ಸೋಮವಾರ, ಏಪ್ರಿಲ್ 28, 2025
HomekarnatakaHeavy Rainfall in Karnataka : ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಆರ್ಭಟಿಸಲಿದೆ ಬಿರುಗಾಳಿ ಮಳೆ...

Heavy Rainfall in Karnataka : ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಆರ್ಭಟಿಸಲಿದೆ ಬಿರುಗಾಳಿ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

- Advertisement -

ಬೆಂಗಳೂರು : (Heavy Rainfall in Karnataka) ಕಳೆದೆ ಎರಡು ದಿನಗಳಿಂದಲೂ ಕರ್ನಾಟಕ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇನ್ನೂ ಕೆಲವೆಡೆ ಮೋಡಕವಿದ ವಾತಾರಣ ಕಂದು ಬರುತ್ತಿದೆ. ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಡುತ್ತಿದ್ದಂತೆಯೇ ಮಳೆಯ ಆರ್ಭಟ ರಾಜ್ಯದಲ್ಲಿ ಜೋರಾಗಿರಲಿದೆ. ಅದ್ರಲ್ಲೂ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಣ ಕನ್ನಡ, ಉಡುಪಿ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಲಿದ್ದು, ಮುಂಜಾಗೃತಾ ಕ್ರಮವಾಗಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿಯು ಗಂಟೆಗೆ 40-45ಕಿಮೀ ಯಿಂದ 55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 13 ಮತ್ತು 14 ರಂದು ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಒಳ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ. 13ರಿಂದ 15ರವರೆಗೆ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಮೂರು ದಿನಗಳ ಹಳದಿ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ : ದಾಖಲೆಯ ಡಿಜಿಲಾಕರ್‌, ನಕಲು ಪ್ರತಿ ತೋರಿಸಿದ್ರೂ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ

ಇನ್ನುಳಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಮಂಗಳೂರು, ಕೊಲ್ಲೂರು, ಶಹಪುರ, ಕಾರವಾರ, ಶಿರಾಲಿ, ಜಾನ್ಮನೆ, ಕುಂದಾಪುರ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಉಡುಪಿ, ಕುರ್ಡಿ, ಮಾನ್ವಿ, ದಾವಣಗೆರೆ, ಯುಗಟಿ, ಕೊಟ್ಟಿಗೆಹಾರ, ಕೂಡ್ಲಿಗಿ, ಕೊಟ್ಟೂರು, ಮಂಕಿ, ಕುಮಟಾ, ಗೋಕರ್ಣ, ಬೇಲಿಕೇರಿ ಅಂಕೋಲಾ, ಸಿದ್ದಾಪುರ, ಪುತ್ತೂರು, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬಾಲ್ಕಿ, ಹೊಸಕೋಟೆ, ಚನ್ನಗಿರಿ, ಭಾಗಮಂಡಲ, ಕಮ್ಮರಡಿ, ಚನ್ನಪಟ್ಟಣ, ಹರಪನಹಳ್ಳಿ, ಗೇರುಸೊಪ್ಪಿ, ಕ್ಯಾಸಲ್‌ರಾಕ್‌, ಶಿರಹಟ್ಟಿ, ಚಿತ್ತಾಪುರ, ಚಿಂಚೋಳಿ, ಸೇಡಂ, ನಾಪೋಕ್ಲು, ವಿರಾಜಪೇಟೆ, ಕಳಸ, ಕಡೂರು, ಲಿಂಗನಮಕ್ಕಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

Heavy Rainfall in Karnataka : Stormy rain to hit the coast in the next 24 hours : Yellow alert announced

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular