ಸೋಮವಾರ, ಏಪ್ರಿಲ್ 28, 2025
HomekarnatakaHeavy Rainfall Alert : ಮುಂದಿನ 21 ಗಂಟೆಗಳಲ್ಲಿ ರಾಜ್ಯದ 4 ಜಿಲ್ಲೆಗಳಲ್ಲಿ ಭಾರೀ ಮಳೆ...

Heavy Rainfall Alert : ಮುಂದಿನ 21 ಗಂಟೆಗಳಲ್ಲಿ ರಾಜ್ಯದ 4 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ನೆಚ್ಚರಿಕೆ

- Advertisement -

ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ನಿನ್ನೆಯಿಂದಲೂ ಮೊಡ ಕವಿದ (Heavy Rainfall Alert) ವಾತಾವರಣದಿಂದ ಕೂಡಿದ್ದು, ಗಾಳಿ ಜೋರಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಆಗಿದೆ. ಇನ್ನು ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈಋತ್ಯ ಮಾನ್ಸೂನ್‌ ಮಾರುತ ಪ್ರತಿ ಜೂನ್‌ 1ರಂದು ಕೇರಳ ಪ್ರವೇಶಿಸುತ್ತದೆ. ಆದರೆ ಈ ಬಾರಿ ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾಜ್ಯದಲ್ಲಿ ಮುಂಗಾರು ಮಳೆ ಜೂನ್‌ ಎರಡನೇ ವಾರದಲ್ಲಿ ಆಗುವ ಸಂಭವ ಇರುತ್ತದೆ.

ಮಾನ್ಸೂನ್‌ ಮಾರುತದ ವಿಳಂಬವಾಗುವ ನಿರೀಕ್ಷೆ ಇರುವುದರಿಂದ ಜೂನ್‌ 4ರಂದು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್‌ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆ ಕೂಡ ಇರುತ್ತದೆ. ಅದರಲ್ಲೂ ನಮ್ಮ ದೇಶ ಕೃಷಿ ಆಧರಿತವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟು ಮುಂಗಾರು ಮಳೆ ಒಳಗೊಂಡಿದೆ. ಹೀಗಾಗಿ ಈ ಮಳೆಯೇ ಸಕಾಲದಲ್ಲಿ ಬರದೇ ಇದ್ದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ.

ಇದನ್ನೂ ಓದಿ : Twins Sons killed : ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು ಉಸಿರುಗಟ್ಟಿಸಿಕೊಂದ ಇಂಜಿನಿಯರ್ ತಂದೆ

ರಾಜ್ಯದಲ್ಲಿ ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಯಾದಗೀರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಲಿದೆ. ಶಿಗ್ಗಾಂವಿ, ತರೀಕೆರೆ, ಸುಬ್ರಹ್ಮಣ್ಯ, ಮಂಚಿಕೆರೆ, ಲೋಂಡಾ, ಸವಣೂರು, ಕಡೂರು, ಬಾಳೆಹೊನ್ನೂರು, ಸುತ್ತೂರು, ಆನವಟ್ಟಿ, ಶಿವಮೊಗ್ಗ, ಮಲವಳ್ಳಿ, ಲೋಕಾಪುರ, ಸಂಕೇಶ್ವರ, ಹಾವೇರಿ, ಗದಗದ, ಮುದಗಲ್‌, ಧಾರವಾಡ, ಕೆಂಭಾವಿ, ಚನ್ನಗಿರಿ, ರಾಮನಗರ, ಅಜ್ಜಂಪುರ, ಮದ್ದೂರು, ಕೃಷ್ಣರಾಜಸಾಗರದಲ್ಲಿ ಮಳೆಯಾಗಲಿದೆ.

Heavy Rainfall Alert: Heavy rainfall is likely in 4 districts of the state in the next 21 hours: Meteorological Department has warned

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular