ಬೆಂಗಳೂರು: 100rs controversy : ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ 100 ರೂ. ದೇಣಿಗೆ ಪಡೆಯುವ ವಿಚಾರದಲ್ಲಿ ತನ್ನ ಹಾಗೂ ಸಿಎಂ ಬೊಮ್ಮಾಯಿ ಅವರ ಪಾತ್ರವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು 100 ರೂ. ದೇಣಿಗೆ ಪಡೆಯುವಂತೆ ಎಸ್‍ಡಿಎಂಸಿಗಳಿಗೆ ಅನುಮತಿ ನೀಡಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಹೀಗೆ ದೇಣಿಗೆ ಸಂಗ್ರಹಿಸಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(RTI) ಅಡಿ ಅವಕಾಶವಿದೆ. ಅದನ್ನು ಬಳಸಿ ಎಸ್‍ಡಿಎಂಸಿಗಳ ಮನವಿ ಮೇರೆಗೆ ಅನುಮತಿ ನೀಡಲಾಗಿದೆ. ಆದರೆ ಇದರಲ್ಲಿ ತನ್ನ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಪಾತ್ರವಿಲ್ಲ. ಈ ವಿಚಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಈ ಸುತ್ತೋಲೆ ಹೊರಡಿಸಿದ ಕೂಡಲೇ ನಾನು ಆಯುಕ್ತರ ಬಳಿ ಮಾತನಾಡಿದ್ದೇನೆ ಎಂದರು.
ಸುತ್ತೋಲೆಯನ್ನು ಹೊರಡಿಸಲು ಇಲಾಖೆಯ ಅಧಿಕಾರಿಗಳಿಗೆ ಅಧಿಕಾರವಿದೆ. ಎಲ್ಲಾ ಸುತ್ತೋಲೆಗಳನ್ನು ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕೆಂದಿಲ್ಲ ಎಂದ ಅವರು, ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಕೆಲವರು ಸರಿಯಾಗಿ ಓದದೇ ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಸ್ಥಳೀಯವಾಗಿ ದೇಣಿಗೆ ಸಂಗ್ರಹಿಸಲು RTI ಅಡಿ ಅವಕಾಶವಿದೆ. ಇದನ್ನು ಕಾಂಗ್ರೆಸ್‍ನವರೇ ಜಾರಿಗೆ ತಂದಿದ್ದರು. ಅದರಲ್ಲಿರುವ ಅಂಶ ಬಳಸಿಕೊಂಡು ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ಸಿದ್ದರಾಮಯ್ಯ ವಿರೋಧಿಸುತ್ತಿರುವುದೇಕೆ..? ಎಂದು ಕಿಡಿಕಾರಿದರು.
ಸುತ್ತೋಲೆಯಲ್ಲಿ ಪೋಷಕರಿಂದ ಬಲವಂತವಾಗಿ ಹಣ ಸಂಗ್ರಹಿಸುವಂತೆ ಎಲ್ಲಿಯೂ ಹೇಳಿಲ್ಲ. ಅವರಾಗಿಯೇ ಕೊಟ್ಟರೆ ಪ್ರತಿ ತಿಂಗಳು ಹಣ ಪಡೆದು ರಸೀದಿ ನೀಡಬೇಕು ಎಂದೇ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ. ಎಸ್‍ಡಿಎಂಸಿಗಳ ಪಡೆದ ಹಣವನ್ನು ದುರುಪಯೋಗಪಡಿಸಿಕೊಂಡರೆ ಸುತ್ತೋಲೆ ಸರ್ಕಾರ ಹಿಂಪಡೆಯುತ್ತದೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಇದನ್ನೂ ಓದಿ: 10889 mosques loudspeakers : 10 ಸಾವಿರಕ್ಕೂ ಅಧಿಕ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಕೆಗೆ : ಅನುಮತಿ ಕೊಟ್ಟ ರಾಜ್ಯ ಸರಕಾರ
ಇದನ್ನೂ ಓದಿ: (Diwali Bonus):ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗೆ ದೀಪಾವಳಿ ಬಂಪರ್; ಮಾಸಿಕ 500 ರೂ.ಮೋಟಾರು ಭತ್ಯೆ ಘೋಷಣೆ
education minister b.c nagesh reacted on 100rs controversy matter