ಸೋಮವಾರ, ಏಪ್ರಿಲ್ 28, 2025
HomekarnatakaUgadi : ಕೊರೋನಾ ಬಳಿಕ ಅದ್ದೂರಿ ಯುಗಾದಿಗೆ ಸಿದ್ಧತೆ : ಹೂವು-ಹಣ್ಣು ತರಕಾರಿ ಬೆಲೆ ದುಬಾರಿ

Ugadi : ಕೊರೋನಾ ಬಳಿಕ ಅದ್ದೂರಿ ಯುಗಾದಿಗೆ ಸಿದ್ಧತೆ : ಹೂವು-ಹಣ್ಣು ತರಕಾರಿ ಬೆಲೆ ದುಬಾರಿ

- Advertisement -

ಬೆಂಗಳೂರು : ಎರಡು ವರ್ಷಗಳಿಂದ ಹಬ್ಬಹರಿದಿನಗಳ ಮೇಲೆ ಕಾರ್ಮೋಡದಂತೆ ಆವರಿಸಿದ್ದ ಕರೋನಾ (Corona Virus) ಭೀತಿ ಈ ವರ್ಷ ಕೊಂಚ ತಗ್ಗಿದೆ. ಹೀಗಾಗಿ ಹಿಂದೂಗಳ ಹೊಸವರ್ಷ ಯುಗಾದಿ (Ugadi ) ಆಚರಣೆಗೆ ಇನ್ನಿಲ್ಲದ ಸಡಗರ ಮನೆಮಾಡಿದ್ದು, ಮಾರುಕಟ್ಟೆಗಳು ಈ ಹಿಂದಿನಂತೆ ತುಂಬಿ ತುಳುಕುತ್ತಿವೆ. ನಗರದ ಕೆ.ಅರ್. ಮಾರುಕಟ್ಟೆ, ಯಶ್ವಂತಪುರ ಮಾರ್ಕೆಟ್, ಮಲ್ಲೇಶ್ವರಂ ಮಾರುಕಟ್ಟೆ, ವಿಜಯನಗರ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟು ಜೋರಾಗಿದ್ದು, ಇದನ್ನು ಹೊರತು ಪಡಿಸಿ ವಸ್ತ್ರ,ಒಡವೆ ಖರೀದಿಯೂ ಜೋರಾಗಿದೆ.

ಇನ್ನೊಂದೆಡೆ ಕಳೆದ ಎರಡು ವರ್ಷಗಳಿಂದ ವ್ಯಾಪಾರವಿಲ್ಲದೇ ಕುಗ್ಗಿದ್ದ ಅಂಗಡಿಕಾರರು ಹಾಗೂ ವ್ಯಾಪಾರಸ್ಥರ ಮುಖದಲ್ಲೂ ಕೊಂಚ ನಗು ಅರಳಿದ್ದು ಕಳೆದ ಒಂದು ವಾರಕ್ಕೆ ಹೋಲಿಸಿದ್ರೇ ಈಗ ಹಬ್ಬದ ಹಿನ್ನೆಲೆಯಲ್ಲಿ ಕೊಂಚ ಬೆಲೆ ಏರಿಕೆ ಗ್ರಾಹಕರ ಕೈ ಸುಡಲಾರಂಭಿಸಿದೆ. ಯುಗಾದಿ ಹಬ್ಬದ ಹಿನ್ನೆಲೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಸ್ವಲ್ಪ ಏರಿಕೆ ಆಗಿದ್ದು, ಹಣ್ಣುಗಳಲ್ಲಿ 20-30 ರೂಪಾಯಿ ದರ ಏರಿಕೆಯಾಗಿದೆ. ಇನ್ನೂ ಹೂವುಗಳಲ್ಲಿ 10-20 ಏರಿಕೆಯಾಗಿದೆ.

Ugadi : ವಿವಿಧ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ

  • ಮಲ್ಲಿಗೆ ಮೊಗ್ಗು 200 kg
  • ಸೇವಂತಿಗೆ 140 kg
  • ಕನಕಾಂಬರ 300 kg
  • ಸುಗಂಧರಾಜ 60 kg
  • ಗುಲಾಬಿ 100 kg
  • ಚೆಂಡು ಹೂವು 40 kg

Ugadi : ಇಂದಿನ ಹಣ್ಣುಗಳ ಬೆಲೆ :

  • ಸೇಬು 160 kg
  • ದಾಳಿಂಬೆ 250 kg
  • ಮೂಸಂಬಿ 100 kg
  • ಆರೆಂಜ್ 120 kg
  • ಸಪೋಟ 100 kg
  • ಸೀಬೆಹಣ್ಣು 120 kg
  • ಏಲಕ್ಕಿ ಬಾಳೆಹಣ್ಣು 70 kg
  • ದ್ರಾಕ್ಷಿ 100-120 kg

ಯುಗಾದಿ ಆಚರಣೆಗೆ ಅಗತ್ಯವಾಗಿ ಬೇಕಾಗಿರುವ ಮಾವಿನ ಎಲೆ ಕಟ್ಟಿಗೆ 10 ರೂಪಾಯಿ ದರದಲ್ಲಿದ್ದರೇ, ಬೇವಿನ ಸೊಪ್ಪು ಕಟ್ಟು 20 ರೂಪಾಯಿ, ತುಳಸಿ ತೋರಣ – 50, ಮಾರು ಬೆಲ್ಲ (ಅಚ್ಚು / ಉಂಡೆ) – 50 – 60 kg ದರದಲ್ಲಿ ಮಾರಾಟವಾಗುತ್ತಿದೆ. ಕೇವಲ ಹೂವು ಹಣ್ಣು ಮಾತ್ರವಲ್ಲ ಯುಗಾದಿ ಮಾರನೇ ದಿನ ಆಚರಿಸಲಾಗುವ ಹೊಸ್ತೂಡಕು ಹಬ್ಬಕ್ಕೂ ಮಾಂಸ ಮಾರಾಟ ಜೋರಾಗಿದ್ದು, ಕುರಿ ಕೋಳಿಗಳ ಬೆಲೆ ತುಸು ಹೆಚ್ಚಿದೆ.

ಇದನ್ನೂ ಓದಿ : Happy Ugadi 2022 : ಯುಗಾದಿ 2022 : ಈ ದಿನದ ಮಹತ್ವ, ಆಚರಣೆಯ ಬಗ್ಗೆ ನೀವೂ ತಿಳಿಯಿರಿ

ಇದನ್ನೂ ಓದಿ : Delicious Mango : ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ರುಚಿಕರ ಮಾವು : ಕಾರಣ ಏನು ಗೊತ್ತಾ?

Grand Ugadi Celebration After Corona, flower fruit vegetable is expensive

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular