ಬೆಂಗಳೂರು : ಬಿಟ್ ಕಾಯಿನ್ (Bitcoin) ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಇದೀಗ ಪ್ರಕರಣದ ತನಿಖೆಯ ವೇಳೆಯಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಲ್ಯಾಪ್‌ಟಾಪ್ ನಲ್ಲಿ ಬರೋಬ್ಬರಿ ಬಿಟ್ ಕಾಯಿನ್ ಅಕೌಂಟ್ ಪ್ರವೇಶಿಸಲು ಬಳಸುವ 76ಲಕ್ಷ ಪ್ರೈವೇಟ್ ಕೀಗಳು ಪತ್ತೆಯಾಗಿದೆ.
ಹೌದು, ಬೆಂಗಳೂರಿನಲ್ಲಿ ನಡೆದಿದ್ದ ಹಲ್ಲೆ ಪ್ರಕರಣದ ಆರೋಪದಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಇದೀಗ ವೆಬ್‌ಸೈಟ್ ಹ್ಯಾಕಿಂಗ್ ಮೂಲಕ ಬಿಟ್ ಕಾಯಿನ್ ದಂಧೆ ನಡೆಸಿರೋದು ಬಯಲಾಗಿದೆ. ಈಗಾಗಲೇ ಸಿಸಿಬಿ ಅಧಿಕಾರಿ ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕಂಪೆನಿಗಳಿಗೆ ಪತ್ರ ಬರೆದು ಉತ್ತರ ನೀಡುವಂತೆ ಕೋರಿದ್ದಾರೆ. ಆದರೆ ಕೇವಲ ಜಪಾನ್ ಮೂಲದ ಕಂಪೆನಿ ಮಾತ್ರವೇ ಉತ್ತರವನ್ನು ನೀಡಿದ್ದು, ಬಿಟ್ ಕಾಯಿನ್ ಕಳುವಿನ ಸುಳಿವು ನೀಡಿದೆ.
ಇನ್ನೊಂದೆಡೆಯಲ್ಲಿ ಶ್ರೀಕಿ ವಿವಿಧ ಬಿಟ್ ಕಾಯಿನ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದು ಬಯಲಾಗಿದೆ. ಶ್ರೀಕಿ ಬಳಸುತ್ತಿದ್ದ ಲ್ಯಾಪ್‌ಟಾಪ್ ವಶಕ್ಕೆ ಪಡೆದಿರುವ ಪೊಲೀಸರು ಲ್ಯಾಪ್‌ಟಾಪ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ಲೇಷಣಾ ವರದಿ ಬಹಿರಂಗವಾಗಿದೆ. ಬಿಟ್ ಕಾಯಿನ್ ಅಕೌಂಟ್ ಪ್ರವೇಶಿಸಿಲು ಶ್ರೀಕಿ ಸುಮಾರು ೭೬ ಲಕ್ಷ ಪ್ರೈವೇಟ್ ಕೀಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ. ಶ್ರೀಕಿಯ ಕ್ಲೌಡ್ ಅಕೌಂಟ್ ನಲ್ಲಿ 27 ಇ ವ್ಯಾಲೆಟ್, ಪ್ರೈವೇಟ್ ಕೀ, ವಿಳಾಸಗಳು ಪತ್ತೆಯಾಗಿದೆ. ಇನ್ನು ಬಿಟ್‌ಕಾಯಿನ್ ವಹಿವಾಟಿಗೆ ಬಳಸುವ ‘ಬಿಟ್‌ಕಾಯಿನ್ ಕೋರ್’ ಎಂಬ ತಂತ್ರಾಂಶ ಹ್ಯಾಕ್ ಮಾಡಿರುವುದು ಪತ್ತೆಯಾಗಿದೆ.
ಬಿಟ್ ಕಾಯಿನ್ ವೆಬ್ ಸೈಟ್ ಹ್ಯಾಕಿ ಮಾಡಿ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಗೆ ಸೇರಿದ ಅಮೆಜಾನ್ ವೆಬ್ ಸರ್ವಿಸ್ ಖಾತೆ, ಕ್ಲೌಡ್ ಅಕೌಂಟ್ ವಿಶ್ಲೇಷಣೆ ನಡೆಸಲಾಗುತ್ತಿದೆ. ಸೈಬರ್ ಐಡಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಆರೋಪಿ ಲ್ಯಾಪ್ ಟ್ಯಾಪ್ ವಿಶ್ಲೇಷಣೆ ನಡೆಯುತ್ತಿದೆ. ಇನ್ನು ತನಿಖೆಯ ವೇಳೆಯಲ್ಲಿ ಅಧಿಕಾರಿಗಳ ಹಾದಿಯನ್ನೇ ತಪ್ಪಿಸಲು ಶ್ರೀಕಿ ಯತ್ನಿಸಿದ್ದ ಅನ್ನೋ ಮಾಹಿತಿ ಬಯಲಾಗಿದೆ. ಅಷ್ಟೇ ಅಲ್ಲಾ ಬಿಟ್ ಕಾಯಿನ್ ಕೋರ್ ತಂತ್ರಾಂಶವನ್ನೇ ಹ್ಯಾಕ್ ಮಾಡಿ ತಿರುಚಿರುವ ಸಾಧ್ಯತೆಯೂ ಇದೆ. ಶ್ರೀಕಿ ಖಾತೆಯಲ್ಲಿದ್ದ ಸುಮಾರು 31 ಬಿಟ್ ಕಾಯಿನ್ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ ಶ್ರೀಕಿ ಖಾತೆಯಿಂದ ಪೊಲೀಸ್ ವ್ಯಾಲೆಟ್ ಗೆ ಬಿಟ್ ಕಾಯಿನ್ ವರ್ಗಾವಣೆ ಮಾಡಲು ಸಾಧ್ಯವಾಗಿರಲಿಲ್ಲ ಅನ್ನೋದು ತಿಳಿದು ಬಂದಿದೆ.
ಪೊಲೀಸರು ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ವರ್ಗಾಯಿಸಲು ಮುಂದಾಗುತ್ತಿದ್ದಂತೆಯೇ ಶ್ರೀ ತನ್ನ ವ್ಯಾಲೆಟ್ ಮೂಲ ಕೋಡ್ ಅನ್ನೇ ಬದಲಿಸಿರುವ ಸಾಧ್ಯತೆಯಿದೆ. ಅಲ್ಲದೇ ತನ್ನ ಖಾತೆಯಿಂದ ಹೊರಗೆ ಹೋಗಿರುವ ಬಿಟ್ ಕಾಯಿನ್ ಅನ್ನು ಮರಳಿ ತನ್ನ ಖಾತೆಗೆ ಬರುವಂತೆ ಮಾಡಿರುವ ಸಾಧ್ಯತೆಯೂ ಇದೆ. ಸದ್ಯ ಪೊಲೀಸರು ಎಲ್ಲಾ ಕಡೆಯಿಂದಲೂ ತನಿಖೆಯನ್ನು ನಡೆಸುತ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶ್ರೀಕಿ ಮಾಧ್ಯಮದ ಮುಂದೆ ತಾನೇನು ಮಾಡಿಲ್ಲ ಅಂತಾ ಹೇಳಿಕೊಳ್ಳುತ್ತಿದ್ದರೂ ಕೂಡ, ಶ್ರೀ ನಡೆಸಿರುವ ಒಂದೊಂದೇ ದಂಧೆ ಬಯಲಾಗುತ್ತಲೇ ಇದೆ. ಒಟ್ಟಿನಲ್ಲಿ ಪೊಲೀಸರ ತನಿಖೆಯಿಂದಷ್ಟೆ ಸತ್ಯಾಂಶ ಹೊರಬರೋದಕ್ಕೆ ಸಾಧ್ಯ.
ಇದನ್ನೂ ಓದಿ : Bitcoin Case : 12 ಬಿಟ್ ಕಾಯಿನ್ ಎಕ್ಸ್‌ಚೇಂಜ್‌ಗಳಿಗೆ ಪತ್ರ ಬರೆದಿದ್ದ ಸೈಬರ್ ಕ್ರೈಂ ಪೊಲೀಸರು
ಇದನ್ನೂ ಓದಿ : Bitcoin Case : ಕುತೂಹಲ ಹೆಚ್ಚಿಸಿದೆ ಬಿಟ್ ಕಾಯಿನ್ ಪ್ರಕರಣ : ಅಷ್ಟಕ್ಕೂ ಆರೋಪಿಗಳು ಕೊಟ್ಟ ಹೇಳಿಕೆಯಲ್ಲೇನಿದೆ
( Bitcoin case : Explosive mystery unearthed on Sriki’s laptop)