ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಡೆಲ್ಟಾ ಪ್ಲಸ್ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಅಬ್ಬರದ ಆತಂಕದ ನಡುವಲ್ಲೇ ರಾಜ್ಯ ಸರಕಾರ ಅಂತರ್ ರಾಜ್ಯ ಬಸ್ ಸಂಚಾರ ಆರಂಭಿಸಿದೆ.
ಮಹಾರಾಷ್ಟ್ರದಲ್ಲಿ ಎರಡನೇ ಅಲೆ ತಗ್ಗಿದ ಬೆನ್ನಲ್ಲೇ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ. ಅಲ್ಲದೇ ಕೊರೊನಾ ಸೋಂಕಿತರ ಸಂಖ್ಯೆಯೂ ಕಳೆದ ಮೂರು ದಿನಗಳಿಂದ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ 21 ಡೆಲ್ಟಾ ಪ್ಲಸ್ ಪ್ರಕರಣಗಳಿದ್ದರೆ, ನೆರೆಯ ಕೇರಳದಲ್ಲಿ 1 ಪ್ರಕರಣ ದಾಖಲಾಗಿದೆ. ಎರಡೂ ರಾಜ್ಯಗಳಲ್ಲಿಯೂ ಡೆಲ್ಟಾ ಪ್ಲಸ್ ಹೆಚ್ಚುವ ಭೀತಿ ಎದುರಾಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ಹಂತಹಂತವಾಗಿ ತೆರವು ಮಾಡುವುದಾಗಿ ಹೇಳಿದ್ದ ರಾಜ್ಯ ಸರಕಾರ ಇದೀಗ ಆತುರದಲ್ಲಿ ಅನ್ ಲಾಕ್ ಜಾರಿ ಮಾಡಿದೆ. ಅಲ್ಲದೇ ಕೇರಳಕ್ಕೆ ಬಸ್ ಸಂಚಾರ ಆರಂಭಿಸಿದ್ದ ರಾಜ್ಯ ಸರಕಾರ ಇದೀಗ, ಡೆಲ್ಟಾ ಪ್ಲಸ್ ಆತಂಕ ಎದುರಾಗಿರುವ ಮಹಾರಾಷ್ಟ್ರ ಕ್ಕೆ ಬಸ್ ಸಂಚಾರ ಆರಂಭ ಮಾಡಲಿದೆ.
ಬೆಂಗಳೂರು, ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದಲೂ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ನಡೆಸಲಿದೆ. ಆರಂಭ ದಿಂದಲೂ ಮುಂಬೈನಿಂದಲೇ ಕೊರೊನಾ ಸೋಂಕು ರಾಜ್ಯಕ್ಕೆ ವೇಗವಾಗಿ ವ್ಯಾಪಿಸಿತ್ತು. ಇದೀಗ ಅಂತರ್ ರಾಜ್ಯ ಬಸ್ ಸಂಚಾರ ದಿಂದಾಗಿ ಡೆಲ್ಟಾ ಫ್ಲಸ್ ಆತಂಕ ಎದುರಾಗಿದೆ.