ಸಿಡ್ನಿ : ಅಗ್ನಿದುರಂತದಲ್ಲಿ ನಿರಾಶ್ರಿತರಾದವರ ನೆರವಿಗಾಗಿ ಆಯೋಜಿಸಲಾಗಿದ್ದ ಬುಷ್ಫೈರ್ ಬ್ಯಾಷ್ ಎಂಬ ಟಿ-10 ಕ್ರಿಕೆಟ್ ಮ್ಯಾಚ್ ವಿಶ್ವದ ಕ್ರಿಕೆಟ್ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿತ್ತು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ನ ದಿಗ್ಗಜರಾದ ರಿಕಿ ಪಾಂಟಿಂಗ್, ಗಿಲ್ ಕ್ರಿಸ್ಟ್, ವೆಸ್ಟ್ ಇಂಡಿಸ್ ದೈತ್ಯ ಬ್ರಯಾನ್ ಲಾರಾ, ವಾಸೀಂ ಅಕ್ರಂ ಜೊತೆಗೆ ಅನೇಕ ಕ್ರಿಕೆಟ್ ದಿಗ್ಗಜರು ಪಾಲ್ಗೊಂಡಿದ್ದರು.

ಕಾಂಗಾರೋಗಳ ನಾಡಿನಲ್ಲಿ ಇತ್ತೀಚಿಗೆ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಅದೆಷ್ಟೋ ಅರಣ್ಯ ಸಂಪತ್ತು ನಾಶವಾಗಿತ್ತು. ಲೆಕ್ಕವಿಲ್ಲದಷ್ಟು ಪ್ರಾಣಿಗಳು ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗಿತ್ತು. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರೋ ನಿರಾಶ್ರಿತರಿಗೆ ನೆರವಾಗೋ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಬುಷ್ ಫೈರ್ ಬ್ಯಾಶ್ ಪಂದ್ಯ ಆಯೋಜಿಸಲಾಗಿತ್ತು.

ಸುಮಾರು ಐದು ವರ್ಷಗಳ ಬಳಿಕ ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದು ಬೌಂಡರಿ ಬಾರಿಸಿದ್ದು ವಿಶೇಷವಾಗಿತ್ತು.

ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನಿಂದ ಸಂಭವಿಸಿದ ಹಾನಿಯಿಂದ ನಿರಾಶ್ರಿತರಾದವರಿಗೆ ಕ್ರಿಕೆಟ್ ಆಟಗಾರರು ಬುಷ್ಫೈರ್ ಬ್ಯಾಷ್ ಎಂಬ ಟಿ-10 ಕ್ರಿಕೆಟ್ ಮ್ಯಾಚ್ ಆಡುವ ಮೂಲಕ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಇಲೆವೆನ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ ಇಲೆವೆನ್ ತಂಡ ಮುಖಾಮುಖಿ ಆಗಿತ್ತು.

ಕೇವಲ ಪುರುಷರಷ್ಟೇ ಅಲ್ಲಾ ಖ್ಯಾತ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಂದ್ಯದಲ್ಲಿ ಭಾಗವಹಿಸಿದ್ದರು.

ಈ ಪಂದ್ಯದಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ಇಲೆವೆನ್ ತಂಡದ ವಿರುದ್ಧ ಪಾಂಟಿಂಗ್ ತಂಡ 1 ರನ್ ಗಳ ರೋಚಕ ಗೆಲುವು ಸಾಧಿಸಿತು.