ಬೆಂಗಳೂರು : ಸರಕಾರದ ಆದೇಶದನ್ವಯ ಎಲ್ಲಾ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆಯ ಕಾರ್ಯ ನಡೆಯುತ್ತಿದೆ. ರಾಜ್ಯ ಸರಕಾರ ಈಗಾಗಲೇ ಹಲವು ಬಾರಿ ಡೆಡ್‌ಲೈನ್ ನೀಡಿದ್ದರೂ ಇದುವರೆಗೂ ಬಹುತೇಕರು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲ. ಆದ್ರೀಗ ವಾಹನ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಅವಧಿಯನ್ನು ಇನ್ನಷ್ಟು ವಿಸ್ತರಣೆ ಮಾಡಿದೆ.

ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸಾರಿಗೆ ಇಲಾಖೆ ರಾಜ್ಯದಲ್ಲಿನ ಎಲ್ಲಾ ದ್ವಿಚಕ್ರ, ಮೂರು ಚಕ್ರ, ನಾಲ್ಕು ಚಕ್ರ ಸೇರಿದಂತೆ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(High Security Registration Plate (HSRP) ಅಳವಡಿಕೆ ಮಾಡುವಂತೆ ಕಡ್ಡಾಯ ಆದೇಶ ಹೊರಡಿಸಿತ್ತು. ರಾಜ್ಯ ಸರಕಾರದ ಆದೇಶ ಹೊರಬಿದ್ದು, ಆರು ತಿಂಗಳೇ ಕಳೆದಿದ್ದರೂ ಕೂಡ ಬಹುತೇಕ ವಾಹನ ಸವಾರರು ಇಂದಿಗೂ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲ. ಇದೀಗ ಅವಧಿಯನ್ನು ನವೆಂಬರ್ 20ರ ವರೆಗೆ ವಿಸ್ತರಣೆ ಮಾಡಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಭರ್ಜರಿ ಗುಡ್‌ನ್ಯೂಸ್
ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಅವಧಿಯನ್ನು ಈ ಹಿಂದೆ ಸೆಪ್ಟೆಂಬರ್ ವರೆಗೆ ವಿಸ್ತರಣೆ ಮಾಡಲಾಗಿತ್ತು. ಆದ್ರೆ ಇನ್ನಷ್ಟು ಸಮಯ ಕಾಲಾವಕಾಶ ನೀಡುವಂತೆ ಹಿರಿಯ ವಕೀಲರಾದ ದೇವದತ್ ಕಾಮತ್ ಅವರು ಹೈಕೋರ್ಟ್ ನ್ಯಾಯಪೀಠದಲ್ಲಿ ಮನವಿ ಮಾಡಿಕೊಂಡಿದ್ದರು. ಅಂತೆಯೇ ಹೈಕೋರ್ಟ್ ಇದೀಗ ಮತ್ತೆ ಎರಡು ತಿಂಗಳ ಕಾಲ ಗಡುವನ್ನು ವಿಸ್ತರಣೆ ಮಾಡಿದೆ.

ಇದನ್ನೂ ಓದಿ : Nandini
ಏನಿದು ಎಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ? ಏನಿದರ ಲಾಭ ?
- ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಭಾರತದ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿರುವ ಟ್ಯಾಂಪರ್-ಪ್ರೂಫ್ ನಂಬರ್ ಪ್ಲೇಟ್ ಆಗಿದೆ.
- ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು. ನಕಲಿ ಅಥವಾ ಟ್ಯಾಂಪರ್ ಮಾಡಲು ಕಷ್ಟವಾಗುವಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
- ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಮರುಬಳಕೆ ಮಾಡಲಾಗದ ಎರಡು ಲಾಕ್‌ಗಳೊಂದಿಗೆ ವಾಹನಕ್ಕೆ ಭದ್ರಪಡಿಸಲಾಗಿದೆ.
- ಹೊಲೊಗ್ರಾಮ್: ಅಶೋಕ ಚಕ್ರದ 20 mm x 20 mm ಕ್ರೋಮಿಯಂ-ಆಧಾರಿತ ಹೊಲೊಗ್ರಾಮ್ ಮುಂಭಾಗ ಮತ್ತು ಹಿಂಭಾಗದ ಎರಡೂ ಫಲಕಗಳ ಮೇಲಿನ ಎಡ ಮೂಲೆಯಲ್ಲಿ ಹಾಟ್-ಸ್ಟಾಂಪ್ ಮಾಡಲ್ಪಟ್ಟಿದೆ.
- ಶಾಶ್ವತ ಗುರುತಿನ ಸಂಖ್ಯೆ (PIN): ಪ್ಲೇಟ್‌ನ ಕೆಳಗಿನ ಎಡಭಾಗದಲ್ಲಿರುವ ಪ್ರತಿಫಲಿತ ಹಾಳೆಯಲ್ಲಿ ಕನಿಷ್ಠ 10-ಅಂಕಿಯ PIN ಅನ್ನು ಲೇಸರ್-ಬ್ರಾಂಡ್ ಮಾಡಲಾಗಿದೆ.
- ವಿಶಿಷ್ಟ ಸಂಖ್ಯೆ: ಪ್ರತಿಯೊಂದು HSRP ಯು ವಿಶಿಷ್ಟವಾದ 10-ಅಂಕಿಯ ಸಂಖ್ಯೆಯನ್ನು ಹೊಂದಿದ್ದು ಅದು ವಾಹನದ ಚಾಸಿಸ್ ಮತ್ತು ಎಂಜಿನ್ ಸಂಖ್ಯೆಗಳಿಗೆ ಲಿಂಕ್ ಆಗಿದೆ.
- ಹಿನ್ನೆಲೆ ಬಣ್ಣ: ವಾಹನದ ಪ್ರಕಾರವನ್ನು ಆಧರಿಸಿ ಹಿನ್ನೆಲೆ ಬಣ್ಣವು ಬದಲಾಗುತ್ತದೆ, ಉದಾಹರಣೆಗೆ, ಖಾಸಗಿ ವಾಹನಗಳಿಗೆ ಬಿಳಿ ಮತ್ತು ವಾಣಿಜ್ಯ ವಾಹನಗಳಿಗೆ ಹಳದಿ.
- ಎಲೆಕ್ಟ್ರಾನಿಕ್ ಲಿಂಕ್: HSRP ಅನ್ನು ಸ್ಥಾಪಿಸಿದ ನಂತರ ವಾಹನಕ್ಕೆ ವಿದ್ಯುನ್ಮಾನವಾಗಿ ಲಿಂಕ್ ಮಾಡಲಾಗಿದೆ.
- ಹೈ ಸೆಕ್ಯುರಿಟಿ ನಂಬರ್ ಪ್ಲೇಟ್: HSRP ರಸ್ತೆ ಸುರಕ್ಷತೆಯನ್ನು ಒದಗಿಸಲು ಹಾಗೂ ಮೋಸವನ್ನು ತಡೆಲು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
High Security Registration Plate-HSRP deadline extend till November 20