Manohar Prasad passed away : ಮಂಗಳೂರು : ಖ್ಯಾತ ಹಿರಿಯ ಪತ್ರಕರ್ತ , ಚಲನಚಿತ್ರನಟ, ರಂಗಭೂಮಿ ಕಲಾವಿದ, ಖ್ಯಾತ ನಿರೂಪಕ ಮನೋಹರ್ ಪ್ರಸಾದ್ ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮನೋಹರ್ ಪ್ರಸಾದ್ ನಿಧನಕ್ಕೆ ಗಣ್ಯರು, ಪತ್ರಕರ್ತರು ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದ ಕರ್ವಾಲು ಗ್ರಾಮದಲ್ಲಿ ಜನಿಸಿದ್ದ ಮನೋಹರ್ ಪ್ರಸಾದ್ ಅವರು ಮಂಗಳೂರಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದರು. ನಂತರದಲ್ಲಿ ನವ ಭಾರತ ಪತ್ರಿಕೆಯ ಮೂಲಕ ಪತ್ರಕರ್ತನಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ನವಭಾರತ ಪತ್ರಿಕೆಯ ನಂತರದಲ್ಲಿ ಉದಯವಾಣಿ ಪತ್ರಿಕೆಯ ಮಂಗಳೂರು ವರದಿಗಾರರಾಗಿ ವೃತ್ತಿಯನ್ನು ಮುಂದುವರಿಸಿದ್ದರು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ? ಗುಡ್‌ನ್ಯೂಸ್ ಕೊಟ್ಟ ಕರ್ನಾಟಕ ಸರಕಾರ
ಉದಯವಾಣಿ ಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್ ಹಾಗೂ ಸಹಾಯಕ ಸಂಪಾದಕರಾಗಿಯೂ ಸುಮಾರು ೩೬ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಪತ್ರಕರ್ತನಾಗಿ ಸಾಹಿತಿಯಾಗಿ, ಕಲಾವಿದನಾಗಿ, ನಿರೂಪಕರಾಗಿ ಮನೋಹರ್ ಪ್ರಸಾದ್ ಅವರು ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ವೃತ್ತಿಯಿಂದ ನಿವೃತ್ತರಾಗಿದ್ದರು.

ಪತ್ರಕರ್ತ ಮನೋಹರ್ ಪ್ರಸಾದ್ ಅವರು ಬರೋಬ್ಬರಿ ೬೦೦ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಮಹೋಹರ್ ಪ್ರಸಾದ್ ಅವರಿಗೆ ಸಂಧಿವೆ. ರಂಗಭೂಮಿ ಹಾಗೂ ಸಿನಿಮಾ ನಟರಾಗಿ ಸೀತಾನದಿ, ದಬಕ್ ದಬಾ ಐಸಾ, ಐಸ್ ಕ್ರೀಂ, ಬೊಗಾಣಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.
ಇದನ್ನೂ ಓದಿ : ಇದು ಶೃಂಗೇರಿ ಶಾರದೆ ಮೂಲ ಕ್ಷೇತ್ರ – ನಿಂತ ಭಂಗಿಯಲ್ಲೇ ಪೂಜಿಸಲ್ಪಡುತ್ತಾಳೆ ತಾಯಿ
Famous senior journalist Manohar Prasad passed away