ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಸ್ವಾಮಿ (Shiva Murthy Murugha Sharanaru ) ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರೋ ಡಿವೈಎಸ್ಪಿ ಅನಿಲ್ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿ ಮುರುಘಾ ಶ್ರೀ ವಿರುದ್ಧ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕೋರ್ಟ್ ಗೆ ಸಲ್ಲಿಕೆಯಾದ ಚಾರ್ಜಶೀಟ್ ಪ್ರತಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಪೈಕಿ ಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ ಮೊದಲ 15 ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇಬ್ಬರು ಹುಡುಗಿಯರನ್ನು ಕಳಿಸಲು ಮುರುಘಾ ಸ್ವಾಮಿ ಚೀಟಿ ನೀಡುತ್ತಿದ್ದರು. ಪ್ರತಿ ಭಾನುವಾರ ಟ್ಯೂಷನ್ ನೆಪದಲ್ಲಿ ರೂಮಿಗೆ ಕಳಿಸಿಕೊಳ್ಳುತ್ತಿದ್ದರು. ಮುರುಘಾ ಸ್ವಾಮಿ ಮೊದಲ ಸಲ ಪಕ್ಕದಲ್ಲಿ ಕೂರಿಸಿ ಚೆನ್ನಾಗಿ ಮಾತಾಡಿದರು. ಹಣ್ಣು ಮತ್ತು ಡ್ರೈಫ್ರೂಟ್ಸ್ ತಿನ್ನಲು ಕೊಟ್ಟಿದ್ದರು ಮತ್ತೊಮ್ಮೆ ಹೋದಾಗ ಖಾಸಗಿ ಅಂಗ ಮುಟ್ಟಿದ್ದರು. ಅವರು ಬೆತ್ತಲೆಯಾಗಿ ನನ್ನನ್ನೂ ಬೆತ್ತಲಾಗಿಸಿ ಅತ್ಯಾಚಾರ ಮಾಡಿದ್ರು. ಅಳುತ್ತ ಕುಳಿತಾಗ ನನ್ನೆದುರೇ ಡ್ರಿಂಕ್ಸ್ ಮಾಡಿ ಕೆಟ್ಟದಾಗಿ ಬೈದರು. ಮುಂದೆ ಸಿಸಿ ಕ್ಯಾಮಾರಾ ಇರುವ ಕಾರಣ ಹಿಂದಿನ ಡೋರಿನಿಂದ ಕರೆಸಿಕೊಳ್ಳುತ್ತಿದ್ದರು. ಪ್ರತಿದಿನ ಹೆಸರು ಬರೆದು ಕಳಿಸಿದ್ದವರನ್ನೇ ರಶ್ಮಿ ಕಳಿಸುತ್ತಿದ್ದರು. ಮರುಘಾ ಸ್ವಾಮಿ ಬಳಿಗೆ ಹೋಗಲು ಒಪ್ಪದಿದ್ದರೆ ರಶ್ಮಿ ಕೆಟ್ಟದಾಗಿ ಬೈಯುತ್ತಿದ್ದರು. ನಿನ್ನ ತಮ್ಮನನ್ನು ಚೆನ್ನಾಗಿ ಓದಿಸುತ್ತೇನೆ ಯಾರಿಗೂ ಹೇಳಬೇಡ ಎಂದಿದ್ದರು ಮುರುಘಾ ಸ್ವಾಮಿ. ನಾವು ಬಡವರು ಸ್ವಾಮಿ ಎಂದು ಕಾಲು ಹಿಡಿದಿದ್ದೆನು. ನನ್ನ ಬಟ್ಟೆಯನ್ನು ಬಿಚ್ಚಲು ಹೇಳಿದರು. ಮುರುಘಾಶ್ರೀಗೆ ಎ5 ವಕೀಲ ಗಂಗಾಧರ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ-17), ಎ2 ರಶ್ಮಿ, ಎ4 ಪರಮಶಿವಯ್ಯ ಸಪೋರ್ಟ್ ಮಾಡುತ್ತಿದ್ದರು.
