ಬುಧವಾರ, ಏಪ್ರಿಲ್ 30, 2025
HomeCoastal NewsHijab Uniform controversy : ಹಿಜಾಬ್ ಕೇಸರಿ ಶಾಲು ಸಂಘರ್ಷ : ಮಂಗಳೂರಿನ ಕಾಲೇಜಿನಲ್ಲಿ ಮುಗಿಯದ...

Hijab Uniform controversy : ಹಿಜಾಬ್ ಕೇಸರಿ ಶಾಲು ಸಂಘರ್ಷ : ಮಂಗಳೂರಿನ ಕಾಲೇಜಿನಲ್ಲಿ ಮುಗಿಯದ ವಸ್ತ್ರವಿವಾದ

- Advertisement -

ಮಂಗಳೂರು : ನಗರದ ಹಂಪನಕಟ್ಟೆಯಲ್ಲಿರುವ ಯೂನಿವರ್ಸಿಟಿ ಕಾಲೇಜಿನ (Mangalore University College) ಹಿಜಾಬ್ ವಿವಾದ (Hijab) ತಾರಕಕ್ಕೇರಿದೆ. ಏಪ್ರಿಲ್ ನಲ್ಲಿ ನಡೆದ ಸೆಮಿಸ್ಟರ್ ಎಕ್ಸಾಂನಲ್ಲೂ ನಾವು ಹಿಜಾಬ್ ಧರಿಸಿ (Hijab) ಪರೀಕ್ಷೆ ಬರೆದಿದ್ದೇವೆ. ಇದು ಎಬಿವಿಪಿ ಮತ್ತೆ ಹುಟ್ಟು ಹಾಕುತ್ತಿರುವ ವಿವಾದ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಆರೋಪಿಸುತ್ತಿದ್ದರೇ, ಇಲ್ಲಿ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಹಿಂದೂಪರ ಸಂಘಟನೆಗಳು ಹಾಗೂ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೆ.

ಈ ಮಧ್ಯೆ ಶುಕ್ರವಾರ ಕಾಲೇಜಿಗೆ ಮಂಗಳೂರು ಯೂನಿವರ್ಸಿಟಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾಮತ್, ನಾನು ಈ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾತ್ರ. ವಿಶ್ವವಿದ್ಯಾನಿಲಯದ ಕುಲಪತಿಗಳು ಯೂನಿವರ್ಸಿಟಿ ಕಾಲೇಜಿನ ಮೇಲ್ವೀಚಾರಕರು. ಕುಲಪತಿಗಳು ಸಂಜೆ ಈ ಬಗ್ಗೆ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಭಾಗವಹಿಸುತ್ತೇನೆ. ಕಾಲೇಜಿನಲ್ಲಿ ಕೋರ್ಟ್ ನಿಯಮ ಅನುಷ್ಠಾನ ಆಗದ ವಿಚಾರ ಗೊತ್ತಾಗಿದೆ.ಇದರಲ್ಲಿ ಯಾರ ನಿರ್ಲಕ್ಷ್ಯ ಇದೆ ಎಂಬುವುದರ ಬಗ್ಗೆ ಸಭೆ ಮಾಡುತ್ತೇವೆ. ಈ ಬಗ್ಗೆ ಸೆನೆಟ್ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು.ನನಗೆ ಈ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದೆ. ಕಾಲೇಜು ಆರಂಭವಾದ ಬಳಿಕ ರೀತಿಯ ಗೊಂದಲ ಆರಂಭವಾಗಿದೆ ಎಂದಿದ್ದಾರೆ. ಇನ್ನೂ ನಮ್ಮ ಕಾಲೇಜಿನಲ್ಲಿ ಏಪ್ರಿಲ್ ತಿಂಗಳವರೆಗೂ ಹಿಜಾಬ್ ಗೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಈಗ ಈ ವಿವಾದವನ್ನು ಎಬಿವಿಪಿ ಹುಟ್ಟುಹಾಕುತ್ತಿದೆ ಎಂದು ಆರೋಪಿಸಿರುವ ಹಂಪನಕಟ್ಟೆ ಯೂನಿವರ್ಸಿಟಿ ಕಾಲೇಜು ವಿದ್ಯಾರ್ಥಿನಿಯರು ವಿಬಿವಿಪಿ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದಾರೆ.

