ಸೋಮವಾರ, ಏಪ್ರಿಲ್ 28, 2025
HomekarnatakaChairman Fight BJP : ಬಿಜೆಪಿಯಲ್ಲಿ ಸಭಾಪತಿ ಹುದ್ದೆ ಫೈಟ್: ಹೊರಟ್ಟಿ ಬದಲು ಮಲ್ಕಾಪುರೆ...

Chairman Fight BJP : ಬಿಜೆಪಿಯಲ್ಲಿ ಸಭಾಪತಿ ಹುದ್ದೆ ಫೈಟ್: ಹೊರಟ್ಟಿ ಬದಲು ಮಲ್ಕಾಪುರೆ ಬೆಂಬಲಕ್ಕೆ‌ ನಿಂತ ಹಿರಿಯರು

- Advertisement -

ಬೆಂಗಳೂರು : Chairman Fight BJP : ರಾಜ್ಯ ರಾಜಕೀಯದಲ್ಲಿ ಸದಾ ಒಂದಿಲ್ಲೊಂದು ಸವಾಲು ಎದುರಿಸುತ್ತಲೇ ಬರುತ್ತಿರೋ ಬಿಜೆಪಿ ಸರ್ಕಾರಕ್ಕೆ ಸದ್ಯ ಮೀಸಲಾತಿ ಸಂಕಷ್ಟ ಕಾದಿದೆ. ಇದರ ಮಧ್ಯೆ ಬಿಜೆಪಿಯಲ್ಲಿ ಆಂತರಿಕ ಭಿನ್ನಮತವೂ ಭುಗಿಲೆದ್ದಿದೆ. ಸಚಿವ ಸಂಪುಟ ವಿಸ್ತರಣೆಯಾಗದ ಅಸಮಧಾನದ ಮಧ್ಯೆಯೇ ಈಗ ಬಿಜೆಪಿಯಲ್ಲಿ ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆಯೂ ಮೂಲ ವಲಸಿಗರ ನಡುವಿನ ಫೈಟ್ ಗೆ ಕಾರಣವಾಗಿದೆ.

ಹೌದು ರಾಜ್ಯದಲ್ಲಿ ಡಿಸೆಂಬರ್ 21ಕ್ಕೆ ವಿಧಾನಪರಿಷತ್ ಸಭಾಪತಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಸವರಾಜ್ ಹೊರಟ್ಟಿ ಸಿದ್ದತೆ ನಡೆಸಿದ್ದಾರೆ. ಯಾಕೆಂದರೇ ಹಿರಿಯರಾದ ಬಸವರಾಜ್ ಹೊರಟ್ಟಿಯವರು ಜೆಡಿಎಸ್ ಬಿಟ್ಟು ಬಿಜೆಪಿಗೆ ಬಂದಿದ್ದೇ, ಸಭಾಪತಿ ಸ್ಥಾನದ ಭರವಸೆಯೊಂದಿಗೆ. ಆದರೆ ಈಗ ಬಿಜೆಪಿಯಲ್ಲಿ ಇದೇ ವಿಚಾರ ಮೂಲ ಮತ್ತು ವಲಸಿಗ ಬಿಜೆಪಿ ನಾಯಕರ ನಡುವಿನ ಫೈಟ್ ಗೆ ಕಾರಣವಾಗಿದೆ. ಅಲ್ಲದೇ ಬಸವರಾಜ್ ಹೊರಟ್ಟಿಯವರು ಸಭಾಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಸಿದ್ಧವಾಗುತ್ತಿದ್ದಂತೆ ಹಂಗಾಮಿ ಸಭಾಪತಿಯವರು ಕೂಡ ತಮ್ಮ ಬೇಸರವನ್ನು ಆಪ್ತರ ಬಳಿ ತೋಡಿಕೊಂಡಿದ್ದಾರಂತೆ.

ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆಯವರುಸಭಾಪತಿ ಸ್ಥಾನದಲ್ಲಿ ಮುಂದುವರಿಸಲು ವರಿಷ್ಠರಲ್ಲಿ ಲಾಭಿಗೆ ಮುಂದಾಗಿದ್ದು, ಇದಕ್ಕಾಗಿ ದೆಹಲಿಗೆ ತೆರಳಿ, ವರಿಷ್ಠರ ಭೇಟಿ‌ಮಾಡುತ್ತಿದ್ದಾರೆ. ಅಲ್ಲದೇ ರಘುನಾಥ್ ಮಲ್ಕಾಪುರೆ ಪರ ರಾಜ್ಯದ ಕುರುಬ ಸಮುದಾಯ ನಿಂತಿದ್ದು ತಮ್ಮ ನಾಯಕರಾಗಿರುವ ಮಲ್ಕಾಪುರೆಯವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ ಮೂಲ ಬಿಜೆಪಿ ಪರಿಷತ್ ಸದಸ್ಯರಿಂದಲೂ ಅಸಮಧಾನ ವ್ಯಕ್ತವಾಗುತ್ತಿದ್ದು, ತೇಜಸ್ವಿನಿ ರಮೇಶ್, ಪುಟ್ಟಣ್ಣ ಸೇರಿದಂತೆ ಹಲವರು ಸಭಾಪತಿ ಸ್ಥಾನವನ್ನು ಮೂಲ ಬಿಜೆಪಿಗರಿಗೆ ಕೊಡುವಂತೆ ಒತ್ತಡ ಹೇರಿದ್ದಾರೆ.

ಮಲ್ಕಾಪುರೆ ಕುರುಬ ಸಮುದಾಯಕ್ಕೆ ಸೇರಿದವರು. ಈಗಾಗಲೇ ಕುರುಬ ಸಮುದಾಯಕ್ಕೆ ಸೇರಿದ ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಇಂಥ ಹೊತ್ತಿನಲ್ಲಿ ಮಲ್ಕಾಪುರೆಯವರಿಗೆ ಸಭಾಪತಿ ಸ್ಥಾನ ನೀಡದೇ ಹೋದಲ್ಲಿ ಕುರುಬ ಸಮುದಾಯಕ್ಕೆ ತಪ್ಪು ಮಾಹಿತಿ ಹೋಗಲಿದೆ ಎಂಬ ಆತಂಕ ಸಿಎಂ ಗೆ ಕಾಡುತ್ತಿದೆ.

ಇತ್ತ ಕಡೆ ಜೆಡಿಎಸ್ ನಿಂದ ಕರೆದುಕೊಂಡು ಬರುವಾಗ ಹೊರಟ್ಟಿಯವರಿಗೆ ಸಭಾಪತಿ ಸ್ಥಾನ ನೀಡುವ ಭರವಸೆ ನೀಡಿದ್ದು ಕೂಡ ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದೊಮ್ಮೆ ಅವರನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡದೇ ಹೋದಲ್ಲಿ ಹೊರಟ್ಟಿಯವರು ಬಹಿರಂಗವಾಗಿ ಅಸಮಧಾನ ತೋಡಿಕೊಂಡರು ಅಚ್ಚರಿಯೇನಿಲ್ಲ. ಹೀಗಾಗಿ ಈಗಾಗಲೇ ನೊರೆಂಟು ಸವಾಲುಗಳ ನಡುವೆ ನಲುಗಿರುವ ಸಿಎಂ ಬೊಮ್ಮಾಯಿಗೆ ಸದ್ಯ ಸಭಾಪತಿ ಚುನಾವಣೆ ಟಾಸ್ಕ್ ಎದುರಾಗಿದ್ದು, ಡಿಸೆಂಬರ್ 21 ರ ಹೊತ್ತಿಗೆ ಸಭಾಪತಿ ಆಯ್ಕೆಯ ಕಸರತ್ತು ಒಂದು ಸ್ಪಷ್ಟ ಚಿತ್ರಣ ಪಡೆದುಕೊಳ್ಳೋ ಸಾಧ್ಯತೆ ಇದೆ.

ಇದನ್ನೂ ಓದಿ : Siddaramaiah Bus Yatra: ಸಿದ್ದರಾಮಯ್ಯ ಬಸ್ ಯಾತ್ರೆಗೆ ಗ್ರೀನ್ ಸಿಗ್ನಲ್‌ : ಜನವರಿ 3 ರಂದು ಬಸ್‌ ಯಾತ್ರೆ ಆರಂಭ

ಇದನ್ನೂ ಓದಿ : Gujarath election 2022: ಮೋದಿ ಪಾಳಯದ ಮಹಾ ಗೆಲುವಿನ ಮೂರು ಗುಟ್ಟು!

Chairman post fight in BJP Seniors stand in support of Raghunath Rao Malkapure instead of Basavaraj Horatti

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular