ಸೋಮವಾರ, ಏಪ್ರಿಲ್ 28, 2025
HomekarnatakaChallagatta to Whitefield Metro: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಿಕ್ತು ಉತ್ತರ: ಸದ್ಯದಲ್ಲೇ ಸಂಚಾರ ಆರಂಭಿಸಲಿದೆ...

Challagatta to Whitefield Metro: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಿಕ್ತು ಉತ್ತರ: ಸದ್ಯದಲ್ಲೇ ಸಂಚಾರ ಆರಂಭಿಸಲಿದೆ ಚಲ್ಲಘಟ್ಟ ಟೂ ವೈಟಫೀಲ್ಡ್ ಮೆಟ್ರೋ

- Advertisement -

ಬೆಂಗಳೂರು : (Challagatta to Whitefield Metro) ಐಟಿ ಉದ್ಯಮದಿಂದ ಆರಂಭಿಸಿ ಹವಾಮಾನದವರೆಗೆ ಹಲವು ಕಾರಣದಿಂದ ಜಗತ್ತಿನ ಗಮನ ಸೆಳೆದ ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆ ದೊಡ್ಡ ಶಾಪವಾಗಿತ್ತು. ನಮ್ಮ‌ಮೆಟ್ರೋ ಇದಕ್ಕೆ ಉತ್ತರ ಹುಡುಕಿದೆ ಆದರೂ ಪೂರ್ತಿ ಪರಿಹಾರ ಸಿಕ್ಕಿರಲಿಲ್ಲ. ಈಗ ನಮ್ಮ‌ಮೆಟ್ರೋದ ಉದ್ದನೆಯ ಮಾರ್ಗ ಈ ರಸ್ತೆ ನರಕಕ್ಕೆ ಶಾಶ್ವತ ಮುಕ್ತಿ ದೊರಕಿಸೋ ಭರವಸೆ ಮೂಡಿಸಿದೆ.

ಹಲವು ವರ್ಷಗಳ ಹಿಂದೆ ಒಂದೇ ಮಾರ್ಗದಲ್ಲಿ ಆರಂಭವಾದ ನಮ್ಮ ಮೆಟ್ರೋ ಸದ್ಯ ಬೆಂಗಳೂರಲ್ಲಿ ಗ್ರೀನ್ ಹಾಗೂ ಪರ್ಪಲ್ ಲೈನ್ ನಲ್ಲಿ ಸಂಚಾರ ನಡೆಸುತ್ತಿದೆ. ಹೀಗಾಗಿ ಬೆಂಗಳೂರಿನ ಹೃದಯ ಭಾಗದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದ್ರೆ ಬೆಂಗಳೂರಿನ ಐಟಿ ಕಾರಿಡಾರ್ಗೆ ಮೆಟ್ರೋ ಮರೀಚಿಕೆಯಾಗಿತ್ತು. ಹೀಗಾಗಿ ಬಹುಸಂಖ್ಯಾತ ಐಟಿ ಮಂದಿ‌ಕ್ಯಾಬ್ ಕಾರಿನ ಮೊರೆ ಹೋಗ್ತಿದ್ದರಿಂದ ರಸ್ತೆಯಲ್ಲಿ ನರಕ ಸೃಷ್ಟಿಯಾಗಿತ್ತು. ಆದರೆ ಈಗ ಬೆಂಗಳೂರಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಮೆಟ್ರೋ ಸಂಪರ್ಕ ಸಾಕಾರಗೊಳ್ತಿದೆ. ಅತೀ ಉದ್ದದ ಮೆಟ್ರೋ ಮಾರ್ಗ ಶೀಘ್ರದಲ್ಲೇ ಜನರ ಬಳಕೆಗೆ ಲಭ್ಯವಾಗಲಿದೆ.