ಬೆಂಗಳೂರಿನ ವಿದ್ಯಾರ್ಥಿ ನಮ್ಮ ಹಾಸ್ಟೆಲ್ ನಲ್ಲಿದ್ದಳು. ಆ ಬಾಲಕಿಗೆ ರೇಪ್ & ಮರ್ಡರ್ ಮಾಡಿದ್ದಾರೆ ಎಂದು ಹುಡುಗಿಯರು ಮಾತಾಡುತ್ತಿದ್ದರು. 24/07/2022ರಂದು ರಶ್ಮಿಗೂ ನನಗೂ ಕಿರಿಕ್ ಆಯಿತು, ರಶ್ಮಿ ಹೊಡೆದರು. ನಾನು ಸಾಯಬೇಕೆಂದು ಅನ್ನಿಸಿತ್ತು, ರಶ್ಮಿ ಸಾಯಿ ಅಂದರು. ನಾನು ಮತ್ತು ನನ್ನ ಸಹಪಾಠಿ ಮಾತಾಡಿಕೊಂಡೆವು. ಸಂಜೆ 4:30ಕ್ಕೆ ಮಠದಿಂದ ಹೊರಬಂದು ಇಬ್ಬರೂ ಆಟೋದಲ್ಲಿ ಬಸ್ ಸ್ಟ್ಯಾಂಡಿಗೆ ಹೋದೆವು. ಅಲ್ಲಿಂದ KSRTC ಬಸ್ ನಲ್ಲಿ ರಾತ್ರಿ 11ಕ್ಕೆ ಬೆಂಗಳೂರು ತಲುಪಿದೆವು.
ಶರಣರು ಸಿಎಂ ಗೊತ್ತು, ಪೊಲೀಸರು ಗೊತ್ತು ಎಂದಿದ್ದು ನೆನಪಾಯಿತು. ಓರ್ವ ಆಟೋ ಚಾಲಕ ನಮ್ಮನ್ನು ಕಾಟನ್ ಪೇಟೆ ಠಾಣೆಗೆ ಬಿಟ್ಟರು. ಪೊಲೀಸರು ಸೌಭಾಗ್ಯ ಬಸವರಾಜನ್ ಅವರಿಗೆ ಕರೆ ಮಾಡಿದರು. ಬೆಳಗ್ಗೆ 4ಕ್ಕೆ ಸೌಭಾಗ್ಯ ಬೆಂಗಳೂರಿಗೆ ಬಂದು ಕರೆತಂದರು. ನಮ್ಮ ಚಿಕ್ಕಪ್ಪನನ್ನು ಕರೆಸಿ ಹೇಳಿದಾಗ ಸ್ಪಂದಿಸಲಿಲ್ಲ. ಸೌಭಾಗ್ಯ ಹಾಗೂ ಗೆಳತಿಯ ಮನೆಯಲ್ಲಿ ಉಳಿದಿದ್ದೆವು. ಸೌಭಾಗ್ಯ ಅವರು 26/08/2022ರಂದು ಮೈಸೂರಿಗೆ ಕರೆದೊಯ್ದರು. ಒಡನಾಡಿ ಸಂಸ್ಥೆಯಲ್ಲಿ ನಮ್ಮಿಬ್ಬರ ವಿಚಾರಣೆ ನಡೆಯಿತು. ಸಿಡಬ್ಲೂಸಿಗೆ ಕರೆದೊಯ್ದರು, ಬಳಿಕ ನಜರಾಬಾದ್ ಠಾಣೆಯಲ್ಲಿ ದೂರು ದಾಖಲು ಎಂದಿದ್ದಾರೆ.
ಈ ಮಧ್ಯೆ 16ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲೂ ಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ. ನಾನು 7ನೇ ತರಗತಿಯಲ್ಲಿದ್ದಾಗ ಹುಷಾರಿರಲಿಲ್ಲ.ಆಗ ವಾರ್ಡನ್ ರಶ್ಮಿ ಶರಣರ ಬಳಿಗೆ ಹೋಗಲು ಸೂಚಿಸಿದರು.ಹಣ್ಣು ಕೊಡುತ್ತಾರೆಂದು ಶರಣರ ರೂಮಿಗೆ ಕರೆದೊಯ್ದರು. ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗಿ ರೂಮಿಗೆ ಕಳಿಸಿದರು. ಶರಣರು ಕುಡಿಯುತ್ತ ಕುಳಿತಿದ್ದರು, ಹಣ್ಣು ಕೊಟ್ಟರು. ಹಣ್ಣು ತಿಂದ ನಂತರ ತಲೆ ಸುತ್ತು ಬಂದಂತಾಯಿತು. ಎಚ್ಚರ ಆದಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಬಟ್ಟೆ ಹಾಕಿಕೊಂಡು ನಾನು ಹಾಸ್ಟೆಲ್ ಗೆ ಬಂದೆನು. 3 ತಿಂಗಳ ಬಳಿಕ ಸ್ವಾಮೀಜಿ ಕರೆಯುತ್ತಿದ್ದಾರೆಂದು ರಶ್ಮಿ ಮತ್ತೆ ಕರೆದೊಯ್ದರು.ರೂಮಿಗೆ ಹೋದಾಕ್ಷಣ ನೀನು ಯಾರಿಗಾದರು ಹೇಳಿದ್ದೀಯಾ ಎಂದು ಕೇಳಿದರುನಂತರ ಸ್ನಾನಕ್ಕೆ ಹೋಗಿ ಬೆನ್ನು ಉಜ್ಜಲು ಕರೆದರು.ನನಗೂ ಬಟ್ಟೆ ಬಿಚ್ಚಲು ಹೇಳಿದರು, ಬೇಡವೆಂದು ಕಾಲು ಹಿಡಿದೆನು.
ಸ್ವಾಮೀಜಿ ಆಗ ನನಗೆ ಚಾಕು ತೋರಿಸಿ ಬೆದರಿಸಿದರು .ನಾನು 9ನೇ ತರಗತಿಯಲ್ಲಿದ್ದಾಗ ಮತ್ತೆ ಶರಣರ ರೂಂಗೆ ಹೋಗಲು ರಶ್ಮಿ ಹೇಳಿದರು.ರೂಮಿಗೆ ಹೋದಾಗ ಬಲವಂತದಿಂದ ಚಾಕೋಲೇಟ್ ನೀಡಿದರು. ಚಾಕೊಲೇಟ್ ತಿಂದ ಬಳಿಕ ತಲೆಸುತ್ತು ಬಂತು, ನಂತರ ಏನಾಯಿತು ಗೊತ್ತಿಲ್ಲ. ಒಬ್ಬರು ತಪ್ಪು ಮಾಡಿದರೂ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಒಂದನೇ ಕ್ಲಾಸಿನ ಹುಡುಗಿಗೆ ರಕ್ತ ಬರುವಂತೆ ಹೊಡೆದಿದ್ದರು. ಅಪ್ಪನಿಗೆ ಕರೆ ಮಾಡಿದಾಗ ಯಾವುದೊ ಹುಡುಗನಿಗೆ ಕರೆ ಮಾಡಿದ್ದೀಯಾ ಎಂದು ರಶ್ಮಿ ಕೆಟ್ಟದ್ದಾಗಿ ಬಯ್ದರು. ನನ್ನ ಸಹಪಾಠಿಗೆ ಹೇಳಿದಾಗ ಇಬ್ಬರೂ ಹಾಸ್ಟೆಲ್ ಬಿಡಲು ನಿರ್ಧರಿಸಿದೆವು.
24/07/2022ರಂದು ಬೆಂಗಳೂರಿಗೆ ತೆರಳಿದೆವು. ಆಟೋ ಡ್ರೈವರ್ ಒಬ್ಬರು ಕಾಟನ್ ಪೇಟೆ ಠಾಣೆಗೆ ಬಿಟ್ಟರು. ಸೌಭಾಗ್ಯ ಬಸವರಾಜನ್ ನಮ್ಮನ್ನು ಮರಳಿ ಕರೆತಂದರು. ನಮ್ಮ ತಂದೆ ತಾಯಿ ಅವರನ್ನು ಸೌಭಾಗ್ಯ ಮನೆಗೆ ಕರೆಸಿದರು. ಸೌಭಾಗ್ಯ ಅವರ ಮನೆಯಲ್ಲಿ ಇರುತ್ತೇನೆಂದು ಹೇಳಿದೆನು. ಕೆಲ ದಿನ ನಾವಿಬ್ಬರೂ ಸೌಭಾಗ್ಯ ಮನೆ & ಕೆಲ ದಿನ ನಮ್ಮ ಮನೆಯಲ್ಲಿದ್ದೆವು. ಸ್ವಾಮೀಜಿಯಿಂದ ಅತ್ಯಾಚಾರದ ವಿಚಾರ ಸೌಭಾಗ್ಯ ಅವರ ಬಳಿ ಹೇಳಿಕೊಂಡೆವು. 26/0/2022ರಂದು ಸೌಭಾಗ್ಯ ಅವರು ಮೈಸೂರಿಗೆ ಕರೆದೊಯ್ದರು. ನಜರಾಬಾದ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಕೇಸ್ ದಾಖಲಿಸಿದೆವು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Chandrasheskar death case : ಚಂದ್ರು ಸಾವಿನ ಮರುಸೃಷ್ಟಿ, ಸಮಗ್ರ ತನಿಖೆ ಸಿಎಂ ಬೊಮ್ಮಾಯಿ ಸೂಚನೆ
ಇದನ್ನೂ ಓದಿ : Kantara 1 crore ticket sale : ಒಂದು ಕೋಟಿ ಟಿಕೇಟ್ ಸೇಲ್ : ಕರ್ನಾಟಕದಲ್ಲಿ ಕಾಂತಾರ ಹೊಸ ದಾಖಲೆ
chargesheet Submission against Chitra Durga Shiva Murthy Murugha Sharanaru