ರಾಯಚೂರು : ರಾಜ್ಯದಲ್ಲಿ ಮಾನ್ಸೂನ್ ಮಾರುತ (Heavy rains in Raichur) ಪ್ರವೇಶಿಸಲು ಎರಡು ವಾರಗಳು ಬಾಕಿ ಇರುವುದರಿಂದ, ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಭತ್ತದ ಮೂಟೆ ಇರುವ ಗೋದಾಮಿಗೆ ನೀರು ತುಂಬಿಕೊಂಡಿದೆ. ಇದ್ದರಿಂದಾಇ ಭತ್ತದ ಮೂಟೆಗಳು ಮಳೆಯ ನೀರಿನ ಪಾಲಾಗಿದೆ ಎಂದು ವರದಿ ಆಗಿದೆ.
ನಿನ್ನೆ ರಾಯಚೂರು ನಗರದಲ್ಲಿ ಭಾರೀ ಮಳೆ ಸುರಿದಿದ್ದು, ಇದರಿಂದ ಜನರಿಗೆ ಬಚಾವಾಗಲು ಸಮಯ ಕೂಡ ಸಿಕ್ಕಿರುವುದಿಲ್ಲ. ಇಲ್ಲಿನ ವ್ಯವಸಾಯ ಉತ್ಪನ್ನ ಮಾರಾಟ ಮಳಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಭತ್ತದ ಮೂಟೆಗಳನ್ನು ಮಾರಲು ತಂದಿಟ್ಟಿದ್ದಾರೆ. ಆದರೆ ಮಳೆಯ ನೀರು ಎಪಿಎಮ್ ಸಿ ಯಾರ್ಡ್‌ಗೆ ನುಗ್ಗಿ ಭತ್ತದ ಚೀಲಗಳನ್ನು ತೊಯಿಸಿಬಿಟ್ಟಿದೆ. ನಷ್ಟ ಅನುಭವಿಸಿರುವ ರೈತರು ಕಂಗಾಲಾಗಿದ್ದಾರೆ.
ಈ ಭಾರೀ ಜೂನ್ 1ರ ಮಾನ್ಸೂನ್ ಮಳೆ ಮೇಲೆ ಆಗಮನ :
ವರ್ಷಂಪ್ರತಿ ಮುಂಗಾರು ಮಳೆ ಜೂನ್ 1 ರಂದು ಕೇರಳ ಪ್ರವೇಶಿಸುತ್ತದೆ. ಅಲ್ಲಿ ಮಳೆ ಸುರಿದ ಮೂರು ಅಥವಾ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುತ್ತದೆ. ಈ ಸಲ ಮಳೆ ವಿಳಂಬದಿಂದ ರೈತರಿಗೆ ತೊಡಕಾಗಬಹುದು. ಇನ್ನೇನು ಮುಂದಿನ ವರ್ಷದ ಭತ್ತದ ಬೆಳೆಗೆ ಬಿತ್ತನೆ ಕೆಲಸ ಶುರು ಮಾಡಲಿದ್ದು, ವರುಣನ ಆಗಮನಕ್ಕಾಗಿ ಮುಗಿಲು ನೋಡುತ್ತಿದ್ದಾರೆ. ಇನ್ನುಳಿದಂತೆ ರೈತರು ಅದಕ್ಕಾಗಿಯೇ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : Yellow alert : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ
ಮಾನ್ಸೂನ್ ಮಾರುತದ ವಿಳಂಬವಾಗುವ ನಿರೀಕ್ಷೆ ಇರುವುದರಿಂದ ಜೂನ್ 4ರಂದು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆ ಕೂಡ ಇರುತ್ತದೆ. ಅದರಲ್ಲೂ ನಮ್ಮ ದೇಶ ಕೃಷಿ ಆಧರಿತವಾಗಿದ್ದು, ಭಾರತದ ಆರ್ಥಿಕತೆಯು ಮಳೆಯನ್ನು ಅವಲಂಬಿಸಿದೆ. ದೇಶದ ಒಟ್ಟಾರೆ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.75ರಷ್ಟು ಮುಂಗಾರು ಮಳೆ ಒಳಗೊಂಡಿದೆ. ಹೀಗಾಗಿ ಈ ಮಳೆಯೇ ಸಕಾಲದಲ್ಲಿ ಬರದೇ ಇದ್ದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದೆ.
Heavy rains in Raichur: Pre-monsoon rains: Bag of paddy spoiled in water