Delhi Election 2025 Result: ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಆಮ್ ಆದ್ಮಿ ಪಾರ್ಟಿ ಹೀನಾಯ ಸೋಲು ಕಂಡಿದೆ. ಅದ್ರಲ್ಲೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್‌ಗೆ ಅಬಕಾರಿ ನೀತಿ ಹಗರಣ ಸೋಲಿನ ಉಡುಗೊರೆ ನೀಡಿದೆ. ಹಲವು ವರ್ಷಗಳ ಬಳಿಕ ಬಿಜೆಪಿ ದೆಹಲಿಯ ಗದ್ದುಗೆಗೆ ಏರಲು ಸಜ್ಜಾಗಿದೆ.
70ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು 36 ಸದಸ್ಯರ ಅವಶ್ಯಕತೆಯಿದ್ದು, ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಮೂಲಕ ಈ ಬಾರಿ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಏರುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್ ದೆಹಲಿಯಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಆಮ್ ಆದ್ಮಿ 24 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆದರೆ ಕಾಂಗ್ರೆಸ್ ಯಾವುದೇ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
Also Read : mahakumbh 2025 : ಯೋಗಿ ಆದಿತ್ಯನಾಥ್ ನಾಡಲ್ಲೀಗ ಆಸ್ತಿಕರ ಉತ್ಸವ: ಮಹಾಕುಂಭ ಮೇಳದಿಂದ ಬದಲಾಗುತ್ತಾ ಉತ್ತರ ಪ್ರದೇಶ
ಕಳೆದ ಎರಡು ಅವಧಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಅರವಿಂದ ಕೆಜ್ರಿವಾಲ್ ನೇತೃತ್ವದ ಆಪ್ ಸರಕಾರಕ್ಕೆ ಅಬಕಾರಿ ಹಗರಣ ಮತ್ತು ಭ್ರಷ್ಟಾಚಾರ ಆರೋಪ ಮುಳುವಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಭ್ರಷ್ಟಾಚಾರದ ಆರೋಪದ ಅಡಿಯಲ್ಲಿ ಜೈಲು ಸೇರಿರುವುದು ಆಮ್ ಆದ್ಮಿ ಪಾರ್ಟಿಯ ಮೇಲೆ ಮತದಾರರು ನಂಬಿಕೆ ಕಳೆದುಕೊಳ್ಳುವಂತೆ ಮಾಡಿತ್ತು.

ಅರವಿಂದ ಕೆಜ್ರಿವಾಲ್ ಮಾತ್ರವಲ್ಲದೇ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿಯ ಘಟಾನುಘಟಿ ನಾಯಕರುಗಳೇ ಸೋಲನ್ನು ಕಂಡಿದ್ದಾರೆ. ಇನ್ನು ಪರ್ವೇಶ್ ವರ್ಮಾ ಅರವಿಂದ ಕೆಜ್ರಿವಾಲ್‌ಗೆ ಸೋಲಿನ ರುಚಿ ತೋರಿಸಿದ್ದು, ಬಿಜೆಪಿ ಪರ್ವೇಶ್ ವರ್ಮಾ ಅವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ಪರ್ವೇಶ್ ವರ್ಮಾ ಅಮಿತ್ ಶಾ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
Also Read : New Mobile Sim Scam : ಮೊಬೈಲ್‌ಗೆ ಹೊಸ ಸಿಮ್ ಹಾಕಿದ ಟೆಕ್ಕಿ : ಖಾತೆಯಲ್ಲಿದ್ದ 2.80 ಕೋಟಿ ಮಂಗಮಾಯ
Delhi Election 2025 Result BJP Lead Arvind Kejriwal defeat Who will be the Delhi CM ?