ಬೆಂಗಳೂರು : Electricity Fixed Charges Hike : ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದೆ. ಈ ಯೋಜನೆಗೆ ದಿನಕ್ಕೊಂದು ರೂಲ್ಸ್ ಜಾರಿ ಮಾಡುವ ಮೂಲಕ ಯೋಜನೆಯನ್ನು ಗೊಂದಲಕ್ಕೆ ಒಳಪಡಿಸಿದೆ. ಈ ನಡುವಲ್ಲೇ ಸರಕಾರ ಸದ್ದಿಲ್ಲದೇ ಫಿಕ್ಸೆಡ್ ಚಾರ್ಜ್ ಹೆಚ್ಚಳ ಮಾಡುವ ಮೂಲಕ ವಿದ್ಯುತ್ ಗ್ರಾಹಕರಿಗೆ ಭರ್ಜರಿ ಶಾಕ್ ಕೊಟ್ಟಿದೆ.
ಕರ್ನಾಟಕದ ಜನತೆ ಜುಲೈನಿಂದಲೇ ಉಚಿತ ವಿದ್ಯುತ್ ಭಾಗ್ಯ ದೊರೆಯಲಿದೆ ಎಂದು ಕಾದು ಕುಳಿತಿದ್ದರು. ಆದರೆ ಮೇ ತಿಂಗಳ ಬಿಲ್ ನೋಡಿದ ಗ್ರಾಹಕರು ಇದೀಗ ಕಂಗಾಲಾಗಿದ್ದಾರೆ. ಗೃಹ ಬಳಕೆಯ ವಿದ್ಯುತ್ ಫಿಕ್ಸೆಡ್ ಚಾರ್ಜ್ 125 ರೂಪಾಯಿಯಿದ್ದು, ಇದೀಗ 200 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ವಾಣಿಜ್ಯ ಬಳಕೆಯ ವಿದ್ಯುತ್ ನ ಫಿಕ್ಸೆಡ್ ಚಾರ್ಜ್ ಅನ್ನು ಪ್ರತೀ ಕಿಲೋ ವ್ಯಾಟ್ ವಿದ್ಯುತ್‌ಗೆ 200 ರೂಪಾಯಿಗೆ ಹೆಚ್ಚಳ ಮಾಡಿದೆ. ಪ್ರತೀ ಕೆವಿ ವಿದ್ಯುತ್ ಗೆ ನಿಗದಿತ ಶುಲ್ಕ 100 ರೂ. ಆಗಿದ್ದರೆ, ಅದನ್ನು ಪ್ರತಿ ಕೆವಿ ವಿದ್ಯುತ್ ಅನ್ನು110 ರೂ.ಗೆ ಪರಿಷ್ಕರಿಸಲಾಗಿದೆ. ಒಂದು ಕುಟುಂಬವು 3 ಕೆವಿ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಅವರು 330 ರೂ. ಪೀಕ್ಸೆಡ್ ಜಾರ್ಜ್ ಪಾವತಿಸಬೇಕಾಗಿದೆ. ಇನ್ನೊಂದೆಡೆಯಲ್ಲಿ ಪ್ರತೀ ಯೂನಿಟ್ ವಿದ್ಯುತ್ ಬೆಲೆಯಲ್ಲಿಯೂ ಏರಿಕೆ ಮಾಡಿದೆ. ಪ್ರತೀ ಯೂನಿಟ್ ಬೆಲೆಯಲ್ಲಿ 70 ಪೈಸೆ ಹೆಚ್ಚಳ ಮಾಡಲಾಗಿದೆ. ಅದ್ರಲ್ಲೂ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಈ ತಿಂಗಳ ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದಾರೆ.
ಭಾಗ್ಯಜ್ಯೋತಿ ಯೋಜನೆ ಯಾರಿಗೆ ಸಿಗುತ್ತೆ ?
ಕರ್ನಾಟಕ ಸರಕಾರ ಭಾಗ್ಯಜ್ಯೋತಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಬಾಡಿಗೆದಾರರು ಪ್ರತೀ 200 ಯೂನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ಪಡೆಯ ಬಹುದಾಗಿದೆ. ಒಂದೊಮ್ಮೆ 200 ಯೂನಿಟ್ ವಿದ್ಯುತ್ ಬಳಕೆ ಮೀರಿದ್ರೆ ಅಂತಹ ಗ್ರಾಹಕರು ಸಂಪೂರ್ಣ ಬಿಲ್ ಪಾವತಿ ಮಾಡಬೇಕಾಗಿದೆ. ಗ್ರಾಹಕರ ಬಳಕೆಯ ಸರಾಸರಿಯನ್ನು ಆಧರಿಸಿ ಉಚಿತ ವಿದ್ಯುತ್ ಯೋಜನೆ ನೀಡಲಾಗುತ್ತಿದ್ದು, ಎಲ್ಲಾ ಗ್ರಾಹಕರಿಗೂ 200 ಯೂನಿಟ್ ವರೆಗೆ ಪ್ರಯೋಜನ ದೊರೆಯುವುದಿಲ್ಲ. ಈಗಾಗಲೇ ಸರಕಾರ ಉಚಿತ ವಿದ್ಯುತ್ ಯೋಜನೆಗಾಗಿ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದೆ.
ಇದನ್ನೂ ಓದಿ : ಗಂಡ ಆದಾಯ ತೆರಿಗೆ ಪಾವತಿಸಿದ್ರೆ ಹೆಂಡತಿಗಿಲ್ಲ 2000 ರೂಪಾಯಿ : ಗೃಹಲಕ್ಷ್ಮೀ ಯೋಜನೆಗೆ ಹೊಸ ಕಂಡಿಷನ್
ಇದನ್ನೂ ಓದಿ : ಬೈಪಾರ್ಜೋಯ್ ಚಂಡಮಾರುತ : ಕರಾವಳಿ ಕರ್ನಾಟಕಕ್ಕೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
Fixed Charges Electricity Bill Hike Karnataka