ಸೋಮವಾರ, ಏಪ್ರಿಲ್ 28, 2025
Homekarnatakaಮರವಂತೆಯಲ್ಲಿ ಸಮುದ್ರಕ್ಕೆ ಉರುಳಿದ ಕಾರು : ಇಬ್ಬರು ಪಾರು ಓರ್ವ ಸಾವು

ಮರವಂತೆಯಲ್ಲಿ ಸಮುದ್ರಕ್ಕೆ ಉರುಳಿದ ಕಾರು : ಇಬ್ಬರು ಪಾರು ಓರ್ವ ಸಾವು

- Advertisement -

ಕುಂದಾಪುರ : ಸಮುದ್ರಕ್ಕೆ ಕಾರು ಉರುಳಿ (Car fell sea) ಓರ್ವ ಸಾವನ್ನಪ್ಪಿ, ಮತ್ತೋರ್ವ ಸಮುದ್ರ ಪಾಲಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರ ತೀರದಲ್ಲಿ ನಡೆದಿದೆ.

Car fell sea one died maravanthe beach Udupi

ಕೋಟೇಶ್ವರ ಗ್ರಾಮದ ನಿವಾಸಿ ವೀರಾಜ್ ಆಚಾರ್ಯ (28 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ನಿನ್ನೆ ಸಂಜೆಯ ವೇಳೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಮರವಂತೆ ಬೀಚ್‌ ಬಳಿಗೆ ಬರುತ್ತಿದ್ದ ವೇಳೆಯಲ್ಲಿ ಕಾರು ಸಮುದ್ರಕ್ಕೆ ಹಾರಿದೆ. ಈ ವೇಳೆಯಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ.

Car fell sea one died maravanthe beach Udupi

ಸ್ಥಳಕ್ಕೆ ಬಂದ ಬೈಂದೂರು ಅಗ್ನಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಚರಣೆಯನ್ನು ನಡೆಸಿದ್ದು, ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ವೀರಾಜ್ ಆಚಾರ್ಯ ಸಾವನ್ನಪ್ಪಿದ್ದರೆ, ಮತ್ತೋರ್ವ ಸಮುದ್ರ ಪಾಲಾಗಿದ್ದಾನೆ. ಆದ್ರೆ ಸಮುದ್ರದ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

Car fell sea one died maravanthe beach Udupi

ಸಮುದ್ರ ಪಾಲಾದವನಿಗಾಗಿ ಶೋಧ ನಡೆಸಲಾಗುತ್ತಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ದಿನಗಳಿಂದಲೂ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲಾ ಜಲಾವೃತವಾಗಿದೆ. ಇದೀಗ ಅಪಘಾತಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತೆ ಸಾವು : ಬಾಯ್​ಫ್ರೆಂಡ್​ ಬಂಧನ

ತಮಿಳುನಾಡು ಹದಿಹರೆಯದ ವಯಸ್ಸಿನಲ್ಲಿ ಎಷ್ಟು ಜಾಗರೂಕೆಯಿಂದ ಇದ್ದರೂ ಕೂಡ ಕಡಿಮೆಯೇ. ಪೋಷಕರು ಎಷ್ಟೇ ಜಾಗೃತಿ ವಹಿಸಿದ್ದರೂ ಸಹ ಕೆಲವೊಮ್ಮೆ ಮಕ್ಕಳು ಕೈ ತಪ್ಪಿ ಹೋಗುತ್ತಾರೆ. ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಹದಿಹರೆಯದ ಮಕ್ಕಳ ಜೀವನವನ್ನೇ ಹಾಳು ಮಾಡಿಬಿಡಬಹುದು. ಅಥವಾ ಕೆಲವು ಪ್ರಸಂಗಳಲ್ಲಿ ಜೀವ ಹೋಗಲೂ ಬಹುದು. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನಲ್ಲಿ 15 ವರ್ಷದ ಬಾಲಕಿಯೊಬ್ಬಳು ಗರ್ಭಪಾತದ ಮಾತ್ರೆಯನ್ನು ಸೇವಿಸಿದ ಪರಿಣಾಮ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ತಿರುವಮಲೈ ಜಿಲ್ಲೆಯ ಚೆಂಗಂ ಎಂಬಲ್ಲಿ ಈ ಘಟನೆ ಸಂಭವಿಸಿದೆ. 27 ವರ್ಷದ ಮುರುಗನ್​ ಎಂಬಾತನಿಂದ ಗರ್ಭವತಿಯಾಗಿದ್ದ ಈಕೆ ಗರ್ಭಪಾತ ಮಾಡಿಸಿಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾಳೆ.

ಮುರುಗನ್​ ಪ್ರತಿ ನಿತ್ಯ ಈ ಬಾಲಕಿಯನ್ನು ಆಕೆಯ ಶಾಲೆಗೆ ಡ್ರಾಪ್​ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಅದು ಕಾಲಾತಂತರದಲ್ಲಿ ದೈಹಿಕ ಸಂಪರ್ಕದವರೆಗೂ ಹೋಗಿತ್ತು. ಕೆಲವು ದಿನಗಳ ಹಿಂದೆ ಬಾಲಕಿ ಗರ್ಭ ಧರಿಸಿದ್ದಳು. ಮುರುಗನ್​ ತನ್ನ ಸ್ನೇಹಿತ ಪ್ರಭು ಎಂಬಾತ ನೀಡಿದ ಸಲಹೆಯ ಮೇರೆಗೆ ಬಾಲಕಿಗೆ ಗರ್ಭಪಾತದ ಮಾತ್ರೆಯನ್ನು ನೀಡಿದ್ದಾನೆ. ಶಾಲೆಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಬಾಲಕಿಯನ್ನು ಮುರುಗನ್​ ಆಕೆಯ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದ. ಮಾರ್ಗ ಮಧ್ಯದಲ್ಲಿ ಆಕೆಗೆ ಗರ್ಭಪಾತದ ಮಾತ್ರೆ ಸೇವಿಸುವಂತೆ ಹೇಳಿದ್ದಾನೆ. ಗರ್ಭಪಾತದ ಮಾತ್ರೆ ಸೇವಿಸಿ ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಬಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಮುರುಗನ್​ ಬಾಲಕಿಯನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಮುರುಗನ್​ಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗೆಂದು ಬಾಲಕಿಯ ಮೃತದೇಹವನ್ನು ತಿರುವನಮಲೈ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

ಇದನ್ನೂ ಓದಿ : Electricity Bill Scam : ಎಚ್ಚರ ! ವಿದ್ಯುತ್ತ ಬಿಲ್‌ ಕಟ್ಟಿ ಎಂದೂ ನಿಮ್ಮ ಹಣ ದೋಚಬಹುದು!!

ಇದನ್ನೂ ಓದಿ : Earthquake in Kodagu: ಕೊಡಗಿನಲ್ಲಿ ಮತ್ತೆ ಭೂಕಂಪನ ; ಆತಂಕದಲ್ಲಿ ಜನತೆ

Car fell sea one died maravanthe beach Udupi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular