ಮಂಡ್ಯ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇತ್ತೀಚೆಗೆ ಟೋಲ್‌ಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು – ಮೈಸೂರು ಹೆದ್ದಾರಿಯ (Bangalore Mysore Expressway) ವಾಹನ ಸವಾರರಿಗೆ ಮತ್ತೊಂದು ಟೋಲ್ ಬರೆ ನಾಳೆಯಿಂದ ಪ್ರಯಾಣಿಕರಿಗೆ ಬೀಳಲಿದೆ. ನಾಳೆಯಿಂದ ಮಂಡ್ಯ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿರುವ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ.
ಮಂಡ್ಯ ಜಿಲ್ಲೆಯ 55.134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹ ನಾಳೆ ಶುರುವಾಗಲಿದೆ. ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾದಲ್ಲಿ ವಸೂಲಿ ಶುರುವಾಗಲಿದೆ. ಟೋಲ್‌ನ ಶುಲ್ಕ ಬೆಚ್ಚಿ ಬೀಳಿಸುವಂತಿದೆ. ಲೆಕ್ಕಾಚಾರ ಹಾಕಿದರೆ ಸ್ವಂತ ವಾಹನದಲ್ಲಿ ಹೋಗುವುದಕ್ಕಿಂತಲೂ ಸರಕಾರಿ ಬಸ್ಸಿನಲ್ಲಿ ಹೋದಂತೆ ಅಗ್ಗವಾಗುವ ಸಾಧ್ಯತೆ ಇದೆ. ಇನ್ನು ಈ ಟೋಲ್ ಪ್ಲಾಜ್‌ಗಳಲ್ಲಿ ಯಾವೆಲ್ಲಾ ವಾಹನಗಳಿಗೆ ಎಷ್ಟೆಷ್ಟು ದರ ನಿಗದಿಯಾಗಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.
ಟೋಲ್ ಶುಲ್ಕ ವಿವರ :
ಏಕಮುಖ ಸಂಚಾರ :
- ಕಾರು, ಜೀಪು, ವ್ಯಾನು : ರೂ. 155
- ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ : ರೂ. 250
- ಟ್ರಕ್/ಬಸ್ (ಎರಡು ಆಕ್ಸೆಲ್‌ಗಳಿದ್ದು) : ರೂ. 525
- ಮೂರು ಆಕ್ಸಿಲ್ ವಾಣಿಜ್ಯ ವಾಹನ : ರೂ. 525
- ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4 ರಿಂದ 6 ಆಕ್ಸೆಲ್‌ಗಳಿದ್ದು) : ರೂ. 825
- ದೊಡ್ಡ ಗಾತೆರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳಿದ್ದು) : ರೂ. 1005
ಅದೇ ದಿನ ವಾಪಸ್ಸು :
- ಕಾರು, ಜೀಪು, ವ್ಯಾನು : ರೂ. 235
- ಲಘು ವಾಣಿಜ್ಯ ವಾಹನ, ಲಘ ಸರಕು ವಾಹನ /ಮಿನಿ ಬಸ್ : ರೂ. 375
- ಟ್ರಕ್/ಬಸ್ (ಎರಡು ಆಕ್ಸೆಲ್‌ಗಳಿದ್ದು) : ರೂ. 790
- ಮೂರು ಆಕ್ಸೆಲ್ ವಾಣಿಜ್ಯ ವಾಹನ : ರೂ. 860
- ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4 ರಿಂದ 6 ಆಕ್ಸೆಲ್‌ಗಳದ್ದು) : ರೂ. 1240
- ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) : ರೂ. 1510
ಇದನ್ನೂ ಓದಿ : Karnataka SSLC Supplementary Result 2023 : ಇಂದು ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಫಲಿತಾಂಶ ಪ್ರಕಟ
ಇದನ್ನೂ ಓದಿ : Heavy Rainfall Alert : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರ ವರೆಗೆ ಭಾರೀ ಮಳೆ ಸಾಧ್ಯತೆ
ಮಂಡ್ಯ ಜಿಲ್ಲೆ ಒಳಗೆ :
- ಕಾರು, ಜೀಪು, ವ್ಯಾನು : ರೂ. 80
- ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ : ರೂ. 125
- ಟ್ರಕ್/ಬಸ್ ಎರಡು ಆಕ್ಸೆಲ್‌ಗಳದ್ದು : ರೂ. 265
- ಮೂರು ಆಕ್ಸೆಲ್ ವಾಣಿಜ್ಯ ವಾಹನ : ರೂ. 285
- ಭಾರೀ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4 ರಿಂದ 6 ಆಕ್ಸೆಲ್‌ಗಳದ್ದು) : ರೂ. 415
- ದೊಡ್ಡ ಗಾತ್ರದ ವಾಹನ (೭ ಅಥವಾ ಹೆಚ್ಚು ಆಕ್ಸೆಲ್‌ಗಳದ್ದು : ರೂ. 505
Bangalore Mysore Expressway: Toll started on both sides of Mysore-Bangalore highway: Write again to passengers