ಭಾರತದಲ್ಲಿ HMPV ವೈರಸ್ (HMPV virus)ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಇದುವರೆಗೂ ಒಟ್ಟು ಭಾರತದಲ್ಲಿ ಐದಕ್ಕೂ ಅಧಿಕ ಎಚ್ಎಂಪಿವಿ ಪ್ರಕರಣ ಪತ್ತೆಯಾಗಿದೆ. ಚೀನಾದಲ್ಲಿ ಕಾಣಿಸಿಕೊಂಡಿದ್ದ ಮಾನವ ಮೆಟಾಪ್ನ್ಯೂಮೋ ವೈರಸ್ (HMPV) ಪ್ರಕರಣ ಪತ್ತೆಯಾಗುತ್ತಲೇ ಭಾರತೀಯ ಮಾಧ್ಯಮಗಳು ಕೊರೊನಾ ಕಾಲಘಟ್ಟವನ್ನು ನೆನಪಿಸಿವೆ. ಅದ್ರಲ್ಲೂ ಚೀನಾದಲ್ಲಿ ಕೋವಿಡ್ ನಂತೆಯೇ ಎಚ್ಎಂಪಿವಿ ಸೋಂಕಿನಿಂದ ಲಾಕ್‌ಡೌನ್ ಹೇರಿಕೆಯಾಗಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ಭಾರತದಲ್ಲಿ ಮತ್ತೆ ಲಾಕ್‌ಡೌನ್ ಆಗಲಿದೆಯಾ ಅನ್ನೋದನ್ನು ಇಲ್ಲಿದೇ ಉತ್ತರ.
ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆಯಾಗಿರುವುದು ವಿಶ್ವದ ಜನರ ನಿದ್ದೆಗೆಡಿಸಿದೆ. ಅದ್ರಲ್ಲೂ ಭಾರತೀಯರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ ವೈರಸ್ ಸೋಂಕು ಪತ್ತೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಅದ್ರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ #Lockdown ಟ್ರೆಂಡಿಂಗ್ ಕ್ರಿಯೆಟ್ ಮಾಡಿದೆ. ಸದ್ಯ ಭಾರತದಲ್ಲಿ ಇದುವರೆಗೆ ಒಟ್ಟು ಐದು HMPV ಪ್ರಕರಣ ದಾಖಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ಎಚ್‌ಎಂಪಿವಿ ಪ್ರಕರಣ ಪತ್ತೆಯಾಗಿದ್ದು, ಅಹಮದಾಬಾದ್‌ನಲ್ಲಿ ಒಂದು ಹಾಗೂ ಚೆನ್ನೈನಲ್ಲಿ ಎರಡು ಪ್ರಕರಣ ದೃಢಪಟ್ಟಿದೆ. ಭಾರತದಲ್ಲಿ ಎಚ್‌ಎಂಪಿವಿ ವೈರಸ್ ಕುರಿತು ಭೀತಿ ಉಂಟಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಜನರು ಹೊಸ ವೈರಸ್ ಕುರಿತು ಯಾವುದೇ ರೀತಿಯಲ್ಲಿಯೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಉಸಿರಾಟದ ಮೇಲೆ ಪರಿಣಾಮ ಬೀರಲಿರುವ ವೈರಸ್ ಏಕಾಏಕಿಯಾಗಿ ಹೆಚ್ಚಳವಾಗುವ ಯಾವುದೇ ಸೂಚನೆ ಇಲ್ಲ ಎಂದಿದ್ದಾರೆ. #Lockdown ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 2020 ರಲ್ಲಿ ನಡೆದ ಲಾಕ್‌ಡೌನ್ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಹಲವು ಸಾಮಾಜಿಕ ಜಾಲತಾಣ X ನಲ್ಲಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸುತ್ತಿದ್ದಾರೆ.
HMPV ಎಂದರೇನು ?
ಎಚ್‌ಎಂಪಿವಿ (HMPV) ಜಾಗತಿಕವಾಗಿ ಗುರುತಿಸಲ್ಪಟ್ಟ ಉಸಿರಾಟದ ವೈರಸ್ ಆಗಿದ್ದು, ಚೀನಾದಲ್ಲಿ ಅದರ ಏಕಾಏಕಿ ವರದಿಯಾದ ನಂತರ ಇತ್ತೀಚೆಗೆ ಗಮನ ಸೆಳೆದಿದೆ. ಇದು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಸೋಂಕನ್ನು ಉಂಟುಮಾಡುವ ವೈರಲ್ ರೋಗಕಾರಕವಾಗಿದೆ.

HMPV ಹೇಗೆ ಹರಡುತ್ತದೆ ?
ಸಾಮಾನ್ಯವಾಗಿ HMPV ಕೆಮ್ಮುವಿಕೆ ಅಥವಾ ಸೀನುವಿಕೆಯಿಂದ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ, ಹಾಗೆಯೇ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವುದು.
Must Read : Tirupati Tirumala Photo shoot Contravecy : ತಿರುಪತಿ ತಿರುಮಲದಲ್ಲಿ ಫೋಟೋ ಶೂಟ್ : ವಂಶಿನಾಥ್ ವಿರುದ್ದ ಕ್ರಮ
HMPV ಸೋಂಕಿನ ಲಕ್ಷಣಗಳೇನು ?
HMPV ಯ ಲಕ್ಷಣಗಳು ವ್ಯಕ್ತಿಯ ವಯಸ್ಸು, ಸಾಮಾನ್ಯ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅಲ್ಲದೇ ಸೌಮ್ಯವಾದ ಸಮಸ್ಯೆಗಳು ಕಂಡು ಬರಲಿದೆ. ಅದರಲ್ಲೂ ಮೂಗು ಸೋರುವುದು, ಗಂಟಲು ನೋಯುವುದು, ಕೆಮ್ಮು ಮತ್ತು ಜ್ವರ, ಸಾಮಾನ್ಯ ಶೀತದ ಲಕ್ಷಣಗಳನ್ನು ಹೊಂದಿರಲಿದೆ. ಮಧ್ಯಮ ರೋಗಲಕ್ಷಣಗಳು ನಿರಂತರ ಕೆಮ್ಮು, ಉಬ್ಬಸ ಮತ್ತು ಆಯಾಸ ಸೇರಿದಂತೆ ಕೆಲವು ಲಕ್ಷಣಗಳು ಕಂಡು ಬರಲಿದೆ.
HMPV virus cases increase in India, lockdown enforced