ಸೋಮವಾರ, ಏಪ್ರಿಲ್ 28, 2025
Homekarnatakaಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಬಾರೀ ಬೇಡಿಕೆ: ಕ್ಷೇತ್ರದ ಪ್ರಚಾರಕ್ಕೆ ರಾಜಾಹುಲಿ ಬೆನ್ನು ಬಿದ್ದ ಶಾಸಕರು

ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಬಾರೀ ಬೇಡಿಕೆ: ಕ್ಷೇತ್ರದ ಪ್ರಚಾರಕ್ಕೆ ರಾಜಾಹುಲಿ ಬೆನ್ನು ಬಿದ್ದ ಶಾಸಕರು

- Advertisement -

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಾವುಜೋರಾಗಿದೆ. ಹಾಲಿ ಶಾಸಕರು, ಟಿಕೇಟ್ ಆಕಾಂಕ್ಷಿಗಳು ವಿಧಾನಸೌಧದ ಮೆಟ್ಟಿಲೇರಲು ಇನ್ನಿಲ್ಲದ ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ ಬಿಜೆಪಿ ಯಲ್ಲಿ ಸಿಎಂ ಸ್ಥಾನದಿಂದ ಕೆಳಕ್ಕಿಳಿದರೂ ರಾಜಾಹುಲಿಯ ವರ್ಚಸ್ಸು ಕಡಿಮೆಯಾಗಿಲ್ಲ. ಹೀಗಾಗಿ ಪ್ರಚಾರಕ್ಕೆ ಬಿಜೆಪಿ ಶಾಸಕರು, ಸಚಿವರು, ಟಿಕೇಟ್ ಆಕಾಂಕ್ಷಿಗಳು ಬಿ.ಎಸ್.ಯಡಿಯೂರಪ್ಪ (BS Yeddyurappa‌) ಬರಬೇಕೆಂದು ದುಂಬಾಲು ಬೀಳುತ್ತಿದ್ದಾರಂತೆ.

ಹೌದು ಬಿಜೆಪಿ ಹಾಗೂ ರಾಜ್ಯ ರಾಜಕಾರಣ ಎರಡರಲ್ಲೂ ಯಡಿಯೂರಪ್ಪನವರಿಗೆ ವಿಶೇಷವಾದ ಸ್ಥಾನವಿದೆ. ರಾಜಕೀಯ ಸ್ಥಿತ್ಯಂತರಗಳಲ್ಲಿ ಬಿಎಸ್ವೈ (BS Yeddyurappa‌) ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿದರೂ ಬಿಜೆಪಿ ನಾಯಕರು ಹಾಗೂ ಶಾಸಕರುಗಳು ಬಿಎಸ್ವೈ ಗೆ ಕೊಡುವ ಗೌರವ ಹಾಗೂ ಪ್ರಾಧಾನ್ಯತೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಯಾಕೆಂದರೇ ರಾಜ್ಯದಲ್ಲಿ ಯಡಿಯೂರಪ್ಪ ನವರಿಗೆ ಇರುವ ರಾಜಕೀಯ ಹಿಡಿತ. ಏಕಾಂಗಿಯಾಗಿ ಪಕ್ಷದ ಹೊಣೆ ಹೊತ್ತು ರಾಜ್ಯದಾದ್ಯಂತ ಸಂಚಾರ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದು ನಾಲ್ಕು ಭಾರಿ ಸಿಎಂ ಸ್ಥಾನಕ್ಕೇರಿದ ಬಿಎಸ್ವೈ ಎಲ್ಲ ಸಮುದಾಯದ ನಾಯಕ ಮಾತ್ರವಲ್ಲ ಲಿಂಗಾಯತ ಸಮುದಾಯದ ದೊಡ್ಡ ಶಕ್ತಿ.

