ಭಾನುವಾರ, ಏಪ್ರಿಲ್ 27, 2025
Homekarnataka4 ಗಂಟೆಯ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಖರ್ಚು ಮಾಡಿದ್ದು 23 ಕೋಟಿ !

4 ಗಂಟೆಯ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಖರ್ಚು ಮಾಡಿದ್ದು 23 ಕೋಟಿ !

- Advertisement -

ಬೆಂಗಳೂರು : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆ ನೆಪದಲ್ಲಿ ಬರೋಬ್ಬರಿ ಎರಡು ಮೂರು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi program) ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದರು. ಎರಡು ದಿನಗಳ ಕಾಲ ರಾಜ್ಯ ರಾಜಧಾನಿ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೋದಿ ಪ್ರವಾಸ ನಡೆಸಿ ದೆಹಲಿಗೆ ಮರಳಿದ್ದಾರೆ. ಈ ಮಧ್ಯೆ ಮೋದಿ ಬೆಂಗಳೂರಿನಲ್ಲಿ ವ್ಯಯಿಸಿದ ಕೆಲವೇ ಗಂಟೆಗಳಿಗೆ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಅನುದಾನ ಖರ್ಚು ಮಾಡಿದೆ. ಹಾಗಿದ್ದರೇ ಮೋದಿಗಾಗಿ ಪಾಲಿಕೆ ಮಾಡಿದ ಖರ್ಚೆಷ್ಟು ಇಲ್ಲಿದೆ ಡಿಟೇಲ್ಸ್.

ದೇಶದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಎರಡು ದಿನಗಳ‌ಪ್ರವಾಸಕ್ಕಾಗಿ ಆಗಮಿಸಿದ್ದರು. ರೇಲ್ವೈ ಟರ್ಮಿನಲ್, ಆಸ್ಪತ್ರೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿದರು. ಈ ಮಧ್ಯೆ ಬೆಂಗಳೂರಿಗೆ ಮೋದಿ ಬಂದಿದ್ದು, ಇದ್ದಿದ್ದು ಕೆಲವೇ ಗಂಟೆ. ಆದರೆ ಈ ಕೆಲವೇ ಗಂಟೆಗಳ ಕಾರ್ಯಕ್ರಮಕ್ಕೆ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಅನುದಾನ ಖರ್ಚು ಮಾಡಿದೆ.

ಬೆಂಗಳೂರಲ್ಲಿ ಮೋದಿ ಇದ್ದಿದ್ದು ಕೇವಲ 4.30 ಗಂಟೆ. ಇದಕ್ಕಾಗಿ ಪಾಲಿಕೆ ಬರೋಬ್ಬರಿ‌ 23 ಕೋಟಿ ಖರ್ಚು ಮಾಡಿದೆ. ರಸ್ತೆ, ಮೂಲಭೂತ ಸೌಕರ್ಯ, ಇತರೆ ಸೌಕರ್ಯಗಳಿಗಾಗಿ ಬಿಬಿಎಂಪಿಯಿಂದ 23 ಕೋಟಿ ಖರ್ಚು ಮಾಡಿದೆ. ಮೋದಿ ಇದ್ದ 4.30 ಗಂಟೆಗೆ ಬಿಬಿಎಂಪಿ ಖರ್ಚು ಮಾಡಿದ ಹಣವನ್ನು ಲೆಕ್ಕಾ ಹಾಕೋದಾದರೇ ಮೋದಿ ಬೆಂಗಳೂರಿನಲ್ಲಿದ್ದ ಪ್ರತಿ ನಿಮಿಷಕ್ಕೆ ಪಾಲಿಕೆ 5 ಲಕ್ಷದ 18 ಸಾವಿರದ 518 ರೂಪಾಯಿ ಪಾಲಿಕೆಯಿಂದ ಖರ್ಚು ಮಾಡಿದೆ.

ಮೋದಿಗಾಗಿ ಮುಖ್ಯ ಆಯುಕ್ತರ ನಿಧಿ, ಆಡಳಿತಗಾರರ ನಿಧಿ ಹಾಗೂ ಇತರೆ ನಿಧಿಯಿಂದ ಪಾಲಿಕೆ ಖರ್ಚು ಮಾಡಿರುವ ಬಿಬಿಎಂಪಿ ಪ್ರಧಾನಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ಖುಷಿಯಲ್ಲಿದೆ. ಮೋದಿ ಏರ್ಪೋರ್ಟ್ ನಿಂದ ಬರುವ ರಸ್ತೆಗಳನ್ನು ರಿಪೇರಿ ಮಾಡಲಾಗಿದ್ದು, ಡಾಂಬರೀಕರಣಕ್ಕೆ 14 ಕೋಟಿ ವ್ಯಯಿಸಿದೆ. ಗುಂಡಿ ಹೊಂಡಗಳನ್ನು ತುಂಬಿ ಪೇಂಟ್ ಬಳಿಯಲಾಗಿತ್ತು. ಇದಲ್ಲದೇ ಮೋದಿ ಕಾರ್ಯಕ್ರಮವಿದ್ದ ಕೊಮ್ಮಘಟ್ಟ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ರಸ್ತೆ ರಿಪೇರಿ ಮಾಡಿ ಮೋದಿ ಕಾರ್ಯಕ್ರಮಕ್ಕೆ ನಗರ ಕಂಗೊಳಿಸುವಂತೆ ಮಾಡಲು 9 ಕೋಟಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ.

ಆದರೆ ಇದು ಅನಗತ್ಯ ದುಂದು ವೆಚ್ಚ. ‌ನಗರದಾದ್ಯಂತ ರಸ್ತೆಗಳು ಗುಂಡಿಮಯವಾಗಿದ್ದು, ಜನರು ಓಡಾಡೋದೆ ಕಷ್ಟ ಎಂಬ ಸ್ಥಿತಿ ಇದೆ. ಆದರೂ ಬಿಬಿಎಂಪಿ ತಲೆಕೆಡಿಸಿಕೊಂಡಿಲ್ಲ. ಆದರೆ ಕೆಲವೇ ಗಂಟೆಗಳ ಮೋದಿ ಕಾರ್ಯಕ್ರಮಕ್ಕಾಗಿ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಹಾಗಿದ್ದರೇ ಮತ ಹಾಕಿದ ಜನರಿಗೆ ಬೆಲೆ ಇಲ್ಲವೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ : Ayodhya Ram Mandir : ರಾಮಮಂದಿರ ನಿರ್ಮಾಣ ಸಮಿತಿಗೆ ಶಾಕ್ : ದೇಣಿಗೆ ಮೊತ್ತದ 22 ಕೋಟಿ ರೂ. ಚೆಕ್ ತಿರಸ್ಕೃತ

ಇದನ್ನೂ ಓದಿ : international yoga day : ಅಂತಾರಾಷ್ಟ್ರೀಯ ಯೋಗ ದಿನ : ಮೈಸೂರಿನಲ್ಲಿ ನಮೋ ಯೋಗಾಯೋಗ

BBMP spent Rs 23 crore on the 4 Hours Prime Minister Narendra Modi program

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular