ಬೆಂಗಳೂರು : Gruha Lakshmi Yojana : ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿಯನ್ನು ನೀಡುವ ಗೃಹಲಕ್ಷ್ಮೀ ಯೋಜನೆಗೆ ಜುಲೈ 19 ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಯೋಜನೆಗೆ ಚಾಲನೆ ನೀಡಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಂಬಂಧ ರಾಷ್ಟ್ರೀಯ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಆಗಸ್ಟ್ 16 ಅಥವಾ 17 ರಂದು ಯಜಮಾನಿ ಖಾತೆಗೆ ಎರಡು ಸಾವಿರ ರೂ. ಹಣ ಹಾಕುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲುಗಳು ಬೇಕು, ಹೇಗೆ ಅರ್ಜಿ ಸಲ್ಲಿಸಬಹುದು ಅನ್ನೋ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತ್ಯೇಕ ಆಪ್ ಸಿದ್ದಪಡಿಸಿದೆ. ಗೃಹಜ್ಯೋತಿ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ನಿವಾರಣೆ ಮಾಡುವ ಸಲುವಾಗಿ ಇಲಾಖೆ ತಾಂತ್ರಿಕವಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಅದರಂತೆ ಇಂದು ಸಂಜೆ 5ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ನ 4 ನೇ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆ ಇಂದು ಚಾಲನೆ ನೀಡಲಿದ್ದಾರೆ. ಈಗಾಗಲೇ ಯೋಜನೆ ಜಾರಿಗೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್‌ಎಂಎಸ್ ಮೂಲಕ ರವಾನೆ ಮಾಡಲಾಗುವುದು.ಮನೆಯ ಯಜಮಾನಿ 2000 ರೂಪಾಯಿ ಹಣವನ್ನು ಪಡೆಯುವ ಗೃಹಲಕ್ಷ್ಮೀ ಯೋಜನೆಗೆ ಗೂಗಲ್ ಪ್ಲೇ ಸ್ಟೋರ್, ಆಪಲ್ ಆಪ್ ಜೊತೆಗೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಅವಕಾಶ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ವಿವರ :
- ಆಧಾರ್ ಕಾರ್ಡ್ ಸಂಖ್ಯೆ
- ಬ್ಯಾಂಕ್ ಖಾತೆಯ ಪಾಸ್‌ಬುಕ್
- ಬ್ಯಾಂಕ್ ಪಾಸ್ ಬುಕ್‌ಗೆ ಆಧಾರ್ ಲಿಂಕ್ ಆಗಿರಬೇಕು
ಇದನ್ನೂ ಓದಿ : Maravante Beach : ಮರವಂತೆ ಬೀಚ್‌ನಲ್ಲಿ ಯುವಕ ನೀರುಪಾಲು : ಪ್ರವಾಸಿಗರ ನಿರ್ಲಕ್ಷ್ಯಕ್ಕೆ ಬೀಳುತ್ತಿಲ್ಲ ಬ್ರೇಕ್
ಇದನ್ನೂ ಓದಿ : Udupi news : ಮೀನುಗಾರರಿಗೆ ಗುಡ್ ನ್ಯೂಸ್ : ಸಾಮೂಹಿಕ ಅಪಘಾತ ವಿಮಾ ಯೋಜನೆ ಘೋಷಿಸಿದ ಸರಕಾರ
ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ನಲಿ ಮನೆಯೊಡತಿಯ ಹೆಸರು ಇರಲೇ ಬೇಕು. ಮನೆಯ ಯಜಮಾನಿಗೆ ಬ್ಯಾಂಕ್ ಖಾತೆಯ ಜೊತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಮನೆಯ ಯಜಮಾನಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಅಲ್ಲದೇ ಮನೆಯೊಡತಿಯ ಪತಿ ಜಿಎಸ್‌ಟಿ ಪಾವತಿದಾರರಾಗಿರಬಾರದು ಎಂಬ ನಿಯಮಗಳನ್ನು ಅಳವಡಿಸಲಾಗಿದೆ.
Gruha Lakshmi Yojana: Application submission starts from today