ಮಂಗಳೂರು : ಚಲಿಸುತ್ತಿದ್ದ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡಿದ್ದು (Bike Petrol Tank Blast), ಬೈಕ್ ಹಾಗೂ ಖಾಸಗಿ ಬಸ್‌ಗೆ ಬೆಂಕಿ ತಲುಗಿದ ಘಟನೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಬಸ್ಸಿನಲ್ಲಿದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಮಂಗಳೂರು ನಗರದ ಹಂಪನಕಟ್ಟೆಯ ಬಳಿಯಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಬೈಕ್ ಟ್ಯಾಂಕ್ ಒಮ್ಮಿಂದೊಮ್ಮೆಲೆ ಸ್ಪೋಟಗೊಂಡಿದ್ದು ಬೆಂಕಿ ಹತ್ತಿಕೊಂಡಿದೆ. ಈ ವೇಳೆಯಲ್ಲಿ ಪಕ್ಕದಲ್ಲಿಯೇ ಇದ್ದ ಬಸ್‌ಗೆ ಕೂಡ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬಸ್ ಸಿಬ್ಬಂದಿಗಳು ಕೆಳಗೆ ಇಳಿಸಿದ್ದಾರೆ. ಸ್ವಲ್ಪ ಹೊತ್ತಲ್ಲೇ ಬೆಂಕಿಯ ತೀವ್ರತೆ ಹೆಚ್ಚುತ್ತಿದ್ದಂತೆಯೇ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಬಸ್ಸಿನ ಮುಂಭಾಗ ಬೆಂಕಿಗೆ ಆಹುತಿಯಾಗಿದೆ.
Bike Petrol Tank blast in Mangalore Fire destroys private bus#mangalore #busfire #BIGBREAKING pic.twitter.com/gCOTTdYO6J
— news next (@newsnext4) April 8, 2022
ಘಟನೆಯಿಂದಾಗಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಬಸ್ಸಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಬೈಕ್ ಸವಾರರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಮಂಗಳೂರಲ್ಲಿ ಬೈಕ್ ಟ್ಯಾಂಕರ್ ಸ್ಪೋಟ, ಖಾಸಗಿ ಬಸ್‌ಗೆ ಬೆಂಕಿ #mangalore #busfire pic.twitter.com/kgyd2W4xF5
— news next (@newsnext4) April 8, 2022
ಇದನ್ನೂ ಓದಿ : AC Blast : ಎಸಿ ಸ್ಪೋಟ, ಒಂದೇ ಕುಟುಂಬದ ನಾಲ್ವರ ದುರ್ಮರಣ
ಇದನ್ನೂ ಓದಿ : ಮಾಂಸ ವ್ಯವಹಾರ ಅನ್ಯ ಮತೀಯ ರಿಗೆ ಕೊಡಬೇಡಿ : ಹಿಂದವೀ ಮಾರ್ಟ್ ನ್ಯೂ ಆಫರ್
Bike Petrol Tank blast in Mangalore Fire destroys private bus