ಸೋಮವಾರ, ಏಪ್ರಿಲ್ 28, 2025
Homekarnatakaನನ್ನ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಟಿಕೇಟ್ ಕೊಡ್ತಿಲ್ಲ: ಸಿದ್ದರಾಮಯ್ಯ ಹೈಕಮಾಂಡ್ ಗೆ ಬರೆದ ಪತ್ರ ವೈರಲ್

ನನ್ನ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಟಿಕೇಟ್ ಕೊಡ್ತಿಲ್ಲ: ಸಿದ್ದರಾಮಯ್ಯ ಹೈಕಮಾಂಡ್ ಗೆ ಬರೆದ ಪತ್ರ ವೈರಲ್

- Advertisement -

ಬೆಂಗಳೂರೂ : (DK Shivakumar Vs Siddaramaiah) : ಗೆಲುವಿಗಾಗಿ ಕಾಂಗ್ರೆಸ್ ರಾಜ್ಯವ್ಯಾಪಿ ಸಂಘಟನೆ ಆರಂಭಿಸಿದೆ. ಬೂತಮಟ್ಟದಲ್ಲೂ ಪಕ್ಷವನ್ನು ಬಲಗೊಳಿಸುತ್ತಿದೆ. ಆದರೆ ಪಕ್ಷದ ಆಂತರಿಕ ಕಚ್ಚಾಟ ಮಾತ್ರ ಈ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತಿದೆ. ಈಗಾಗಲೇ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಸಂಗತಿ ಮಹತ್ವ ಪಡೆದುಕೊಳ್ಳುತ್ತಿರುವಾಗಲೇ ಸಿದ್ಧರಾಮಯ್ಯನವರು ಡಿಕೆಶಿ ಕುರಿತು ಹೈಕಮಾಂಡ್ ಗೆ ಬರೆದ ಪತ್ರ ವೊಂದು ವೈರಲ್ ಆಗಿದೆ.

ನನ್ನ ಬೆಂಬಲಿಗರು ಎಂಬ ಕಾರಣಕ್ಕೆ ಟಿಕೇಟ್ ನೀಡುವ ವೇಳೆ ಹಲವು ನಿಷ್ಟಾವಂತ‌ಕಾರ್ಯಕರ್ತರು, ನಾಯಕರು ಹಾಗೂ ಟಿಕೇಟ್ ಆಕಾಂಕ್ಷಿಗಳನ್ನು ಕಡೆಗಣಿಸಲಾಗುತ್ತಿದೆ. ಕೆಪಿಸಿಸಿ ನಿಗದಿ ಪಡಿಸಿದ ಮಾನದಂಡಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ ಕಾರ್ಯಕರ್ತರು ಹಾಗೂ ಟಿಕೇಟ್ ಆಕಾಂಕ್ಷಿಗಳನ್ನು ಡಿಕೆಶಿ ಯವರು ನನ್ನ ಬೆಂಬಲಿಗರೆಂಬ ಕಾರಣಕ್ಕೆ ದೂರವಿಡುತ್ತಿದ್ದಾರೆ. ಇದೇ ಕಾರಣಕ್ಕೆ ಒಂದೊಮ್ಮೆ ಕಾಂಗ್ರೆಸ್ ನ ನಿಷ್ಠಾವಂತ ನಾಯಕರು ಟಿಕೇಟ್ ವಂಚಿತರಾದರೇ ಅದು ಪಕ್ಷದ ಮೇಲೆ ಕೆಟ್ಟ ಪರಿಣಾಮ‌ಬೀರಲಿದೆ.

ನನ್ನ ಮೇಲಿನ ದ್ವೇಷ,ಅಸಮಧಾನಕ್ಕೆ ಡಿಕೆಶಿ (DK Shivakumar Vs Siddaramaiah) ಅರ್ಹತೆ ಉಳ್ಳವರಿಗೂ ಟಿಕೇಟ್ ನೀಡದಂತೆ ತಡೆಯುತ್ತಿದ್ದಾರೆ ಎಂದು ಸಿದ್ಧರಾಮಯ್ಯನವರು ಪತ್ರದಲ್ಲಿ ನೇರವಾಗಿ ಉಲ್ಲೇಖಿಸಿದ್ದು,ಪತ್ರ ಸಿದ್ಧರಾಮಯ್ಯನವರ ಸಹಿಯನ್ನು ಒಳಗೊಂಡಿದೆ. ಸೋಷಿಯಲ್ ಮೀಡಿಯಾ ದಲ್ಲಿ ನೋಡಿ ಬೀದಿಗೆ ಬಂತು ಕಾಂಗ್ರೆಸ್ ಒಳಜಗಳ ಎಂಬರ್ಥದಲ್ಲಿ ಈ ಪತ್ರ ವೈರಲ್ ಆಗಿದೆ. ಆದರೆ ಈ ಪತ್ರದ ಅಸಲಿಯತ್ತು ಬೇರೆಯೇ ಇದೆ. ಈ ಪತ್ರವನ್ನು ವೈರಲ್ ಮಾಡಲಾಗಿರೋದು ರಾಜಕೀಯ ಉದ್ದೇಶಕ್ಕೆ. ಆದರೆ ಈ ಪತ್ರ ಅಸಲಿಯಲ್ಲ ನಕಲಿ ಎಂಬುದು ದುರಂತ ಸತ್ಯ.

ಸಿದ್ಧರಾಮಯ್ಯ ಹಾಗೂ ಡಿಕೆಶಿ ನಡುವಿನ ಒಳಜಗಳವನ್ನು ದುರುಪಯೋಗ ಪಡಿಸಿಕೊಂಡು ಸಿದ್ಧರಾಮಯ್ಯನವರ ಲೆಟರ್ ಹೆಡ್ ನ್ನು ನಕಲಿ ಸೃಷ್ಟಿಸಿ ಪತ್ರ ಬರೆಯಲಾಗಿದೆ. ಈ ವಿಚಾರವನ್ನು ಸ್ವತಃ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರೇ ಸ್ಪಷ್ಟ ಪಡಿಸಿದ್ದು, ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಪತ್ರವನ್ನು ವೈರಲ್ ಮಾಡಲಾಗಿದೆ. ಇದು ಬಿಜೆಪಿ ಕೃತ್ಯವೆಂದು ಸಿದ್ಧರಾಮಯ್ಯನವರು ಆರೋಪಿಸಿದ್ದು ಈ ಬಗ್ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಉದ್ದೇಶಪೂರ್ವಕವಾಗಿ ಜನರ ಹಾಗೂ ಕಾರ್ಯಕರ್ತರ ದಿಕ್ಕು ತಪ್ಪಿಸಲು ಬಿಜೆಪಿ ಇಂತಹ ಕೆಳ ಮಟ್ಟದ ಕೃತ್ಯ ಎಸಗಿದೆ ಎಂದು ಸಿದ್ಧರಾಮಯ್ಯನವರು ಆರೋಪಿಸಿದ್ದಾರೆ. ಅಸಲಿಯೋ ನಕಲಿಯೋ ಪತ್ರ ಮಾತ್ರ ಸಖತ್ ವೈರಲ್ ಆಗ್ತಿದ್ದು ಕಾರ್ಯಕರ್ತರು ಯಾವುದನ್ನು ನಂಬಬೇಕೆಂದು ಅರ್ಥವಾಗದೇ ಕಂಗಾಲಾಗಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಡಾ.ಜಿ.ಪರಮೇಶ್ವರ್ ರಾಜೀನಾಮೆ

ಇದನ್ನೂ ಓದಿ : Former CM Siddaramaiah : ಹಾಡಿನ ರೂಪದಲ್ಲಿ ಬರ್ತಿದೆ ಸಿದ್ಧು ಸಾಧನೆ: ಟಾಲಿವುಡ್ ಗಾಯಕ ಧ್ವನಿಯಲ್ಲಿ ಟಗರು ಗೀತೆ

DK Shivakumar did not give tickets to my supporters siddaramaiah letter to high command goes viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular