ಭಾನುವಾರ, ಏಪ್ರಿಲ್ 27, 2025
HomekarnatakaIPS Officers Promotions : ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : ಐಪಿಎಸ್...

IPS Officers Promotions : ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ : ಐಪಿಎಸ್ ಗಳಿಗೆ ಮುಂಬಡ್ತಿ, ವರ್ಗಾವಣೆ

- Advertisement -

ಬೆಂಗಳೂರು : ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯದ ಪೊಲೀಸ್ ಇಲಾಖೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ನಗರ ಪೊಲೀಸ್ ಆಯುಕ್ತರ ಬದಲಾವಣೆಯಾಗುತ್ತೆ ಎಂಬ ಚರ್ಚೆಯ ನಡುವೆಯೂ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ಹಾಗೂ ವರ್ಗಾವಣೆಯನ್ನು ಹೊಸ ವರ್ಷದ ಕೊಡುಗೆಯಾಗಿ ನೀಡಿದೆ.ರಾಜ್ಯದ ಪೊಲೀಸ್ ಇಲಾಖೆಗೆ ಹೊಸ ವರ್ಷದ ಹೊಸ್ತಿಲಿನಲ್ಲಿ ರಾಜ್ಯ ಸರ್ಕಾರ ಮೇಜರ್ ಸರ್ಜರಿ ( IPS Officers Promotions) ಮಾಡಿದ್ದು 16 ಹಿರಿಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ. ಮಾತ್ರವಲ್ಲ ಅಚ್ಚರಿಯ ಬೆಳವಣಿಗೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂಥರನ್ನು ಮುಂದುವರಿಸಲು ನಿರ್ಧರಿಸಿದೆ.

ಇಂದೇ ನಗರಕ್ಕೆ ಹೊಸ ಆಯುಕ್ತರ ನೇಮಕವಾಗಲಿದೆ ಎನ್ನಲಾಗಿತ್ತು. ಅಲ್ಲದೇ ಈ ಸ್ಥಾನಕ್ಕೆ ಅಧಿಕಾರಿಗಳಾದ ದಯಾನಂದ್, ಅಲೋಕ್ ಕುಮಾರ್ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ದಿಢೀರ್ ಐಪಿಎಸ್ ವರ್ಗಾವಣೆ ಲಿಸ್ಟ್ ಹೊರಬಂದಿದೆ. ಎಸ್.ಮುರುಗನ್ ಅವರಿಗೆ ಮುಂಬಡ್ತಿ ನೀಡಲಾಗಿದ್ದು, ಪೊಲೀಸ್ ಕಮ್ಯುನಿಕೇಶನ್ ಹಾಗೂ ಲಾಜಿಸ್ಟಿಕ್ ಗೆ ನಿಯುಕ್ತಿಗೊಳಿಸಲಾಗಿದೆ. ಕೆ.ವಿ.ಶರತಶ್ಚಂದ್ರ ಎಡಿಜಿಪಿಯಾಗಿ ಮುಂಬಡ್ತಿ ಪಡೆದಿದ್ದು, ಸಿಐಡಿ ಎಡಿಜಿಪಿಯಾಗಿ ನೇಮಿಸಲಾಗಿದೆ. ಸೌಮೇಂದು ಮುಖರ್ಜಿ ಐಜಿಪಿಇಂಟಲಿಜನ್ಸ್ ಐಜಿಪಿಯಾಗಿ, ರವಿ.ಎಸ್.ಕೆಎಸ್ಆರ್ಪಿ ಐಜಿಪಿಯಾಗಿ ನೇಮಿಸಲಾಗಿದೆ.

ಐಜಿಪಿ ಎಸ್ಡಿಯಾಗಿ ವಿಪುಲ್ ಕುಮಾರ್ , ಡಾ.ಸುಬ್ರಹ್ಮಣ್ಯ ರಾವ್ ಪೂರ್ವ ವಿಭಾಗ ಹೆಚ್ಚುವರಿ ಆಯುಕ್ತರಾಗಿ ಅದೇಶ ಹೊರಡಿಸಲಾಗಿದ್ದು, ಲಾಭೂರಾಮ್ ಅವರನ್ನು ಐಜಿಪಿ ಮುಂಬಡ್ತಿಯೊಂದಿಗೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಆಗಿ ಮುಂದುವರೆಸಲಾಗಿದೆ. ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್ ರನ್ನು ನೇಮಿಸಲಾಗಿದ್ದು, ಪಿ.ಎಸ್.ಹರ್ಷ ಅವರಿಗೆ ಮುಂಬಡ್ತಿ ನೀಡಿ ವಾರ್ತಾ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿದೆ. ವಿಕಾಸ್ ಕುಮಾರ್ ಐಜಿಪಿಯಾಗಿ, ರಮಣಗುಪ್ತ ಡಿಐಜಿ ಸಿಸಿಬಿ, ಬೋರಲಿಂಗಯ್ಯ ಡಿಐಜಿ ಬೆಳಗಾವಿ, ರೋಹಿಣಿ ಸೆಪಟ್ ಡಿಐಜಿಯಾಗಿ ಮುಂಬಡ್ತಿ, ರಾಮ್ ಸೆಪಟ್ ನ್ಯಾಶನಲ್ ಅಕಾಡೆಮಿಯಲ್ಲೇ ಮುಂದುವರಿಸಲಾಗಿದೆ.

ಇದಲ್ಲದೇ ಇನ್ನಷ್ಟು ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು, ವರ್ಗಾವಣೆಯಾದ ಅಧಿಕಾರಿಗಳ ವಿವರ ಇಂತಿದೆ.

ಚಂದ್ರಕಾಂತ್ ಎಂ ವಿ, ಎಸ್ ಪಿ ಅರಣ್ಯ ವಿಭಾಗ ಕೊಡಗು.

ಮಧುರವೀಣಾ, ಎಸ್ ಪಿ ಸಿಐಡಿ.

ಚೆನ್ನಬಸವ ಲಂಗೋಟಿ, ಎಸ್ ಪಿ ಇಂಟಲಿಜೆನ್ಸ್ ಬೆಳಗಾವಿ.

ಜಯಪ್ರಕಾಶ್, ಎಸ್ ಪಿ ಎಸಿಬಿ ದಾವಣಗೆರೆ.

ಅಂಜಲಿ ಕೆ ಪಿ, ಎಸ್ ಪಿ ಕರ್ನಾಟಕ ಲೋಕಾಯುಕ್ತ.

ನಾರಾಯಣ ಎಂ, ಎಸ್ ಪಿ ಇಂಟಲಿಜೆನ್ಸ್ ಬೆಂಗಳೂರು.

ಮುತ್ತುರಾಜ್, ಎಸ್ ಪಿ ಇಂಟಲಿಜೆನ್ಸ್ ಮೈಸೂರು.

ಶೇಖರ್ ಹೆಚ್ ಟೆಕ್ಕಣವರ್, ಎಸ್ ಪಿ ಐಎಸ್ ಡಿ.

ರವೀಂದ್ರ ಕಾಶಿನಾಥ್ ಗಡಾದಿ, ಎಸ್ ಪಿ ಹೆಸ್ಕಾಂ ಹುಬ್ಬಳ್ಳಿ.

ಅನಿತಾ ಬೀಮಪ್ಪ ಹದ್ದಣವರ್, ಎಸ್ ಪಿ ಲೋಕಾಯುಕ್ತ ವಿಜಯಪುರ.

ಎ ಕುಮಾರಸ್ವಾಮಿ, ಎಸ್ ಪಿ ಲೋಕಾಯುಕ್ತ ಮಂಗಳೂರು.

ಸಾರಾ ಪಾತೀಮಾ, ಎಸ್ ಪಿ ಸಿಐಡಿ.

ರಶ್ಮಿ ಪರದ್ದಿ, ಎಸ್ ಪಿ, ಚೆಸ್ಕಾಂ ಮೈಸೂರು.

ಐಯಪ್ಪ ಎಂ ಎ, ಎಸ್ ಪಿ ಕೆಪಿಸಿಎಲ್ ವಿಜಿಲೇನ್ಸ್.

ಡಾ. ಶಿವಕುಮಾರ್, ಎಸ್ ಪಿ ಇಂಟಲಿಜೆನ್ಸ್ ಬೆಂಗಳೂರು.

ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಇಂಟಲಿಜೆನ್ಸ್ ಬೆಂಗಳೂರು.

ಅಮರನಾಥ ರೆಡ್ಡಿ ವೈ, ಎಸ್ ಪಿ, ಎಸಿಬಿ.

ಇದನ್ನೂ ಓದಿ : Gujarat High Court : ದಂಪತಿ ನಡುವಿನ ಲೈಂಗಿಕ ಸಂಬಂಧದ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು​

ಇದನ್ನೂ ಓದಿ : Maharashtra Lockdown : ಓಮಿಕ್ರಾನ್‌ ಆರ್ಭಟ ಮುಂಬೈನಲ್ಲಿ15 ದಿನ ಕಠಿಣ ನಿರ್ಬಂಧ, ಸಂಜೆ 5 ರಿಂದ ಬೆಳಿಗ್ಗೆ 5 ರವರೆಗೆ ಎಲ್ಲವೂ ಬಂದ್‌

( IPS Officers Promotions : Major Surgery to the Police Department for the New Year : Advancement and Transfer of IPS )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular