ಭಾನುವಾರ, ಏಪ್ರಿಲ್ 27, 2025
HomekarnatakaDress code :ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ...

Dress code :ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ ಮಹಾಸಭಾ ಎಚ್ಚರಿಕೆ

- Advertisement -

ಬೆಂಗಳೂರು : ಕರುನಾಡು ಪವಿತ್ರ ಪುಣ್ಯಕ್ಷೇತ್ರಗಳ ಬೀಡು. ಇಲ್ಲಿನ ದೇವಾಲಯಗಳಿಗೆ ನಿತ್ಯವೂ ದೇಶ, ವಿದೇಶಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಇಂತಹ ದೇವಾಲಯದಲ್ಲಿ ಜೀನ್ಸ್‌, ಅಶ್ಲೀಲ ಬಟ್ಟೆ ಧರಿಸಿ ಬರುವ ಭಕ್ತರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಡ್ರೆಸ್‌ಕೋಡ್‌ ಜಾರಿ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಆಗ್ರಹಿಸಿದೆ.

ಭಾರತೀಯ ದೇವಸ್ಥಾನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಭಕ್ತಿಯಿಂದ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ. ಆದರೆ ದೇವಾಲಯಗಳಲ್ಲಿ ಭಕ್ತರು ಜೀನ್ಸ್‌ ತೊಡುವ ಮೂಲಕ ವಿದೇಶಿ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿದ್ದಾರೆ. ಇದು ಇತರ ಭಕ್ತರಿಗೆ ಮುಜುಗರನ್ನು ತರಿಸುತ್ತಿದೆ. ಹೀಗಾಗಿ ಎಲ್ಲಾ ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿಯಾಗಬೇಕು. ಇಲ್ಲವಾದ್ರೆ ಧರಣಿ ನಡೆಸುವುದಾಗಿ ಹಿಂದೂ ಮಹಾಸಭಾ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ: ಗಣೇಶೋತ್ಸವಕ್ಕೆ ಸಿಕ್ಕಿಲ್ಲ ಗ್ರೀನ್‌ ಸಿಗ್ನಲ್‌ : ಸೆಪ್ಟೆಂಬರ್ 5ಕ್ಕೆ ಅಂತಿಮ ತೀರ್ಮಾನ : ಆರ್ ಅಶೋಕ್

ರಾಜ್ಯದ ಬಹುತೇಕ ಪುಣ್ಯಕ್ಷೇತ್ರಗಳಲ್ಲಿ ಡ್ರೆಸ್‌ ಕೋಡ್‌ ಜಾರಿಯಲ್ಲಿದೆ. ಕೊಲ್ಲೂರು, ಧರ್ಮಸ್ಥಳ, ಸುಬ್ರಮಣ್ಯ, ಹೊರನಾಡು, ಶೃಂಗೇರಿ, ಗೋಕರ್ಣ ಸೇರಿದಂತೆ ಹಲವು ದೇವಾಲಯಗಳು ಸಭ್ಯ ಉಡುಪುಗಳನ್ನು ಧರಿಸಿ ಬರುವಂತೆ ಭಕ್ತರಿಗೆ ಈಗಾಗಲೇ ಸೂಚನೆಯನ್ನು ನೀಡಿವೆ.

ಡ್ರೆಸ್‌ ಕೋಡ್‌ ಜಾರಿಯ ಬಗ್ಗೆ ಪರ ವಿರೋಧದ ಚರ್ಚೆಗಳು ಕೇಳಿಬರುತ್ತಿದೆ. ಧಾರ್ಮಿಕತೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಡ್ರೆಸ್‌ ಕೋಡ್‌ ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಭಕ್ತರು ಆಗ್ರಹಿಸುತ್ತಿದ್ರೆ, ಇನ್ನೊಂದೆಡೆ ವೈಯಕ್ತಿಕ ಬದುಕಿನ ಮೇಲೆ ನಿಯಂತ್ರಣ ಹೇರುವುದು ಎಷ್ಟು ಸರಿ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಸರಕಾರ ಈ ಬಗ್ಗೆ ಯಾವ ಕ್ರಮಕೈಗೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ: Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಅಂಥಹ ಹಲವು ದೇವಾಲಯಗಳಲಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದೆ. ಈ ನಿಯಮವನ್ನು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ಧರಣಿ ಮಾಡಬೇಕಾಗುತ್ತದೆ. ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.

(Implement dress code in temples: Hindu Mahasabha warns state government)

RELATED ARTICLES

Most Popular