ಬಾಗಲಕೋಟೆ : close the liquor shop : ಈ ಮದ್ಯದ ನಶೆಯೆ ಹಾಗೆ. ಲೆಕ್ಕಕ್ಕಿಂತ ಹೆಚ್ಚು ಕಿಕ್ಕಿರೇರಿಸಿಕೊಂಡರೆ ಮರ್ಕಟನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗುತ್ತೆ. ಇಲ್ಲೊಬ್ಬ ಮದ್ಯಪ್ರಿಯ ಎಣ್ಣೆ ಹಾಕ್ಕೊಂಡೆ ಮದ್ಯ ಬಂದ್ ಮಾಡಿಸುವಂತೆ ಹೈಡ್ರಾಮ ಸೃಷ್ಟಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ನಡೆದಿದೆ.
ಕಾಕನೂರು ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂದು ಕಾಕಪ್ಪ ಮಾದಾರ ಎಂಬ ವ್ಯಕ್ತಿ ಆರೋಪಿಸಿ ಹೈಡ್ರಾಮ ಸೃಷ್ಟಿಸಿದ್ದಾನೆ. ಸ್ವತಃ ಸಾರಾಯಿ ಕುಡಿದು ಬಂದ ಕಾಕಪ್ಪ ಮಾದಾರ ಸಾರಾಯಿ ಬಂದ್ ಮಾಡಬೇಕೆಂದು ಪಂಚಾಯಿತಿ ಕಟ್ಟಡ ಏರಿದ್ದಾನೆ. ಸಾರಾಯಿ ಬಂದ್ ಮಾಡಿಸದಿದ್ದರೆ ಪಂಚಾತಿಯಲ್ಲೇ ನೇಣು ಹಾಕಿಕೊಂಡು ಸಾಯ್ತಿನಿ ಎಂದು ನೆರೆದವರಲ್ಲಿ ಬೆದರಿಸಿದ್ದಾನೆ. ನಾ ಮನೆ ಕೇಳಿಲ್ಲ ಹೊಲ ಕೇಳಿಲ್ಲ ಸಾರಾಯಿ ಮಾರಾಟ ಬಂದ್ ಮಾಡಿಸಿ ಎಂಬ ಬೇಡಿಕೆಯನ್ನು ಮುಂದಿಟ್ಟು ಪಂಚಾಯಿತಿ ಕಟ್ಟಡದ ಮೇಲೆ ಕೂತು ಹೈಡ್ರಾಮಾ ಸೃಷ್ಟಿಸಿದ್ದಾನೆ.
ಅರ್ಧ ಗಂಟೆಗೂ ಅಧಿಕ ಕಾಲ ಕೂತ ಕಾಕಪ್ಪ ಮಾದರ ಕೆಳಗಿಳಿಯಿವುದಕ್ಕೆ ಸುತರಾಂ ಒಪ್ಪಿಲ್ಲ. ಈತನ ಹೈಡ್ರಾಮಕ್ಕೆ ಹೈರಣಾದ ನಾಗರಿಕರು ನಂತರ ಗ್ರಾಮದ ಹಿರಿಯರು ಪಂಚಾಯಿತಿ ಮೇಲೇರಿ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಗ್ರಾಮದ ಹಿರಿಯರ ಮನವೊಲಿಕೆ ನಂತರ ಕಾಕಪ್ಪ ಕೆಳಗಿಳಿದಿದ್ದಾನೆ. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುವುದನ್ನು ಬಂದ್ ಮಾಡಿಸಿ ಎಂಬುದೇ ಈತನ ಬೇಡಿಕೆಯಾಗಿದ್ದು ಗ್ರಾಮದ ಹಿರಿಯರು ಈತನ ಬೇಡಿಕೆಗೆ ಧ್ವನಿಗೂಡಿಸುವ ಭರವಸೆಯನ್ನು ನೀಡಿದ್ದಾರೆ. ಎಣ್ಣೆ ಹಾಕ್ಕೊಂಡು ಎಣ್ಣೆ ಬಂದ್ ಮಾಡಿಸುವಂತೆ ಸೃಷ್ಟಿಸಿದ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು
ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ಸುರಿಯುತ್ತಿರುವ ರಣ ಮಳೆಗೆ ಬಾಳಿ ಬದುಕಬೇಕಿದ್ದ ಯುವತಿಯೊರ್ವಳು ಬಲಿಯಾಗಿದ್ದಾಳೆ. ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಬಳಿಯ ಸಿದ್ಧಾಪುರದ ನಿವಾಸಿ ಅಖಿಲಾ ಎಂಬ ಯುವತಿ ಬೆಂಗಳೂರಿನ ರಸ್ತೆ ಅವ್ಯವಸ್ಥೆ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರ ನಿವಾಸಿಯಾಗಿರೋ 23 ವರ್ಷದ ಅಖಿಲಾ ಸೋಮವಾರ ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಸಿದ್ಧಾಪುರ ಬಳಿ ಇರುವ ಮಯೂರ ಬೇಕರಿ ಬಳಿ ರಸ್ತೆ ಮೇಲೆ ಮಂಡಿಯುದ್ದಕ್ಕೆ ನೀರು ನಿಂತಿತ್ತು.
ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ಹೊರಟಿದ್ದು,ರಾತ್ರಿ 9.30 ಆಗಿರೋದರಿಂದ ಅಖಿಲಾ ಅದೇ ಮಳೆಯಲ್ಲೇ ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಮನೆಗೆ ಹೋಗೋ ಪ್ರಯತ್ನ ಮಾಡಿದ್ದಾಳೆ. ಈ ವೇಳೆ ರಸ್ತೆಯಲ್ಲಿ ನೀರು ಹೆಚ್ಚಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವಂತಾಗಿದೆ. ಈ ಸಮಯದಲ್ಲಿ,ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ಎಲೆಕ್ಟ್ರಿಕಲ್ ಪೋಲ್ ಹಿಡಿದುಕೊಂಡಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ.
ಇದನ್ನು ಓದಿ : prabhakar rane ex minister died : ಶಿಕ್ಷಕರ ದಿನಾಚರಣೆಯಂದೇ ಮಾಜಿ ಶಿಕ್ಷಣ ಸಚಿವ ಪ್ರಭಾಕರ ರಾಣೆ ವಿಧಿವಶ
ಇದನ್ನೂ ಓದಿ : HDFC Bank:ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ, ಹೊಸದಾಗಿ ಎಸ್‌ಎಂಎಸ್ ಬ್ಯಾಂಕಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ
A person protested by consuming alcohol to close the liquor shop