ಸೋಮವಾರ, ಏಪ್ರಿಲ್ 28, 2025
HomeSportsWWE ತಾರೆ ಸಾರಾ ಲೀ ಸಾವಿನ ರಹಸ್ಯ ಕೊನೆಗೂ ಬಯಲು

WWE ತಾರೆ ಸಾರಾ ಲೀ ಸಾವಿನ ರಹಸ್ಯ ಕೊನೆಗೂ ಬಯಲು

- Advertisement -

ಮಾಜಿ WWE ತಾರೆ ಸಾರಾ ಲೀ (WWE Star Sara Lee) ಅವರ ಸಾವು ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಕ್ಸಾರ್ ಕೌಂಟಿ ವೈದ್ಯಕೀಯ ಪರೀಕ್ಷಾ ಕಚೇರಿಯು ಸಾವಿನ ಹಿಂದಿನ ರಹಸ್ಯವನ್ನು ಬಯಲು ಮಾಡಿದೆ. ಸಾರಾ ಲೀ ಸಾವಿಗೆ ಅತಿಯಾಗಿ ಆಲ್ಕೋಹಾಲ್‌ ಹಾಗೂ ಮಾತ್ರೆಗಳ ಸೇವನೆಯೇ ಕಾರಣ ಎಂದು ವೈದ್ಯಕೀಯ ವರದಿ ಹೇಳಿದೆ. ಮಹಿಳಾ ಸೂಪರ್‌ಸ್ಟಾರ್‌ನ ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆಯನ್ನು ಮಾಡಿದ್ದರು. 30 ವರ್ಷದ ಕುಸ್ತಿಪಟು ಅಕ್ಟೋಬರ್ 5 ರಂದು ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿರುವ ತನ್ನ ಮನೆಯಲ್ಲಿ ನಿಧನರಾಗಿದ್ದರು.

ಸಾರಾ ಲೀ (WWE Star Sara Lee) ಸಾವಿನ ಬೆನ್ನಲ್ಲೇ ಬೆಕ್ಸಾರ್ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ವಕ್ತಾರರು ಲೀ ಆಂಫೆಟಮೈನ್‌ಗಳು, ಡಾಕ್ಸಿಲಾಮೈನ್ ಮತ್ತು ಆಲ್ಕೋಹಾಲ್ ಅನ್ನು ಸೇವಿಸಿದ್ದಾರೆ ಎಂದು ದೃಢಪಡಿಸಿದ್ದರು. ಇದು ಅಂತಿಮವಾಗಿ ಅವಳ ಸಾವಿಗೆ ಕಾರಣವಾಯಿತು. ಲೀ, ಮೂಲತಃ ಮಿಚಿಗನ್‌ನ ಹೋಪ್‌ನಿಂದ, WWE “ಟಫ್ ಎನಫ್” ರಿಯಾಲಿಟಿ ಟೆಲಿವಿಷನ್ ಸರಣಿಯನ್ನು ಗೆದ್ದ ನಂತರ ರಾಷ್ಟ್ರೀದ ಗಮನ ಸೆಳೆದಿದ್ದರು. ಕಂಪನಿಯಿಂದರ ಜೊತೆಗೆ ವರ್ಷಕ್ಕೆ ಸುಮಾರು $250,000 ಮೌಲ್ಯದ ಒಪ್ಪಂದವನ್ನು ಮಾಡಿಕೊಂಡಿದ್ದರು. ಆಕೆಯ ನಿಧನದ ಹಿನ್ನೆಲೆಯಲ್ಲಿ, WWE ಲೀ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸುವ ಹೇಳಿಕೆಯನ್ನು ನೀಡಿತು ಮತ್ತು “ಕ್ರೀಡಾ-ಮನರಂಜನಾ ಜಗತ್ತಿನಲ್ಲಿ ಅನೇಕರಿಗೆ ಸ್ಫೂರ್ತಿ” ಎಂದು ಶ್ಲಾಘಿಸಿತು. ಅಧಿಕಾರಿಗಳ ಪ್ರಕಾರ, ಸಾರಾ ಸಾಯುವ ಸಮಯದಲ್ಲಿ ಆಕೆಯ ದೇಹ ಮತ್ತು ತಲೆಯ ಮೇಲೆ ಮೂಗೇಟು ಸವೆತವನ್ನು ಅನುಭವಿಸುತ್ತಿದ್ದರು.

