ಸಾಮಾಜಿಕ ಜಾಲತಾಣದಲ್ಲಿ ಕುಮಾರಿ ಸೌಜನ್ಯ ಪ್ರಕರಣ ಬಾರೀ ಸದ್ದು ಮಾಡುತ್ತಿದೆ. Dhootha sameer md ಅನ್ನೋ ಯೂಟ್ಯೂಬರ್ ಸೌಜನ್ಯ (Soujanya) ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿರುವ ವಿಡಿಯೋ ಪರ- ವಿರೋಧದ ಚರ್ಚೆ ಹುಟ್ಟು ಹಾಕಿದೆ. ಅಷ್ಟಕ್ಕೂ ಯಾರೂ ಈ ಸಮೀರ್ ಎಂಡಿ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಮಾರಿ ಸೌಜನ್ಯ ಮೇಲೆ ಅತ್ಯಾಚಾರ ನಡೆದು ನಂತರ ಹತ್ಯೆ ನಡೆಸಲಾಗಿತ್ತು. ಒಂದು ದಶಕ ಕಳೆದಿದ್ರೂ ಕೂಡ ಸೌಜನ್ಯ ಕೊಲೆಯ ಆರೋಪಿಗಳು ಪತ್ತೆಯಾಗಿಲ್ಲ. ಆದ್ರೀಗ ಸೌಜನ್ಯ ಸಾವಿನ ಕುರಿತ ವಿಚಾರ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಕಾಲೇಜು ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ವೇಳೆಯಲ್ಲಿ ಸೌಜನ್ಯಾಳನ್ನು ಅಪಹರಿಸಿ, ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಕೊಲೆಗೈದು ಶವವನ್ನು ಎಸೆಯಲಾಗಿತ್ತು. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಆದರೆ ನ್ಯಾಯಾಲಯ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ನೀಡಿತ್ತು.
ಇದನ್ನೂ ಓದಿ : ಉಡುಪಿ- ಮಂಗಳೂರು ನಡುಗೆ ಮೆಟ್ರೋ ರೈಲು : ನನಸಾಗಲಿದೆ ಕರಾವಳಿಗರ ಬಹು ವರ್ಷದ ಕನಸು
ಸಂತೋಷ್ ರಾವ್ ಜೈಲಿನಿಂದ ಬಿಡುಗಡೆ ಆಗುತ್ತಲೇ ಕೊಲೆಗಾರ ಯಾರು ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೇ ಕಾರಣಕ್ಕೆ ಕಳೆದ ವರ್ಷ ಸೌಜನ್ಯ ಕೊಲೆ ಪ್ರಕರಣ ಬಾರೀ ಸದ್ದು ಮಾಡಿತ್ತು. ಆದರೆ ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿಲ್ಲ. ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆದೇಶ ನೀಡಿರಲಿಲ್ಲ. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ಜೋರಾಗಿದೆ.
ದೂತ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಸಮೀರ್ ಎಂಡಿ ಎಂಬಾತ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈಗಾಗಲೇ ಈ ವಿಡಿಯೋವನ್ನು ಒಂದೂವರೆ ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈತನ ದೂತ ಅನ್ನೋ ಯೂಟ್ಯೂಬ್ 6 ಲಕ್ಷಕ್ಕೂ ಅಧಿಕ ಚಂದಾದಾರಿಕೆಯನ್ನು ಕಂಡಿದೆ. ಲಕ್ಷಾಂತರ ಮಂದಿ ಈತನ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ಯಾರು ಈ ದೂತ ಸಮೀರ್ ಎಂ ಡಿ ? (Who Is Dhootha Sameer MD)
ಸಮೀರ್ ಎಂಡಿ ಎಂಬಾತ ಓರ್ವ ಕಂಟೆಂಟ್ ಕ್ರಿಯೇಟರ್. ಸಿನಿಮಾಗಳ ಕುರಿತು ಈ ಹಿಂದೆ ವಿಡಿಯೋವನ್ನು ಮಾಡುತ್ತಿದ್ದ. ಸಮೀರ್ ಎಂಡಿ ಅನ್ನೋ ಈತ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದಿಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಆದರೆ ಇತ್ತೀಚೆಗೆ ದೂತ ಅನ್ನೋ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು, ಹಲವು ವಿಡಿಯೋಗಳನ್ನು ಪ್ರಕಟಿಸಿದ್ದಾನೆ.
ಇಂಜಿನಿಯರಿಂಗ್ ಪದವೀಧರನಾಗಿರುವ ಸಮೀರ್ ಎಂಡಿ ಮೂಲತಃ ಬಳ್ಳಾರಿ ಜಿಲ್ಲೆಯವನು. ಸುಮಾರು 12 ವರ್ಷಗಳ ಹಿಂದೆ ನಡೆದಿರುವ ಸೌಜನ್ಯ ಪ್ರಕರಣವನ್ನು ಇಟ್ಟುಕೊಂಡು ಊರಿಗೆ ದೊಡ್ಡವರೇ ಕೊಲೆ ಮಾಡಿದ್ರಾ ಅನ್ನೋ ಶೀರ್ಷಿಕೆಯಡಿಯಲ್ಲಿ ವಿಡಿಯೋ ಪ್ರಕಟಿಸಿದ್ದ. ವಿಡಿಯೋ ಪ್ರಕಟವಾಗುತ್ತಲೇ ಈತನ ವಿರುದ್ದ ವಿಡಿಯೋ ಮಾಡೋದಕ್ಕೆ ಲಂಚ ಪಡೆದಿರುವ ಆರೋಪವೂ ಕೇಳಿಬಂದಿತ್ತು. ಅಲ್ಲದೇ ಸೌಜನ್ಯ ಪರ ವಿಡಿಯೋದಲ್ಲಿ ಧರ್ಮಸ್ಥಳ ದೇವಾಲಯದ ಹೆಸರನ್ನು ಕೂಡ ಎಳೆದು ತಂದಿದ್ದ. ಇದು ಧರ್ಮಸ್ಥಳದ ಭಕ್ತರನ್ನು ಕೆರಳುವಂತೆ ಮಾಡಿತ್ತು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ? ಹೀಗೆ ಚೆಕ್ ಮಾಡಿ
ಸಮೀರ್ ಎಂಡಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಎಲ್ಲಾ ಪೊಲೀಸ್ ಕಮಿಷನರ್‌ಗಳಿಗೆ ಈತನ ವಿರುದ್ದ ಪತ್ರವೊಂದನ್ನು ರವಾನಿಸಿದ್ದರು. ಧರ್ಮಸ್ಥಳದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪಡಿಯಲ್ಲಿ ಸಮೀರ್ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.
ಬಳ್ಳಾರಿಯ ಕೌಲ್ ಬಜಾರ್ ಠಾಣೆಯ ಪೊಲೀಸರು ಸಮೀರ್ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಸಮೀರ್ ಮನೆಗೂ ಪೊಲೀಸರು ಭೇಟಿ ಕೊಟ್ಟು ವಿಚಾರಣೆ ನಡೆಸಿದ್ದಾರೆ.
Justice for Dharmasthala Soujanya Who Is Dhootha Sameer MD Contravesy Kannada News