ವಾಟ್ಸಪ್ ಮೆಸೇಜ್ ನಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ವಿದ್ಯಾರ್ಥಿನಿಯರು, ಇವತ್ತು ಸಣ್ಣ ಟೀಸರ್ ಮುಂದೆ ದೊಡ್ಡ ಮಟ್ಟದಲ್ಲಿ ಏಳುತ್ತೇವೆ. ಎಲ್ಲರೂ ಕೇಸರಿ ಶಾಲು ಜೊತೆಗೆ ತರಬೇಕು ಎಂದು ಗ್ರೂಪ್ ನಲ್ಲಿ ಎಬಿವಿಪಿ ವಿದ್ಯಾರ್ಥಿಗಳು ಮಾಡಿದ ಮೆಸೇಜ್ ದಾಖಲೆಯನ್ನು ಮುಸ್ಲಿಂ ವಿದ್ಯಾರ್ಥಿನಿಯರು ರಿಲೀಸ್ ಮಾಡಿದ್ದಾರೆ.

ಕಾಲೇಜಿನ ನಿಯಮದಲ್ಲೂ ಸಮವಸ್ತ್ರ ದ (Uniform controversy) ಶಾಲನ್ನು ದುಪ್ಪಟ್ಟಾಗಿ ಬಳಸಲು ಅವಕಾಶ ಇದೆ ಎಂಬ ನಿಯಮ ಇದೆ. ಕಾಲೇಜಿ‌ನ ನಡಾವಳಿಯಲ್ಲಿನ ನಿಯಮದ ದಾಖಲೆ ಬಿಡುಗಡೆ‌ ಮಾಡಿದ ವಿದ್ಯಾರ್ಥಿನಿಯರು, ಇಷ್ಟು ದಿನ ಇಲ್ಲದ ಹಿಜಾಬ್ ವಿವಾದ ಈಗ ಏಕಾಏಕಿ ಬಂದದ್ದೇಕೆ ? ಇದು ಎಬಿವಿಪಿ ಸಂಘಟನೆಯ ಷಡ್ಯಂತ್ರ ಕಾಲೇಜಿಗೆ ಸಂಬಂಧಿಸಿದ ಪ್ರಮುಖ ನಿಯಮ ಪುಸ್ತಕದಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗಿದೆ ಸಮವಸ್ತ್ರ ಜೊತೆಗೆ ಶಿರವಸ್ತ್ರ ಧರಿಸಲು ಹೆಚ್ಚಿಸುವ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಶವವಸ್ತ್ರದ ಮೇಲು ಹೊದಿಕೆ (ಶಾಲು) ಶಿರವಸ್ತ್ರವನ್ನು ಧರಿಸಲು ಅನುಮತಿ ಇರುತ್ತದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದರೂ ಈಗ ಹಿಜಾಬನ್ನು ನಿಷೇಧಿಸಿರುವುದು ಸರಿಯಲ್ಲ ಎಂದಿದ್ದಾರೆ.

ಈ ವಿವಾದದ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯಾ ರೈ ಮಾತನಾಡಿದ್ದು, ಇಡೀ ಕಾಲೇಜಿನಲ್ಲಿ 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ.ಒಂದು 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡ್ತಿದಾರೆ. ನಿನ್ನೆ ಅವರು ಬಂದಾಗ ನಾವೇ ಅವರನ್ನು ಹಿಜಾಬ್ ತೆಗೆದು ಬನ್ನಿ ಅಂತ ಕಳಿಸಿದ್ದೇವೆ. ಹಾಗಾಗಿ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು, ಆ 15 ಮಂದಿ ಇವತ್ತು ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ. ಕೆಲ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರ್ತಿಲ್ಲ. ಒಂದು ಮೂರ್ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗಿದ್ದಾರೆ ಆದರೆ ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, ಕೆಲ 15 ವಿದ್ಯಾರ್ಥಿಗಳ ಸಮಸ್ಯೆ ಅಷ್ಟೇ ಎಂದಿದ್ದಾರೆ. ಒಟ್ಟಿನಲ್ಲಿ ಉಡುಪಿ ಬಳಿಕ ತಣ್ಣಗಾಗಿದ್ದ ಹಿಜಾಬ್ ವಿವಾದ ಈಗ ಮತ್ತೆ ಮಂಗಳೂರಿನಲ್ಲಿ ಭುಗಿಲೆದ್ದಿದ್ದು ನಾಳೆ ವೇಳೆಗೆ ಪ್ರಕರಣ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ : School Textbook : ಅವಧಿಗೂ ಮುನ್ನವೇ ಶಾಲಾರಂಭ : ಪಠ್ಯಪುಸ್ತಕ ಸಿಗದೇ ಶಿಕ್ಷಕರ ಪರದಾಟ

ಇದನ್ನೂ ಓದಿ : Love Jihad Shilpa Suicide : ಲವ್ ಸೆಕ್ಸ್ ಜಿಹಾದ್ : ಶಿಲ್ಪಾ ಆತ್ಮಹತ್ಯೆ ಬೆನ್ನಲ್ಲೇ ಕವನ ರೂಪದ ಪತ್ರ ಪತ್ತೆ

Hijab Saffron Conflict Uniform controversy at Mangalore University College

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular