ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು (Heavy Rainfall in Karnataka) ವಾರದಿಂದ ಉತ್ತಮ ಮಳೆಯಾಗುತ್ತಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 5ರ ವರೆಗೂ ವರುಣ ಆರ್ಭಟ ಹೆಚ್ಚಾಗಲಿದೆ. ಹೀಗಾಗಗಿ ಜುಲೈ 6 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 3 ರಂದು ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಭಾರೀ ಮಳೆ ಸುರಿದಿದೆ. ಅಂಕೋಲಾ, ಗೋಕರ್ಣ, ಕುಮಟಾದಲ್ಲಿ ತಲಾ 9 ಸೆಂ.ಮೀ, ಮಳೆಯಾಗಿದ್ದರೆ, ಹೊನ್ನಾವರದಲ್ಲಿ 8 ಸೆಂ.ಮೀ., ಶಿರಾಲಿ, ಕಾರವಾರದಲ್ಲಿ ತಲಾ 7 ಸೆಂ.ಮೀ., ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 6 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.
ಇದನ್ನೂ ಓದಿ : Anna Bhagya Scheme : ಅನ್ನ ಭಾಗ್ಯ ಯೋಜನೆ : ಆನ್‌ಲೈನ್‌ನಲ್ಲಿ ಪಡಿತರ ಕಾರ್ಡ್-ಬ್ಯಾಂಕ್ ಖಾತೆ ಲಿಂಕ್ ಹೀಗೆ ಮಾಡಿ
ಇದನ್ನೂ ಓದಿ : Gruha jyothi scheme : ಗೃಹಜ್ಯೋತಿ ಇಂದಿನಿಂದ ಜಾರಿ, ಆದರೆ ಈ ತಿಂಗಳ ಬಿಲ್ ಪಾವತಿಸಲೇ ಬೇಕು : ಸಚಿವ ಕೆಜೆ ಜಾರ್ಜ್
ಜುಲೈ 3 ರ ವರೆಗೆ ಕರಾವಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದರೆ, ಜುಲೈ 4 ಮತ್ತು 5 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಎಚ್ಚರಿಕೆ ವಹಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿ ಈಗಾಗಲೇ ಸೂಚಿಸಿದೆ.
Heavy Rainfall in Karnataka: Red Alert for these 4 districts of the state: Meteorological Department Report