ಸೋಮವಾರ, ಏಪ್ರಿಲ್ 28, 2025
HomekarnatakaText Books Education : ಪಠ್ಯ - ಪುಸ್ತಕದಲ್ಲಿ ಹೊಸ ವಿಷಯಗಳ ಸೇರ್ಪಡೆ ಬಗ್ಗೆ ಮಾಹಿತಿ...

Text Books Education : ಪಠ್ಯ – ಪುಸ್ತಕದಲ್ಲಿ ಹೊಸ ವಿಷಯಗಳ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ

- Advertisement -

ಬೆಂಗಳೂರು : ಹೊಸ ಆಲೋಚನೆಗಳು ಹಾಗೂ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಮುಂಬರುವ ವರ್ಷದಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಇನ್ನೋವೇಟಿವ್​ ಹಾಗೂ ಎಂಟರ್​ಪ್ರಿನರ್​ಶಿಪ್​ ಎಂಬ ಎರಡು ಹೊಸ ವಿಷಯಗಳನ್ನು ಸೇರಿಸಲು(Text Books Education) ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಶಾಲಾ ಮಟ್ಟದಲ್ಲಿಯೇ ಮಕ್ಕಳಿಗೆ ಉದ್ಯಮಕ್ಕೆ ಭದ್ರ ಬುನಾದಿಯನ್ನು ಹಾಕಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತರಲಿದೆ. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ , ವೈಜ್ಞಾನಿಕ ಚಿಂತನೆ ಸೇರಿದಂತೆ ವಿವಿಧ ಹೊಸ ಆಲೋಚನೆಗಳನ್ನು ಪರಿಚಯಿಸಲಿದ್ದೇವೆ. ಇದರ ಜೊತೆಯಲ್ಲಿ ಐಟಿಐ ಡಿಪ್ಲೋಮಾ ಕಾಲೇಜು ಉನ್ನತೀಕರಣ ಮಾಡಲು ಸಹ ಚಿಂತನೆ ನಡೆದಿದೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

ಹೊಸ ಹೊಸ ಸ್ಟಾರ್ಟ್​್ ಅಪ್​ಗಳು ಆರಂಭವಾಗಬೇಕು. ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಬಲ್ಲ ತೋಟಗಾರಿಕೆ, ಕೃಷಿ, ರೇಷ್ಮೆ ಉದ್ಯಮ ಹೀಗೆ ಇಂತಹ ಕ್ಷೇತ್ರಗಳಲ್ಲಿ ಹೊಸ ಹೊಸ ಉದ್ಯಮಗಳು ಆರಂಭವಾಗಬೇಕು. ಉದ್ಯೋಗದ ಜೊತೆಯಲ್ಲಿ ಆರೋಗ್ಯದ ಕಡೆಗೆ ಗಮನ ನೀಡುವ ಯೋಜನೆಗಳಿಗೂ ಹೆಚ್ಚು ಉತ್ತೇಜನ ನೀಡಲಾಗುತ್ತದೆ. ಇದರ ಜೊತೆಯಲ್ಲಿ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಯೋಜನೆಗಳನ್ನೂ ಜಾರಿಗೆ ತರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

CM Basavaraj Bommai on including new subjects in Text Books Education

RELATED ARTICLES

Most Popular