ಭಾರತ ತಂಡದ ಭರವಸೆಯ ಆಟಗಾರ ಕನ್ನಡಿಗ ಕರುಣ್ ನಾಯರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಉದಯಪುರದಲ್ಲಿ ತಮ್ಮ ಬಹುಕಾಲದ ಗೆಳತಿ ಸನಾಯಾ ಟಂಕರಿವಾಲಾ ಅವರನ್ನು ವರಿಸಿದ್ದಾರೆ.

ಕ್ರಿಕೆಟ್ ಆಟಗಾರರಾಗಿರೋ ಅಜಿಂಕ್ಯಾ ರಹಾನೆ, ವರುಣ್ ಅರೋನ್, ಯಜುವೇಂದ್ರ ಚಹಲ್, ಶ್ರೇಯಸ್ ಐಯ್ಯರ್, ಶಾರ್ದೂಲ್ ಠಾಕೂರ್ ಸೇರಿದಂತೆ ಹಲವು ಗಣ್ಯರು ವಿವಾಹದಲ್ಲಿ ಭಾಗಿಯಾಗಿದ್ದರು.

ಕರುಣ್ ನಾಯರ್ ಹಾಗೂ ಸನಾಯಾ ಟಂಕರಿವಾಲಾ ಕಳೆದ ಜೂನ್ ನಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ವಿವಾಹದ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.