ಆಕೆ ಅತೀ ಹೆಚ್ಚು ಮದ್ಯಪಾನ ಹಾಗೂ ಮಾದಕ ದೃವ್ಯಗಳ ಪ್ರಭಾವಕ್ಕೆ ಒಳಗಾಗಿದ್ದಳು. ತಮ್ಮ ದೇಹದಲ್ಲಿನ ಗಾಯದ ನೋವನ್ನು ಮರೆಸುವ ಸಲುವಾಗಿಯೇ ಈಕೆ ದುಶ್ಚಟಗಳನ್ನು ರೂಢಿಸಿಕೊಂಡಿದ್ದಳು ಎನ್ನಲಾಗುತ್ತಿದೆ. ಆಕೆ ತನ್ನ 30 ನೇ ವಯಸ್ಸಿಗೆ ಸಾವನ್ನಪ್ಪಿರುವ ಸುದ್ದಿ ಕುಸ್ತಿ ಅಭಿಮಾನಿಗಳಿಗೆ ಆಘಾತವನ್ನು ತಂದುಕೊಟ್ಟಿತ್ತು. ಸಾರಾ ಲೀಮಾಜಿ WWE ಸೂಪರ್‌ಸ್ಟಾರ್ ವೆಸ್ಲಿ ಬ್ಲೇಕ್ ಅವರನ್ನು ವಿವಾಹವಾಗಿದ್ದರು. 2015ರ ಡಿಸೆಂಬರ್‌ ತಿಂಗಳಿನಲ್ಲಿ ಇಬ್ಬರು ಮದುವೆಯಾಗಿದ್ದರು. ಸಾರಾ ಲೀ ಹಾಗೂ ವೆಸ್ಲಿ ಬ್ಲೇಕ್‌ ದಂಪತಿಗಳಿಗೆ ಮೂವರು ಮಕ್ಕಳಿದ್ದರು. ತನ್ನ ಹೆಂಡತಿಯ ಹೃದಯವಿದ್ರಾವಕ ಮರಣದ ನಂತರ, ಬ್ಲೇಕ್ ತನ್ನ ಆಳವಾದ ಪ್ರೀತಿ ಮತ್ತು ಅವಳ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುವ ಹೃತ್ಪೂರ್ವಕ ಸಂದೇಶವನ್ನು Instagram ನಲ್ಲಿ ಹಂಚಿಕೊಂಡಿದ್ದರು. ಸಾರಾ ಲೀ ತನ್ನ ಸೌಂದರ್ಯದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಕುಸ್ತಿ ಸ್ಪರ್ಧೆಗಳಲ್ಲೀಯೂ ಸಣ್ಣ ವಯಸ್ಸಿನಲ್ಲಿಯೇ ಸಾಧನೆಯ ಶಿಖರವೇರಿದ್ದಳು.

ಇದನ್ನೂ ಓದಿ : Rahul out of WTC final : ರಾಹುಲ್‌ಗೆ ಮತ್ತೊಮ್ಮೆ ಕೈ ಕೊಟ್ಟ ಅದೃಷ್ಟ, WTC ಫೈನಲ್‌ನಿಂದ ಔಟ್

ಇದನ್ನೂ ಓದಿ : ವಿಶ್ವ ಸುಂದರಿ ಸ್ಪರ್ಧಿ ಸಿಯೆನ್ನಾ ವೀರ್ ದುರಂತ ಸಾವು

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular