ಚಿತ್ರದುರ್ಗ : Honeytrap attempt BJP MLA: ಬಿಜೆಪಿಯ ಪ್ರಭಾವಿ ಶಾಸಕ ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ ಬಲೆ ಬೀಳಿಸುವ ಯತ್ನ ನಡೆದಿದೆ. ಅಪರಿಚಿತ ಮಹಿಳೆ ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದು, ಅಶ್ಲೀಲ ವಿಡಿಯೋ ಕಳುಹಿಸಿದ್ದಾಳೆ. ಈ ಕುರಿತು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ವಾಟ್ಸಾಪ್ ಮೂಲಕ ಕರೆ ಮಾಡಿ ಶಾಸಕರನ್ನು ಹನಿಟ್ರ್ಯಾಪ್ ಗೆ ಬೀಳಿಸುವ ಕಾರ್ಯವನ್ನು ಮಾಡಲಾಗಿತ್ತು. ಆದರೆ ಶಾಸಕರು ಎಚ್ಚೆತ್ತುಕೊಂಡು ಕಾಲ್ ಬ್ಲಾಕ್ ಮಾಡಿದ್ದಾರೆ. ಮಾತ್ರವಲ್ಲ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ರಾಜ್ಯದಲ್ಲಿ ಹಲವು ಶಾಸಕರನ್ನು ಹನಿಟ್ರ್ಯಾಪ್ ಗೆ ಸಿಲುಕಿಸುವ ಯತ್ನ ನಡೆಯುತ್ತಿದೆ ಅನ್ನೋ ಹೊತ್ತಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾಧ್ಯಮಗಳಿಗೆ ಪ್ರತಿಕ್ರೀಯೆ ನಡಿರುವ ಶಾಸಕ ತಿಪ್ಪಾರೆಡ್ಡಿ ಅವರು, ಅಪರಿಚಿತ ಮಹಿಳೆಯಿಂದ ವಾಟ್ಸಾಪ್ ನಲ್ಲಿ ವೀಡಿಯೋ ಕಾಲ್ ಬಂತು. ಕ್ಷೇತ್ರದ ಜನರೋ ಅಥವಾ ಸಂಬಂಧಿಕರೋ ಎಂದು ಕಾಲ್ ರಿಸೀವ್ ಮಾಡಿದೆ. ಆದರೆ ಮಹಿಳೆ ನಗ್ನವಾಗಿದ್ದು ಖಾಸಗಿ ಅಂಗ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ತಕ್ಷಣವೇ ಬ್ಲಾಕ್ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ವಿಡಿಯೋ ಕಾಲ್ ಬಂದ ಕೂಡಲೇ ವಿಚಾರವನ್ನು ಪತ್ನಿಗೆ ತಿಳಿಸಿದ್ದೇನೆ. ಅಲ್ಲದೇ ಆ ನಂಬರ್ ಅನ್ನು ಕೂಡಲೇ ಬ್ಲಾಕ್ ಮಾಡಿಸಿದ್ದೇನೆ. ಈ ರೀತಿ ಆಗಿರುವುದು ಎರಡು ಬಾರಿ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಎಸ್ ಪಿ ಅವರಿಗೂ ಮಾಹಿತಿ ನೀಡಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ತನಿಖೆ ಎಲ್ಲಿಯವರೆಗೆ ಬಂದಿದೆ ಅನ್ನೋದು ನನಗೆ ಗೊತ್ತಿಲ್ಲ. ರಾಜಸ್ಥಾನ ಅಥವಾ ಒರಿಸ್ಸಾದಿಂದ ಬಂದ ನಂಬರ್ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನನಗೆ ಯಾರೂ ವಿರೋಧಿಗಳಿಲ್ಲ, ಅಲ್ಲದೇ ನನಗೆ ಯಾರ ಮೇಲೆಯೂ ಅನುಮಾನವಿಲ್ಲ ಎಂದಿದ್ದಾರೆ.
ಇದನ್ನೂ ಓದಿ : Man Shoots Girlfriend:ಪ್ರೀತಿಸಿದ ಮಹಿಳೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಗುಂಡಿಟ್ಟು ಕೊಂದ ಭೂಪ ಅಂದರ್
ಇದನ್ನೂ ಓದಿ : Student Gang Raped : ಹೋಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಅರೆಸ್ಟ್, ಮೂವರು ಎಸ್ಕೇಪ್
Honeytrap attempt by making nude video calls to Chitradurga BJP MLA Thippareddy FIR registered