Sini Shetty : ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ 2022ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನ ಜಿಯೋ ಕನ್ವೆಕ್ಷನ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ರೂಪಲ್ ಶೇಖಾವತ್ ರನ್ನರ್ ಅಪ್ ಆಗಿದ್ದರೆ ಶಿನಾತಾ ಚೌಹಾಣ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟರು. ರೂಪಲ್ ರಾಜಸ್ಥಾನವನ್ನು ಪ್ರತಿನಿಧಿಸಿದ್ದರೆ ಶೀನಾತಾ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರು. ಈ ಕಾರ್ಯಕ್ರಮದಲ್ಲಿ ಟಾಪ್ 5 ಫೈನಲಿಸ್ಟ್ಗಳಾದ ಸಿನಿ ಶೆಟ್ಟಿ, ರುಬಲ್ ಶೇಖಾವತ್, ಶಿನಾತಾ ಚೌಹಾಣ್, ಪ್ರಜ್ಞಾ ಅಯ್ಯಗಾರಿ ಹಾಗೂ ಗಾರ್ಗಿ ಆಯ್ಕೆಯಾಗಿದ್ದರು.

ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ನಡೆದಿದ್ದು ಈ ಕಾರ್ಯಕ್ರಮದಲ್ಲಿ ನೇಗಾ ಧೂಪಿಯಾ, ಕೃತಿ ಸನೋನ್, ಮನೀಷ್ ಪಾಲ್, ರಾಜಕುಮಾರ್ ರಾವ್, ಡಿನೋ ಮೋರಿಯಾ, ಮಿಥಾಲಿ ರಾಜ್, ಮಲೈಕಾ ಅರೋರಾ ಸೇರಿದಂತೆ ಹಲವರು ಭಾಗವಹಿಸಿದ್ದರು. ಕೃತಿ ಸನೋನ್ ಹಾಗೂ ಲಾರೆನ್ ಗಾಟ್ಲೀಬ್ ಅದ್ಭುತ ಪ್ರದರ್ಶನ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತ್ತು. ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಇದೇ 20 ವರ್ಷಗಳ ಹಿಂದೆ ನೇಹಾ ಧೂಪಿಯಾ ಗೆದ್ದಿದ್ದರು.

ಫೆಮಿನಾ ಮಿಸ್ ಇಂಡಿಯಾ 2021 ರ ಮಾನಸಾ ವಾರಣಾಸಿ ಅವರು ಪ್ರತಿಷ್ಠಿತ ಸಮಾರಂಭದಲ್ಲಿ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿಗೆ ಕಿರೀಟವನ್ನು ಹಸ್ತಾಂತರಿಸಿದರು.ನೂತನ ಬ್ಯೂಟಿ ಕ್ವೀನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಚಾರಗಳು ಇಲ್ಲಿವೆ ನೋಡಿ :
ಸಿನಿ ಶೆಟ್ಟಿ 21 ವರ್ಷ ಪ್ರಾಯದವರಾಗಿದ್ದು ಮುಂಬೈನಲ್ಲಿ ಜನಿಸಿದ್ದಾರೆ. ಪ್ರಸ್ತುತ ಇವರು ಕರ್ನಾಟಕದಲ್ಲಿದ್ದಾರೆ.
ಅಕೌಂಟಿಂಗ್ ಹಾಗೂ ಫೈನಾನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಮಿಸ್ ಇಂಡಿಯಾ 2022 ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ವೃತ್ತಿಪರ ಕೋರ್ಸ್ನ್ನು ಮಾಡುತ್ತಿದ್ದಾರೆ.
ಸಿನಿ ತಮ್ಮ ನಾಲ್ಕನೇ ವಯಸ್ಸಿನಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ ಹಾಗೂ ತ್ಮ 14ನೇ ವಯಸ್ಸಿನಲ್ಲಿ ಅರಂಗೇತರಂ ಹಾಗೂ ಭರತನಾಟ್ಯವನ್ನು ಪೂರೈಸಿದ್ದಾರೆ.
ಸಿನಿ ಶೆಟ್ಟಿ ಕುಟುಂಬಸ್ಥರು ಇವರ ಶೈಕ್ಷಣಿಕ ಹಾಗೂ ಸೃಜನಶೀಲ ಬೆಳವಣಿಗೆಗಳಿಗೆ ಬೆಂಗಾವಲಾಗಿ ನಿಂತಿದೆ.
ಇದನ್ನು ಓದಿ : ಗುಡ್ ನ್ಯೂಸ್ : ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್ !
ಇದನ್ನೂ ಓದಿ : ನಿನ್ನೆ ದೋಸ್ತಿ.. ಇವತ್ತು ದುಷ್ಮನ್.. ಇಂಗ್ಲೆಂಡ್ ಆಟಗಾರನಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ!
Here’s 5 things to know about Miss India 2022 winner Sini Shetty