ಸೋಮವಾರ, ಏಪ್ರಿಲ್ 28, 2025
Homekarnatakaಎಚ್.ಡಿ. ಕುಮಾರಸ್ವಾಮಿ ಸಿಡಿಯೂ ಇದೆ: ಬಿಜೆಪಿ ರವಿಕುಮಾರ್ ಸ್ಪೋಟಕ ಹೇಳಿಕೆ

ಎಚ್.ಡಿ. ಕುಮಾರಸ್ವಾಮಿ ಸಿಡಿಯೂ ಇದೆ: ಬಿಜೆಪಿ ರವಿಕುಮಾರ್ ಸ್ಪೋಟಕ ಹೇಳಿಕೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಸಿಡಿ ಫೈಟ್ ಕುತೂಹಲ ಘಟ್ಟದಲ್ಲಿರುವಾಗಲೇ ಈಗ‌ಮತ್ತೊಂದು ಸಿಡಿ ಸ್ಪೋಟದ ಮುನ್ಸೂಚನೆ ಸಿಕ್ಕಿದೆ. ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿದೆ ಸಿಎಂ ಸ್ಥಾನಕ್ಕೇರುವ ಕನಸಿನಲ್ಲಿರೋ ಮಾಜಿಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಸಿಡಿ ಬಾಂಬ್ ಸಿಡಿಸಿದ್ದು, ಕುಮಾರಸ್ವಾಮಿ ಯವರ ಸಿಡಿ (HD Kumaraswamy CD) ಇದೆ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸತೊಂದು ವಿವಾದಕ್ಕೆ ಮುನ್ನುಡಿ ಬರೆದಿದೆ.

ಪ್ರಹ್ಲಾದ್ ಜೋಷಿ ಉತ್ತರ ಬ್ರಾಹ್ಮಣರು. ಗಾಂಧಿಯನ್ನು ಕೊಂದ ಸಮುದಾಯಕ್ಕೆ ಸೇರಿದವರು.ಶೃಂಗೇರಿ ಶಂಕರಮಠದ ಮೇಲೆ ದಾಳಿ ಮಾಡಿದ ಸಮುದಾಯಕ್ಕೆ ಸೇರಿದವರು. ಅಂತಹ ಬ್ರಾಹ್ಮಣ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಹಾಗೂ ಆರ್.ಎಸ್.ಎಸ್ ಮುಂದಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಈ ಆರೋಪಕ್ಕೆ ಉತ್ತರ ನೀಡುವ ವೇಳೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಕುಮಾರಸ್ವಾಮಿ ಸ್ವಜಾತಿ ಕೂಪಮಂಡೂಕ. ಸ್ವಜಾತಿ ಬಿಟ್ಟು ಹೊರಗಡೆ ಬರಲ್ಲ ಅವರು. ಎಚ್ಡಿಕೆ‌ತಮ್ಮ ಕುಟುಂಬ ಮನೆ ಬಿಟ್ಟು ಹೊರಗೆ ಬರಲಿ. ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಮೊದಲು ಹೇಳಲಿ. ಅವರು ಮುಖ್ಯಮಂತ್ರಿಯಾಗಿದ್ದಾಗ ತಾಜ್ ವೆಸ್ಟೆಂಡ್ ನಿಂದ ಆಡಳಿತ ಮಾಡಿದ್ದನ್ನು ಯಾರು ಮರೆತಿಲ್ಲ ಎಂದು ರವಿಕುಮಾರ್ ವಾಗ್ದಾಳಿ ಮಾಡಿದ್ದಾರೆ.

ಮಾತ್ರವಲ್ಲ ಗಾಂಧಿ ಹತ್ಯೆ ಬಗ್ಗೆ ಜಸ್ಟೀದ್ ಕಪೂರ್ ವರದಿ ಓದಲಿ. ಅವರಿಗೆ ಜೋಷಿ ಹೇಳಿದ್ದು ಸರಿಯಾಗಿದೆ. ಅವರು ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ‌ಮಾಡಲಿ ಎಂದು ರವಿ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯವರು ಸಿಡಿ ಯಾತ್ರೆ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಏನು ಸಾಚಾ ಅಲ್ಲ ಎಂದರು.

ಈ ವೇಳೆ ಪತ್ರಕರ್ತರು ಕುಮಾರಸ್ವಾಮಿಯವರ ಸಿಡಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ‌.‌ಇದಕ್ಕೆ ಉತ್ತರಿಸಿದ ರವಿಕುಮಾರ್, ಕುಮಾರಸ್ವಾಮಿ ಯವರದ್ದು ತಾಜ್ ವೆಸ್ಟೆಂಡ್ ಹೊಟೇಲ್ ಹಾಗೂ ತೋಟದ ಮನೆಯಲ್ಲಿ ಏನೇನು ಆಗಿದೆ ಎಂದು ಎಳೆ ಎಳೆಯಾಗಿ ನಾವು ಬೇಕಿದ್ರೇ ಬಿಚ್ಚಿಡತೇವೆ. ಅವರು ಮುಂದೇ ಮಾತಾಡಲಿ, ಅದಕ್ಕೆ ಸರಿಯಾಗಿ ನಾವು ಉತ್ತರ ಕೊಡ್ತಿವಿ. ನಾವು ರಾಜಕಾರಣ ಮಾಡಲು ಬಂದಿದ್ದೇವೆ ಎಂದಿದ್ದಾರೆ. ಆ ಮೂಲಕ ರವಿಕುಮಾರ್ ಪರೋಕ್ಷವಾಗಿ ಕುಮಾರಸ್ವಾಮಿಯವರ ಸಿಡಿ ಇದೆ , ಅಗತ್ಯ ಬಿದ್ದರೇ ರಿಲೀಸ್ ಮಾಡ್ತಿವಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮತ್ತೆ ಸಿಡಿ ಸಿಡಿಯೋ ಮುನ್ಸೂಚನೆ ಸಿಕ್ಕಿದ್ದು ಬಿಜೆಪಿ ಆರೋಪಕ್ಕೆ ಕುಮಾರಸ್ವಾಮಿ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ : BL Santhosh : ಹಿರಿಯರಿಗೆ ಕೋಕ್, ಕುಟುಂಬ ರಾಜಕಾರಣಕ್ಕೆ ಬ್ರೇಕ್ : ಟಿಕೇಟ್ ಹಂಚಿಕೆ ಬಿ.ಎಲ್.ಸಂತೋಷ್ ಹೆಗಲಿಗೆ

ಇದನ್ನೂ ಓದಿ : Former CM Siddaramaiah : ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಪಣ: ಕ್ಷೇತ್ರದಲ್ಲೇ ಬೀಡುಬಿಟ್ಟ ಪುತ್ರ ಯತೀಂದ್ರ

HD Kumaraswamy CD is also there: BJP Ravikumar explosive statement

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular