ನವದೆಹಲಿ : ದಸರಾ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸರಕಾರಿ ನೌಕರರಿಗೆ ಬಿಗ್ ಗಿಫ್ಟ್ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಆರ್ಥಿಕ ವಿಷಯಗಳ ಕುರಿತು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ 10,000 ರೂಪಾಯಿ ಬಡ್ಡಿ ರಹಿತ ಮುಂಗಡ ನೀಡಲು ಮುಂದಾಗಲಿದೆ. ಉದ್ಯೋಗಿಗಳು ಮುಂಗಡ ಮೌಲ್ಯದ ಪೂರ್ವ- ಲೋಡೆಡ್ ರುಪೇ ಕಾರ್ಡ್ ಅನ್ನು ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ವು ಬ್ಯಾಂಕ್ ಕ್ರ್ಯೂಸ್ ಗಳನ್ನು ಭರಿಸಲಿದೆ ಎಂದು ಹೇಳಿದ್ದಾರೆ.

ಇನ್ನು ಕೊರೊನಾ ವೈರಸ್ ಸೋಂಕು ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಬಡವರು ಮತ್ತು ದುರ್ಬಲ ವರ್ಗಗಳ ಅಗತ್ಯಗಳನ್ನು ‘ಅತ್ಮ ನಿರ್ಭರ್ ಭಾರತ್’ ಪ್ಯಾಕೇಜ್ ನಲ್ಲಿ ನೀಡಲಾಗಿದೆ. ಪೂರೈಕೆ ಯ ನಿರ್ಬಂಧಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡರೂ, ಗ್ರಾಹಕರ ಬೇಡಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕಾಗಿದೆ ಎಂದಿದ್ದಾರೆ.