ಬೆಂಗಳೂರಿನ ಮೈಸೂರು ರಸ್ತೆಯ ಚಲ್ಲಘಟ್ಟ ಬಳಿಯಿಂದ ಐಟಿ ಕಾರಿಡಾರ್ ಆದ ವೈಟ್ ಫೀಲ್ಡ್ ವರೆಗೂ ಮೆಟ್ರೋ ಸಂಪರ್ಕ ಬಹುತೇಕ ಪೂರ್ಣಗೊಂಡಿದೆ. ಸದ್ಯ ಕೆಂಗೇರಿ ಟು ಬೈಯ್ಯಪ್ಪನಹಳ್ಳಿ ವರೆಗೆ ಸಂಚರಿಸುತ್ತಿರೋ ಮೆಟ್ರೋ ಕೆಲವೇ ತಿಂಗಳಲ್ಲಿ ಚಲ್ಲಘಟ್ಟ ಟು ವೈಟ್ ಫೀಲ್ಡ್ ವರೆಗೆ ಸಂಚರಿಸಲಿದೆ. ಸದ್ಯ ಕೆಂಗೇರಿ ಟು ಚಲ್ಲಘಟ್ಟ ನಡುವಿನ 2 ಕಿಲೋಮೀಟರ್ ಮಾರ್ಗ ಬಹುತೇಕ ಪೂರ್ಣಗೊಂಡಿದೆ. ಇನ್ನು ಕೆಆರ್ ಪುರಂ ಟು ವೈಟ್ ಫೀಲ್ಡ್ ಮಾರ್ಗ ಕಂಪ್ಲೀಟಾಗಿದ್ದು ವಾಣಿಜ್ಯ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ.
ಇನ್ನು ಬೈಯ್ಯಪ್ಪನಹಳ್ಳಿ ಟು ಕೆಆರ್ ಪುಂರ ಸಂಪರ್ಕಿಸೋ 2 ಕಿಲೋಮೀಟರ್ ಮಾರ್ಗವೂ ಅಂತಿಮ ಹಂತಕ್ಕೆ ತಲುಪಿದೆ. ಜೂನ್ ಅಂತ್ಯ ಇಲ್ಲವೇ ಜುಲೈ ಆರಂಭದಲ್ಲಿ ಬೈಯ್ಯಪ್ಪನಹಳ್ಳಿ ಟು ಕೆಆರ್ ಪುರಂ ಸಂಪರ್ಕ ಮಾರ್ಗ ಲೋಕಾರ್ಪಣೆ ಮಾಡೋದಾಗಿ ಬಿಎಂಆರ್ಸಿಎಲ್ ಹೇಳ್ತಿದೆ. ಇದಾಗ್ತಿದ್ದ ಹಾಗೆ ಬೆಂಗಳೂರಿನಲ್ಲಿ ಅತೀ ಉದ್ದದ ಮೆಟ್ರೋ ಮಾರ್ಗವೊಂದು ಜನರ ಬಳಕೆಗೆ ಲಭ್ಯವಾಗಲಿದೆ.

ಇನ್ನು ಚಲ್ಲಘಟ್ಟ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಒಟ್ಟು 37 ಸ್ಟೇಷನ್ ಗಳಿವೆ. ಈ ಮಾರ್ಗದ ಒಟ್ಟು ಉದ್ದ 42.53 ಕಿಲೋ ಮೀಟರ್. ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಮೆಟ್ರೋದಲ್ಲಿ ಜಸ್ಟ್ 1 ಗಂಟೆ 15 ನಿಮಿಷಕ್ಕೆ ತಲುಪಬಹುದಾಗಿದೆ. ಅದೇ ಕಾರು ಇಲ್ಲ ಬೈಕಿನಲ್ಲಿ ಇಷ್ಟೊಂದು ದೂರ ಸಾಗಬೇಕಾದ್ರೆ ಬೆಂಗಳೂರು ಟ್ರಾಫಿಕ್ನಲ್ಲಿ ಕನಿಷ್ಟ 2.5 ರಿಂದ 3 ಗಂಟೆ ಬೇಕಾಗುತ್ತೆ. ಹೀಗಾಗಿ ನಮ್ಮ ಮೆಟ್ರೋದ ಈ ಮಾರ್ಗ ಕಂಪ್ಲೀಟ್ ಜೋಡಣೆ ಆದ ಬಳಿಕ ಬೆಂಗಳೂರಿನ ಅತೀ ದೊಡ್ಡ ಟ್ರಾಫಿಕ್ ಸಮಸ್ಯೆಗೆ ಅರ್ಧ ಮುಕ್ತಿ ಸಿಗೋ ನಿರೀಕ್ಷೆ ಇದೆ. ಇನ್ನು ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಡಬಲ್ ಆಗೋ ನಿರೀಕ್ಷೆ ಸಹ ಬಿಎಂಆರ್ಸಿಎಲ್ ಗೆ ಇದೆ. ಒಟ್ಟಿನಲ್ಲಿ ಬೆಂಗಳೂರಿನ ಜನರ ಬಹುವರ್ಷಗಳ ಬೇಡಿಕೆ ಇನ್ನೇನು ಕೆಲವೇ ತಿಂಗಳಲ್ಲಿ ಸಾಕಾರಗೊಳ್ತಿದೆ.

ಇದನ್ನೂ ಓದಿ : ಬೆಂಗಳೂರಿಗೆ ಕಾದಿದೆ ಹವಾಮಾನ ವೈಪರೀತ್ಯ : ಬಿಸಿಲಿನ ಜೊತೆ ಸುರಿಯಲಿದೆ ಮಳೆ

Challagatta to Whitefield Metro: Solution to Bengaluru’s traffic problem: Challagatta to Whitefield Metro to start service soon

RELATED ARTICLES

Most Popular