ಈಗ ಬಿಎಸ್ವೈ ಮುಖ್ಯಮಂತ್ರಿ ಅಲ್ಲದಿದ್ದರೂ ಪಕ್ಷದಲ್ಲಿ ಹಾಗೂ ಜನರ ಮನಸ್ಸಿನಲ್ಲಿ ತಮ್ಮದೇ ಆದ ಗೌರವ ಹಾಗೂ ಅಭಿಮಾನ ಉಳಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಚುನಾವಣೆ ಬರುತ್ತಿದ್ದಂತೆ ಮತ್ತೆ ಬಿಎಸ್ವೈ ಗೆ ಬೇಡಿಕೆ ಹೆಚ್ಚಿದೆ. ಇದುವರೆಗೂ ಮೋದಿ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದಿದ್ದ ಬಿಜೆಪಿ ಶಾಸಕರು, ಆಕಾಂಕ್ಷಿತರು ಈಗ ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದಾರಂತೆ. ಪಕ್ಷದ ಪ್ರಚಾರ ಸಮಿತಿ ಹಾಗೂ ಹೈಕಮಾಂಡ್ ಬಳಿ ತಮ್ಮ ತಮ್ಮ ಕ್ಷೇತ್ರದ ಪ್ರಚಾರಕ್ಕೆ ಯಡಿಯೂರಪ್ಪನವರನ್ನು ಕಳಿಸುವಂತೆಯೇ ಬೇಡಿಕೆ ಇಟ್ಟಿದ್ದಾರಂತೆ.

ಈಗಾಗಲೇ ಕೆಲ ಶಾಸಕರು ವೈಯಕ್ತಿಕವಾಗಿ ಬಿಎಸ್ವೈ ರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವಂತೆ ಮನವಿ ಮಾಡ್ತಿದ್ದಾರಂತೆ. ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಅವರಂತೆ ಬಿಜೆಪಿಯಲ್ಲಿ ಬಿಎಸ್ವೈ ತಮ್ಮ ಪ್ರಭಾವ ಹೊಂದಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಮಟ್ಟಿಗಂತೂ ಬಿಎಸ್ವೈ (BS Yeddyurappa‌) ಮಾತು ಪ್ರಭಾವಶಾಲಿಯಾಗಿದೆ. ಹೀಗಾಗಿ ಬಿಎಸ್ವೈ ಬಿಜೆಪಿಯ ಸ್ಟಾರ್ ಪ್ರಚಾರಕರು ಮಾತ್ರವಲ್ಲ ಬಿಎಸ್ವೈ ಹೆಸರೇ ಸ್ಟಾರ್ ಗಿರಿ ಹೊಂದಿದೆ. ಇದೇ ಕಾರಣಕ್ಕೆ ಬಿಎಸ್ವೈ ರಾಜಾಹುಲಿ ಎಂಬಂತೆ ಬಿಜೆಪಿಯ ನಾಯಕರನ್ನು ನಡುಗಿಸುತ್ತಿದ್ದಾರೆ. ಆದರೇ ಬಿಜೆಪಿ ನಾಯಕರು ಮಾತ್ರ ಬಿಎಸ್ವೈ ರನ್ನು ಎಲ್ಲ ಕ್ಷೇತ್ರಗಳಿಗೆ ಕಳುಹಿಸದೇ ಕೇವಲ ಅಗತ್ಯವಿರುವ ಕ್ಷೇತ್ರಗಳಿಗೆ ಮಾತ್ರ ಕಳಿಸಿ ಗೆಲುವಿನ ಪ್ರಮಾಣ ಹೆಚ್ಚಿಸುವ ಲೆಕ್ಕಾಚಾರದಲ್ಲಿದ್ದಾರಂತೆ.

ಇದನ್ನೂ ಓದಿ : ಸುಮಲತಾ ಮನವೊಲಿಸಲು ಆರ್.ಅಶೋಕ್ ಕಸರತ್ತು: ಪಕ್ಷ ಕ್ಕೆ ಸೆಳೆಯಲು ಟಿಕೇಟ್ ಆಫರ್

ಇದನ್ನೂ ಓದಿ : Bhavani Revanna enters politics: ದೇವೇಗೌಡರ ಫ್ಯಾಮಿಲಿ ಪಾಲಿಟಿಕ್ಸ್ ಗೆ ಹೊಸ ಎಂಟ್ರಿ: ಭವಾನಿ ಸ್ಪರ್ಧೆ ಎಚ್ಡಿಕೆ ಗೆ ತಲೆನೋವು

English News Click Here

BJP MLAs who have turned their backs on BS Yeddyurappa for assembly election campaign

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular