ಬೆಂಗಳೂರು : police constables : ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿ ಏರಿಕೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಿದೆ. ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿ ಏರಿಕೆ ವಿಚಾರವಾಗಿ ನಾವು ಸಧ್ಯ ಯಾವುದೇ ಯೋಚನೆ ಮಾಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ . ವಿಧಾನಸೌಧದಲ್ಲಿ ಶಾಸಕ ಪ್ರೀತಂ ಗೌಡ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ್ದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ರಾಜ್ಯದಲ್ಲಿ ಪೊಲೀಸ್ ಕಾನಸ್ಟೇಬಲ್ ನೇಮಕಾತಿ ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವವು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿಯನ್ನು ಏರಿಕೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮನವಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋವಿಡ್ ಅವಧಿಯಲ್ಲಿ ನಾವು ಪೊಲೀಸ್ ನೇಮಕಾತಿ ಮಾಡಿಲ್ಲ ಎಂಬುದು ತಪ್ಪು ಮಾಹಿತಿಯಾಗಿದೆ. ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ವಯೋಮಿತಿ ಏರಿಕೆ ಮಾಡಿ ಅಂತಾ ನನಗೂ ಅನೇಕರು ಫೋನ್ ಮಾಡುತ್ತಿರುತ್ತಾರೆ. ಆದರೆ ನಾವು ಕೋವಿಡ್ ಅವಧಿಯಲ್ಲಿಯೂ ನೇಮಕಾತಿ ಮಾಡಿದ್ದೇವೆ. ಪೊಲೀಸ್ ಹು್ದ್ದೆಗೆ ನೇಮಕಗೊಳ್ಳುವವರ ಶರೀರ ಫಿಟ್ ಇರಬೇಕು. ಹೀಗಾಗಿ ನಾವು ವಯೋಮಿತಿ ಏರಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಲ್ಲಿ ಕೊರತೆ ಉಂಟಾಗಿದೆ ಎಂಬ ಶಾಸಕ ಪ್ರೀತಂ ಗೌಡ ಆರೋಪಕ್ಕೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ರಾಜ್ಯದಲ್ಲಿ 22 ಸಾವಿರ ಪೊಲೀಸ್ ಪೇದೆಗಳ ನೇಮಕಾತಿ ಬಾಕಿ ಉಳಿದಿತ್ತು. ಆದರೆ ಈಗ ಇದು 9430ಕ್ಕೆ ಬಂದು ಕುಸಿದಿದೆ. ನಮ್ಮ ಅವಧಿಯಲ್ಲಿ ನಾವು ಹೆಚ್ಚಿನ ಕಾನ್ಸ್ಟೇಬಲ್ ನೇಮಕಾತಿ ಮಾಡಿದ್ದೇವೆ. ಸಧ್ಯದಲ್ಲಿಯೇ 3500 ಕಾನ್ಸ್ಟೇಬಲ್ಗಳು ಹುದ್ದೆಗೆ ನೇಮಕಗೊಳ್ಳಲಿದ್ದಾರೆ. ಮತ್ತಷ್ಟು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಶೀಘ್ರದಲ್ಲಿಯೇ ಹೊರಡಿಸುತ್ತೇವೆ ಎಂದು ಹೇಳಿದರು .
ಇದನ್ನು ಓದಿ : India Vs Australia T20 : ಮೊಹಾಲಿಯಲ್ಲಿ ನಾಳೆ ಮೊದಲ ಪಂದ್ಯ; ಹೀಗಿದೆ ಭಾರತದ ಪ್ಲೇಯಿಂಗ್ XI
Disappointment for those who were expecting an increase in the age limit of police constables