ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಈ ನಡುವಲ್ಲೇ ತಜ್ಞರು ಶಾಕಿಂಗ್ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಜುಲೈವರೆಗೂ ಕಾಡಲಿದೆಯಂತೆ.
ಕೋವಿಡ್ ತಾಂತ್ರಿಕ ಸಮಿತಿ ಕೊರೊನಾ ಎರಡನೇ ಅಲೆಯ ಕುರಿತು ಸಾಕಷ್ಟು ಮಾಹಿತಿಗಳನ್ನು ನೀಡಿದ್ದು, ನಿಯಂತ್ರಣಕ್ಕೆ ಹಲವು ಸಲಹೆಗಳನ್ನು ಕೊಟ್ಟಿದೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆತಂಕ ಶುರುವಾಗಿದ್ದು, ರಾಜ್ಯದಲ್ಲಿ 2ನೇ ಅಲೆ ಜುಲೈವರೆಗೂ ಕಾಡಲಿದೆ ಅನ್ನೋ ಆಘಾತಕಾರಿ ಮಾಹಿತಿಯನ್ನು ನೀಡದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ನಿತ್ಯವೂ 2 ಸಾವಿರದ ಗಡಿದಾಟಿದೆ. ಅಲ್ಲದೇ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆಯಂತೆ. ಕಳೆದ ಬಾರಿ ಕೊರೊನಾ ವೈರಸ್ ಸೋಂಕು ಅಗಸ್ಟ್ ಅಂತ್ಯದವರೆಗೂ ಹೆಚ್ಚುತ್ತಲೇ ಸಾಗಿತ್ತು. ಆದ್ರೀಗ ಎರಡನೇ ಅಲೆ ಕಳೆದ ಬಾರಿಯಂತೆ ಈ ಬಾರಿಯೂ ಮಾರ್ಚ್ ನಲ್ಲಿಯೇ ಕಾಣಿಸಿಕೊಂಡಿದೆ. ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ರಾಜ್ಯದಲ್ಲಿಯೂ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.