ಸೋಮವಾರ, ಏಪ್ರಿಲ್ 28, 2025
HomekarnatakaDiabetes in dogs : ನಾಯಿಗಳಿಗೆ ಡಯಾಬಿಟಿಸ್ ಕಾಟ : ಮುನ್ನೆಚ್ಚರಿಕೆಗಳೇನು ? ಚಿಕಿತ್ಸೆ ಏನು...

Diabetes in dogs : ನಾಯಿಗಳಿಗೆ ಡಯಾಬಿಟಿಸ್ ಕಾಟ : ಮುನ್ನೆಚ್ಚರಿಕೆಗಳೇನು ? ಚಿಕಿತ್ಸೆ ಏನು ? ಇಲ್ಲಿದೆ ಡಿಟೇಲ್ಸ್

- Advertisement -

ಬೆಂಗಳೂರು : Diabetes in dogs : ರಾಜ್ಯದ ಎಲ್ಲಾ‌ ಕಡೆಗಳಲ್ಲೂ ಶ್ವಾನ ಪ್ರಿಯರ ಸಂಖ್ಯೆ ಬೇಕಷ್ಟಿದೆ.ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಂತೂ ಮನೆ ಮನೆಯಲ್ಲೂ ಶ್ವಾನ ಪ್ರಿಯರಿದ್ದಾರೆ. ಆದರೆ ಈಗ ಶ್ವಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಎದುರಾಗಿದೆ. ಹೌದು ಇದುವರೆಗೂ ಮನುಷ್ಯರನ್ನು ಮಾತ್ರ ಕಾಡುತ್ತಿದ್ದ ಶುಗರ್ ,ಡಯಾಬಿಟಿಸ್ ಸಮಸ್ಯೆ ಈಗ ಪ್ರಾಣಿಗಳಲ್ಲೂ‌ ಕಂಡುಬರಲಾರಂಭಿಸಿದೆ.

ಇತ್ತೀಚಿಗೆ ಮನೆಯಲ್ಲೊಂದು ದುಬಾರಿ ನಾಯಿ ಸಾಕೋದು ಫ್ಯಾಶನ್ ಆಗಬಿಟ್ಟಿದೆ. ಆದರೆ ಹೀಗೆ ಸಾಕೋ ನಾಯಿಗಳು ಕೆಲವೊಮ್ಮೆ ಮನುಷ್ಯರಂತೆ ಕಾಯಿಲೆಗೆ ತುತ್ತಾಗುತ್ತವೆ. ಇದನ್ನು ಗಮನಿಸಿ ಆರೈಕೆ ಮಾಡದಿದ್ದರೇ ನಾಯಿಗಳು ಸಾವಿನ ಮನೆ ಸೇರೋದು ಗ್ಯಾರಂಟಿ‌. ಅಂತಹ ಸಮಸ್ಯೆಗಳಲ್ಲಿ ಮುಖ್ಯವಾದದ್ದು ಶುಗರ್ ಅಥವಾ ಸಕ್ಕರೆ ಕಾಯಿಲೆ. ಹೌದು ಇತ್ತಿಚೆಗೆ ನಾಯಿಗಳಲ್ಲಿ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳಲಾರಂಭಿಸಿದೆ. ಇದಕ್ಕೆ ಪ್ರಮುಖ ಕಾರಣ ಸಾಕುನಾಯಿಗಳಿಗೆ ನೀಡಲಾಗುತ್ತಿರುವ ಆಹಾರ‌.

ನಾಯಿಗಳಿಗೆ ಕರಿದ ತಿಂಡಿಗಳು, ಸಿಹಿತಿಂಡಿಗಳು, ಬೇಕರಿ ಐಟಂ ಸೇರಿದಂತೆ ಹಲವು ಬಗೆಯ ಜಂಕ್ ಫುಡ್ ಗಳನ್ನು ಮನೆ ಮಾಲೀಕರು ಅಭ್ಯಾಸ ಮಾಡಿಸುತ್ತಿದ್ದಾರೆ. ಇದರಿಂದ ನಾಯಿಗಳು ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿವೆ. ಈ ಸಕ್ಕರೆ ಕಾಯಿಲೆಯಿಂದ ನಾಯಿಗಳು ಅಗತ್ಯಕ್ಕಿಂತ ಹೆಚ್ಚು ತೂಕವನ್ನು ಗಳಿಸುತ್ತಿವೆ. ಇನ್ನು ಶುಗರ್ ಪೀಡಿತ ನಾಯಿಗಳ ಲಕ್ಷಣ ಎಂದರೇ ಚಟುವಟಿಕೆಯನ್ನು ಕಳೆದುಕೊಳ್ಳುವುದು. ಬಾಯಲ್ಲಿ ನೀರು ಸುರಿಸುವುದು ಸೇರಿದಂತೆ ವಿವಿಧ ಬಗೆಯ ಲಕ್ಷಣಗಳು.

ನಾಯಿಗಳ ಮಾಲೀಕರು ವೈದ್ಯರ ಬಳಿ ಕರೆದುಕೊಂಡು ಹೋದಾಗ ಪರೀಕ್ಷೆ ಮಾಡಿದಾಗ ಈ ಡಯಾಬಿಟಿಸ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ನಾಯಿಗಳಲ್ಲೂ ಮನುಷ್ಯರಂತೆ 2. ಬಗೆಯ ಡಯಾಬಿಟಿಸ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಾಯಿಗಳ ಡಯಾಬಿಟಿಸ್ ಚಿಕಿತ್ಸೆ ಗೂ ಕೂಡ ಮಾತ್ರೆಗಳನ್ನು ನೀಡುತ್ತಿದ್ದು, ಒಂದೊಮ್ಮೆ ನಾಯಿಗಳು ಮಾತ್ರೆಯ ಹಂತವನ್ನು ದಾಟುವಷ್ಟು ಶುಗರ್ ನಿಂದ ಬಳಲುತ್ತಿದ್ದರೇ ಅವರಿಗೆ ಇನ್ಸುಲಿನ್ ನೀಡುವ ಸ್ಥಿತಿ ಇದೆ.

ಹೀಗಾಗಿ ನಗರದ ಶ್ವಾನ ಪ್ರಿಯರಿಗೆ ವೈದ್ಯರು ಸಲಹೆ ನೀಡುತ್ತಿದ್ದು, ನಾಯಿಗಳಿಗೆ ಕರಿದ ತಿಂಡಿ ಪದಾರ್ಥಗಳು ಚಾಕ್ಲೇಟ್ ನೀಡಿ ಅನಾರೋಗ್ಯವಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ. ಒಂದೊಮ್ಮೆ ಅನಾರೋಗ್ಯವಾದಲ್ಲಿ ತಕ್ಷಣ ವೈದ್ಯರ ಸಹಾಯ ಪಡೆದು ನಾಯಿಗಳಿಗೂ ಡಯಾಬಿಟಿಸ್ ಚಿಕಿತ್ಸೆ ಕೊಡಿಸಿದಲ್ಲಿ ಮುಂದಾಗುವ ಅನಾಹುತಗಳಿಂದ ನಾಯಿಗಳನ್ನು ರಕ್ಷಿಸಬಹುದು ಅನ್ನೋದು ವೈದ್ಯರ ಅಂಬೋಣ.

ಇದನ್ನೂ ಓದಿ : ನಾಯಿ ನೋಡಿಕೊಳ್ಳುವವರು ಬೇಕಾಗಿದ್ದಾರೆ : ಸಂಬಳ ತಿಂಗಳಿಗೆ 45,000 ರೂ. !

ಇದನ್ನೂ ಓದಿ : Mad Dog Bitten : ಕೋಟದಲ್ಲಿ ಹುಚ್ಚುನಾಯಿ ಭೀತಿ : ಹತ್ತಕ್ಕೂ ಅಧಿಕ ಮಂದಿಗೆ ಕಚ್ಚಿದ ನಾಯಿ

Diabetes in dogs What are the precautions, What is the treatment, Here are the details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular