ಬೆಂಗಳೂರು : ನವರಾತ್ರಿಯ (Dussehra Festival) ಹೊತ್ತಲ್ಲೇ ರಾಜ್ಯ ಸರಕಾರ ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರಕಾರ ಇದೀಗ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಮೂಲಕ ಗೃಹಿಣಿಯರಿಗೆ 2ನೇ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದೆ.
ಅಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ಮು ಕರ್ನಾಟಕದಲ್ಲಿ (Karnataka) ಜಾರಿ ಮಾಡಿದ್ದ ರಾಜ್ಯ ಸರಕಾರ ಸಪ್ಟೆಂಬರ್ ತಿಂಗಳಲ್ಲಿ ಮೊದಲ ಕಂತಿನ ಹಣವನ್ನು ಪಾವತಿ ಮಾಡಿದೆ. ಇದೀಗ ಸರಕಾರ ನವರಾತ್ರಿ, ದಸರಾ ಹೊತ್ತಲ್ಲೇ ಎರಡನೇ ಕಂತಿನ ಹಣವನ್ಮು ಜಮೆ ಮಾಡಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೂ ಒಂದನೇ ಕಂತಿನ ಹಣ ಜಮೆ ಆಗದೇ ಇರುವವರಿಗೆ ಇದೀಗ ಪಡಿತರ ಚೀಟಿಯಲ್ಲಿನ ಸಮಸ್ಯೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಮಾಡಿದವರಿಗೆ ಈ ಬಾರಿ ಸಪ್ಟೆಂಬರ್, ಅಕ್ಟೋಬರ್ ತಿಂಗಳ ಹಣ ಒಟ್ಟಿಗೆ ಜಮೆ ಆಗಲಿದೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ರಾಜ್ಯ ಸರಕಾರ ಮನೆಯ ಯಜಮಾನಿಯ ಖಾತೆಗೆ 2000 ರೂಪಾಯಿ ಹಣವನ್ಮು ಜಮೆ ಮಾಡುತ್ತಿದೆ. ಮಹಿಳೆಯರನ್ಮು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ (Congress Government) ಚುನಾವಣಾ ಪೂರ್ವದಲ್ಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ ಈಗಾಗಲೇ ರಾಜ್ಯದಲ್ಲಿ ಜಾರಿಗೆ ತಂದಿದೆ.. ಯುವ ನಿಧಿ ಯೋಜನೆ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿಯ ತಿಂಗಳಲ್ಲಿ ಜಾರಿಗೆ ಬರಲಿದೆ.
ಗೃಹಲಕ್ಷ್ಮೀ ಸೇರಿದಂತೆ ಸರಕಾರದ ಯೋಜನೆಗಳು ಜನರಿಗೆ ತಲುಪಬೇಕು ಅನ್ನೋ ಉದ್ದೇಶದಿಂದಲೇ ರಾಜ್ಯ ಸರಕಾರ ಇದೀಗ ಎರಡು ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ ಸರ್ವರ್ ಸಮಸ್ಯೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಸಾಧ್ಯವಾಗಿರಲಿಲ್ಲ.
ಇರೀಗ ಸರ್ವರ್ ಸಮಸ್ಯೆ ಉಂಟಾಗಿರುವ ಜಿಲ್ಲೆಗಳಿಗೆ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಕಾಲಾವಕಾಶವನ್ನು ನೀಡಿದೆ. ಸದ್ಯಕ್ಕೆ ಸರಕಾರ ನೀಡುವ ಕೊನೆಯ ಅವಕಾಶ ಆಗಿರಲಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಗೃಹಲಕ್ಷ್ಮೀ ಯೋಜನೆಯ ಲೋಪದೋಷ ಗಳನ್ನು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿದವರಿಗೆ ಸರಕಾರ ಇದೀಗ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಜಮೆ ಮಾಡಿದೆ. ಅದ್ರಲ್ಲೂ ಹಬ್ಬದ ಹೊತ್ತಲ್ಲೇ ಎರಡು ಕಂತುಗಳ ಹಣ ಒಟ್ಟಿಗೆ ಸಿಕ್ಕಿರುವುದರಿಂದ ಬಹುತೇಕರು ಸಂಭ್ರಮದಲ್ಲಿದ್ದಾರೆ.

.
ಆದರೆ ಪಡಿತರ ಚೀಟಿಯಲ್ಲಿ ಲೋಪದೋಷಗಳಿದ್ದು, ಅದನ್ನು ಸರಿಪಡಿಸದೇ ಇರುವ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಈ ಬಾರಿಯ ಹಣಜಮೆ ಆಗುವುದಿಲ್ಲ. ಇನ್ನು ಗೃಹಿಣಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ, ಇಲ್ಲಾ ಗೃಹಿಣಿಯ ಪತಿ ಆದಾಯ ತೆರಿಗೆ ಅಥವಾ ವಾಣಿಜ್ಯ ತೆರಿಗೆ ಪಾವತಿದಾರರು ಆಗಿದ್ದರೆ, ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ಸರಕಾರ ಹೇಳಿದೆ.
ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಜಮೆ ಆಗದೇ ಇರುವ ಅರ್ಜಿದಾರರಿಗೆ ಯಾವ ಕಾರಣಕ್ಕೆ ಜಮೆ ಆಗಿಲ್ಲ ಅನ್ನುವ ಕುರಿತು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಸಾವಿರಾರು ಮಂದಿ ಈಗಾಗಲೇ ಸಾವನ್ನಪ್ಪಿದವರ ಹೆಸರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು ಅನ್ನುವ ಆಘಾತಕಾರಿ ಮಾಹಿತಿ ಬಯಲಾಗಿತ್ತು.