ಕುಂದಾಪುರ : ಆಟವಾಡುತ್ತಿದ್ದ ವೇಳೆಯಲ್ಲಿ ನೀರಿನ ಬಕೆಟ್‌ಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವಿಗೆ ಮರುಜೀವ ನೀಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕಂಡ್ಲೂರು (Kandloor ) ಎಂಬಲ್ಲಿ ನಡೆದಿದೆ. ಮಗುವಿನ ಜೀವ ಉಳಿಸಿದ ವೈದ್ಯರು ಹಾಗೂ ಅಂಬ್ಯುಲೆನ್ಸ್ ಚಾಲಕನ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಂಡ್ಲೂರಿನ ನಿವಾಸಿಯಾಗಿರುವ ಮೌಲಾನಾ ಕಲಿಮುಲ್ಲಾ ಎಂಬವರ 11 ತಿಂಗಳ ಮಗು ಬಾತ್ ರೂಮ್‌ಗೆ ತೆರಳಿತ್ತು. ಅಲ್ಲಿ ಬಕೆಟ್ ನಲ್ಲಿ ಇದ್ದ ನೀರನ್ನು ಅಡಲು ಆರಂಭಿಸಿತ್ತು. ಸ್ವಲ್ಪ ಹೊತ್ತಿನಲ್ಲೇ ಮಗು ಬಕೆಟ್ ಒಳಗೆ ಇಳಿದಿತ್ತು. ನೀರಿನಲ್ಲಿ ನೆಲೆಯಾಗದೇ ಮಗು ನೀರಿನಲ್ಲಿ ಮುಳುಗಿ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿತ್ತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗುವನ್ನು ಕೂಡಲೇ ಮನೆಯವರು ಕಂಡ್ಲೂರಿನಲ್ಲಿ ಇರುವ ಮಂಜುಶ್ರೀ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದಾರೆ.
ಮಂಜುಶ್ರೀ ಕ್ಲಿನಿಕ್ ನ ವೈದ್ಯರಾದ ಡಾ.ಪ್ರಶಾಂತ್ ಶೆಟ್ಟಿ ಅವರು, ಕೂಡಲೇ ತುರ್ತು ಚಿಕಿತ್ಸೆಯನ್ನು ನೀಡುವ ಮೂಲಕ ಪ್ರಾಣ ರಕ್ಷಣೆಯನ್ನು ಮಾಡಿದ್ದರು. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಕೂಡಲೇ ಅಂಬ್ಯಲೆನ್ಸ್ ಚಾಲಕ ಆಯ್ಮಾನ್ ಶರವೇಗದಲ್ಲಿ ಅಂಬ್ಯುಲೆನ್ಸ್ ನಲ್ಲಿ ಮಗುವನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದ.
ಇದನ್ನೂ ಓದಿ : ದೆಹಲಿಯಿಂದ ಬಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ಕಂಡ್ಲೂರಿನ ವೈದ್ಯರಾದ ಡಾ.ಪ್ರಶಾಂತ್ ಶೆಟ್ಟಿ ವಕ್ವಾಡಿ ಹಾಗೂ ಅಂಬ್ಯುಲೆನ್ಸ್ ಚಾಲಕ ಆಯ್ಮಾನ್ ಸಮಯಪ್ರಜ್ಞೆಯಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು ಇದೀಗ ತಾಯಿಯ ಮಡಿಲು ಸೇರಿದೆ. ಇದೀಗ ವೈದ್ಯ ಡಾ.ಪ್ರಶಾಂತ್ ಶೆಟ್ಟಿ ಹಾಗೂ ಚಾಲಕ ಆಯ್ಮಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ಮಗುವಿನ ಪೋಷಕರು ಇಬ್ಬರನ್ನೂ ಸನ್ಮಾನಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ : ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಮೃತದೇಹ ಕುಟುಂಬಕ್ಕೆ ಹಸ್ತಾಂತರ
ಕಂಡ್ಲೂರಿನ ಜನರು ಇದೀಗ ವೈದ್ಯರಾದ ಡಾ.ಪ್ರಶಾಂತ್ ಶೆಟ್ಟಿ ಹಾಗೂ ಅಂಬ್ಯುಲೆನ್ಸ್ ಚಾಲಕ ಆಯ್ಮಾನ್ ಕಾರ್ಯಕ್ಕೆ ಗುಣಗಾನ ಮಾಡುತ್ತಿದ್ದಾರೆ. ಕಾವ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಲಿಯಾಖತ್ ಬೆಟ್ಟೆ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಥಲಸ್ಸೇಮಿಯಾ ಬಾಲಕನಿಗೆ ಮೊದಲ ಬಾರಿಗೆ ಯಶಸ್ವಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್
Kandloor 11 Month Girl Child Life save Doctor and Ambulance Driver