7th Pay Scale Karnataka: ಬೆಂಗಳೂರು : ಕರ್ನಾಟಕ ಸರಕಾರ ಕೊನೆಗೂ ಸರಕಾರಿ ನೌಕರರ ಬೇಡಿಕೆಯನ್ನು ಈಡೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ (7th Pay Commission) ದ ವರದಿ ಜಾರಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಹಾಗಾದ್ರೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಯಿಂದ ಸರಕಾರಿ ನೌಕರರ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೆ.ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗವು ತನ್ನ ವರದಿಯನ್ನು ಕಳೆದ ಮಾರ್ಚ್ 16ರಂದು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿತ್ತು. ವೇತನ ಆಯೋಗ ಸಲ್ಲಿಕೆ ಮಾಡಿರುವ ವರದಿಯಲ್ಲಿ ಹಲವು ಶಿಫಾರಸ್ಸುಗಳನ್ನು ಮಾಡಿದೆ. ಪ್ರಮುಖವಾಗಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ವೇತನದಲ್ಲಿ ಶೇ.27.5ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸ್ಸು ಮಾಡಿದೆ. ಈ ಮೂಲಕ ಸರಕಾರಿ ನೌಕರರ ಕನಿಷ್ಠ ಮೂಲ ವೇತನ ಡಿಎ ಸೇರಿದಂತೆ ಒಟ್ಟು 17000 ದಿಂದ 27000 ಕ್ಕೆ ಏರಿಕೆಯಾಗಲಿದೆ.

ರಾಜ್ಯ ಸರಕಾರ ಈಗಾಗಲೇ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿದ್ದು, 2023 ರಿಂದಲೇ ಸರಕಾರಿ ನೌಕರರು ಮಧ್ಯಂತರ ಪರಿಹಾರವನ್ನು ಪಡೆದುಕೊಂಡಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲೇ 7ನೇ ವೇತನ ಆಯೋಗ ವರದಿ ಜಾರಿಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಅಗಸ್ಟ್ ತಿಂಗಳಿನಿಂದ ವೇತನ ಹೆಚ್ಚಳವಾಗಲಿದೆ. ಇದರಿಂದಾಗಿ ಸರಕಾರಿ ನೌಕರರು ಸುಮಾರು 5 ತಿಂಗಳ ಏರಿಯರ್ಸ್ ಅನ್ನು ಕಳೆದುಕೊಳ್ಳಲಿದ್ದಾರೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?

ಸದ್ಯ 7 ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಸರಕಾರಿ ನೌಕರರ ವೇತನದಲ್ಲಿ ಬಾರೀ ಏರಿಕೆಯಾಗಲಿದೆ. ಮೂಲ ವೇತನದ ಜೊತೆಗೆ ತುಟ್ಟಿಭತ್ಯೆಯಲ್ಲಿಯೂ ಹೆಚ್ಚಳವಾಗಲಿದೆ. 6 ನೇ ವೇತನ ಆಯೋಗಕ್ಕೆ ಹೋಲಿಕೆ ಮಾಡಿದ್ರೆ ೭ನೇ ವೇತನ ಆಯೋಗದ ವರದಿಯಲ್ಲಿ ಕೇಂದ್ರ ಸರಕಾರಿ ನೌಕರರ ವೇತನಕ್ಕೆ ಸಮಾನವಾಗಿಸುವ ಉದ್ದೇಶವನ್ನು ಹೊಂದಲಾಗಿತ್ತು. ಆದ್ರೆ ಸಂಪೂರ್ಣವಾಗಿ ಕೇಂದ್ರ ಸರಕಾರಿ ನೌಕರರ ಸಮಾನ ವೇತನ ನೀಡಲಾಗದಿದ್ದರೂ ಕೂಡ ಗರಿಷ್ಠ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ : 7ನೇ ವೇತನ ಆಯೋಗದ ಶಿಫಾರಸ್ಸು ಅಗಸ್ಟ್ 1ರಿಂದಲೇ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್

7 ನೇ ವೇತನ ಆಯೋಗ ಹೆಚ್ಚಳದಿಂದ ಸರಕಾರಿ ನೌಕರರ ವೇತನದಲ್ಲಿ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮೂಲ ವೇತನ ಎಷ್ಟು ಹೆಚ್ಚಳವಾಗುತ್ತದೆ, ಜೊತೆಗೆ ತುಟ್ಟಿಭತ್ಯೆಯ ಜೊತೆಗೆ ನೌಕರರು ಸಪ್ಟೆಂಬರ್ ತಿಂಗಳಲ್ಲಿ ಎಷ್ಟು ಹೆಚ್ಚುವರಿ ವೇತನ ಪಡೆಯಲಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ಜೂನ್ ತಿಂಗಳ ಗೃಹಲಕ್ಷ್ಮೀ ಹಣ ಬಂದಿಲ್ವಾ ? ಕಾರಣ ಇಲ್ಲಿದೆ ನೋಡಿ

7th Pay Commission report How much increase in the salary of government employees? Here is the complete information