಯಲಿದೆ. ಇದು ಈಡೀ ದೇಶವೇ ಹೆಮ್ಮೆ ಪಡುವ ವಿಚಾರವಾಗಿದ್ದು, ಈ ಬಾರೀ ಸಮ್ಮೇಳನಕ್ಕೆ ರಾಯಭಾರಿಯಾಗಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಡಬ್ಲ್ಯುಸಿಸಿ ಆಯ್ಕೆ ಮಾಡಿದೆ.

ಈ ವರ್ಷ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಸಮ್ಮೇಳನದ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. “ವೃತ್ತಾತ್ಮಕ ಆರ್ಥಿಕತೆ ಮತ್ತು ಪುನರುತ್ಪಾದಕ ಕೃಷಿಯ ಮೂಲಕ ಸುಸ್ಥಿರತೆ” ಈವೆಂಟ್‌ನ ಕೇಂದ್ರ ವಿಷಯವಾಗಿದೆ. ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಈವೆಂಟ್ ಲೋಗೋ ಮತ್ತು ಥೀಮ್ ಅನ್ನು ಅನಾವರಣಗೊಳಿಸಲಾಯಿತು.

ಇದನ್ನೂ ಓದಿ : BL Santosh – BS Yeddyurappa : BL ಸಂತೋಷ್‌ ಬಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, BS ಯಡಿಯೂರಪ್ಪ ಬಣಕ್ಕೆ ವಿಪಕ್ಷ ನಾಯಕನ ಸ್ಥಾನ : ಮುನಿಸಿಗೆ ಮದ್ದೆರೆದ ಬಿಜೆಪಿ ಹೈಕಮಾಂಡ್‌

ಇದನ್ನೂ ಓದಿ : Illegal property case : ಅಕ್ರಮ ಆಸ್ತಿ ಪ್ರಕರಣ : ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

80ಕ್ಕೂ ಹೆಚ್ಚು ದೇಶಗಳ ನಿರ್ಮಾಪಕರು, ಕ್ಯೂರ್‌ಗಳು, ರೋಸ್ಟರ್‌ಗಳು, ರಫ್ತುದಾರರು, ನೀತಿ ನಿರೂಪಕರು ಮತ್ತು ಸಂಶೋಧಕರು ಡಬ್ಲ್ಯುಸಿಸಿ 2023 ರಲ್ಲಿ ಸೇರುತ್ತಾರೆ ಎಂದು ಹೇಳಲಾಗಿದೆ. ಈ ಸಮ್ಮೇಳನದಿಂದ ಮಲೆನಾಡಿನ ಕಾಫಿ ಜಗತ್ತಿನಾದ್ಯಂತ ಪಸರಿಸಲಿದೆ.

World Coffee Conference: Tennis player Rohan Bopanna is the ambassador of the fifth World Coffee Conference

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular