ಉಡುಪಿ (Udupi ) : ಮಕ್ಕಳಿಗೆ ಜನ್ಮ ನೀಡು ಜೊತೆಗೆ ಅವರನ್ನು ಸಂಸ್ಕಾರಯುತವಾಗಿ ಬೆಳೆಸುವ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ. ಅವರು ಉಡುಪಿಯ ಆದರ್ಶ ಆಸ್ಪತ್ರೆ (Adarsha Hospital) ಯ ವತಿಯಲ್ಲಿ ಬೆಂಗಳೂರಿನ ಕ್ಲೌಡ್ ನೈನ್ ಫರ್ಟಿಲಿಟಿ (Cloudnine Fertility) ಆಸ್ಪತ್ರೆಯ ಸಹಭಾಗಿತ್ವದಲ್ಲಿ ಆರಂಭಿಸಿದ್ದ ಫರ್ಟಿಲಿಟಿ ಕ್ಲಿನಿಕ್ (Fertility Clinic) ಉದ್ಘಾಟಿಸಿ ಮಾತನಾಡಿದರು.

ಉಡುಪಿಯ ಆದರ್ಶ ಆಸ್ಪತ್ರೆ ಹೊರರೋಗಿ ವಿಭಾಗದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಆದರ್ಶ ಆಸ್ಪತ್ರೆಯು ರೋಗಿಗಳು ಆರೈಕೆ ಮಾಡುವ ಪದ್ಧತಿ ಚಿಕಿತ್ಸಾ ಕ್ರಮದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಮಕ್ಕಳಿಗೆ ಜನ್ಮ ನೀಡಿದರೆ ಸಾಲದು ಮಕ್ಕಳು ಸಂಸ್ಕಾರಯುತರಾಗಿ ಬೆಳೆಯಬೇಕು ಎಂದಿದ್ದಾರೆ.

ಸಮಾಜಕ್ಕೆ ಅನ್ಯಾಯ ಮಾಡುವಂತೆ ಮಕ್ಕಳನ್ನು ಬೆಳೆಸುವುದು ಬೇಡ. ಸಮಾಜಮುಖಿ ಚಿಂತನೆ ಉಳ್ಳ ಒಂದು ಮನೆಯಲ್ಲಿದ್ದರೂ ಸಾಕು. ಆದರ್ಶ ಆಸ್ಪತ್ರೆ ಉತ್ತಮ ಚಿಕಿತ್ಸಾಾ ವಿಧಾನ, ಆರೋಗ್ಯ ಸಲಹೆ ನೀಡುವ ಮೂಲಕ ಮಾದರಿ ಆರೋಗ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಫರ್ಟಿಲಿಟಿ ಕ್ಲೀನಿಕ್ ಮೂಲಕ ಜನರಿಗೆ ಇನ್ನಷ್ಟು ಅಗತ್ಯ ಮಾಹಿತಿ ಸಿಗುವಂತಾಗಲಿ ಎಂದು ಆಶೀರ್ವಚನ ನೀಡಿದರು.
ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ ಜಿ. ಎಸ್. ಚಂದ್ರಶೇಖರ್ ಮಾತನಾಡಿ, ಕ್ಲೌಡ್ ನೈನ್
ಫರ್ಟಿಲಿಟಿ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಬಂಜೆತನದ ಬಗ್ಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸಲಹೆ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಫರ್ಟಿಲಿಟಿ ತಜ್ಞೆ ಡಾ। ಅನುಷಾ ಜಿ. ಪಿ. ಅವರು ಪ್ರತೀ ತಿಂಗಳು ಮೊದಲ ಬುಧವಾರ ಮತ್ತು 3ನೇ ಬುಧವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಲಭ್ಯರಿರುತ್ತಾಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : Ration Card e- KYC : ರೇಷನ್ ಕಾರ್ಡ್‌ದಾರರ ಗಮನಕ್ಕೆ : ಅಗಸ್ಟ್ 31ರೊಳಗೆ ಇಕೆವೈಸಿ ಮಾಡಿಸದಿದ್ರೆ ಸಿಗಲ್ಲ ರೇಷನ್

ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯ ಫರ್ಟಿಲಿಟಿ ತಜ್ಞೆ ಡಾ ಅನುಷಾ ಜಿ. ಪಿ. ಮಾತನಾಡಿ, ಬಂಜೆತನದ ಬಗ್ಗೆ ಅನೇಕರಿಗೆ ಸರಿಯಾದ ಮಾರ್ಗದರ್ಶನವಿಲ್ಲ. ಭಾರತದಲ್ಲಿ ಶೇ.30ರಷ್ಟು ದಂಪತಿಗಳಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಇರುವರಿಗೆ ಪರಿಶೀಲಿಸಿ ಅಗತ್ಯಕ್ಕೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ. ಬಂಜೆತನಕ್ಕೆ ಆಸ್ಪತ್ರೆಯಲ್ಲಿ ನೀಡಲಾಗುವ ವಿವಿಧ ಚಿಕಿತ್ಸಾ ಸೌಲಭ್ಯಗಳ ಕುರಿತು ವಿವರಿಸಿದರು.
ಇದನ್ನೂ ಓದಿ : ಬೈಂದೂರು : ಮೆಹಂದಿ ಶಾಸ್ತ್ರದ ವೇಳೆ ಮದುಮಗ ಎಸ್ಕೇಪ್, ಮದುವೆಯೇ ರದ್ದು !
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್, ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ದಮಯಂತಿ, ಡಾ.ರಂಜಿತಾ ಎಸ್. ನಾಯಕ್ ಉಪಸ್ಥಿತರಿದ್ದರು. ರಿಮಾ ಮಿನೇಜಸ್ ವಂದಿಸಿ, ಡಯಟಿಶೀಯನ್ ಅನುಶ್ರೀ ಆಚಾರ್ಯ ನಿರೂಪಿಸಿದರು.
Fertility clinic launched in Udupi in collaboration with Adarsh Hospital and Cloudnine Fertility Bangalore