ಭಾನುವಾರ, ಏಪ್ರಿಲ್ 27, 2025
Homekarnatakaಖ್ಯಾತ ಜನಪದ ಗಾಯಕ ಗುರುರಾಜ್‌ ಹೊಸಕೋಟೆ ಕಾರು ಅಪಘಾತ

ಖ್ಯಾತ ಜನಪದ ಗಾಯಕ ಗುರುರಾಜ್‌ ಹೊಸಕೋಟೆ ಕಾರು ಅಪಘಾತ

Gururaj Hosakote Car Accident : ಗುರುರಾಜ್‌ ಹೊಸಕೋಟೆ ಜನಪದ ಗಾಯಕರಾಗಿ ಬಹುಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ರಂಗಭೂಮಿ ಕಲಾವಿದರಾಗಿ ನಟರಾಗಿಯೂ ಖ್ಯಾತಿಗಳಿಸಿದ್ದಾರೆ.

- Advertisement -

Gururaj Hosakote Car Accident : ಬೆಂಗಳೂರು : ಹೆಸರಾಂತ ಜನಪದ ಗಾಯಕ ಗುರುರಾಜ್‌ ಹೊಸಕೋಟೆ (GURURAJ HOSKOTE) ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬಾಗಲಕೋಟೆ (Bagalkot) ಜಿಲ್ಲೆಯ ಸೋರಗಾವಿ ಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದೆ. ಆದರೆ ಯಾವುದೇ ಅನಾಹುತ ನಡೆದಿಲ್ಲ ಎಂದು ತಿಳಿದು ಬಂದಿದೆ.

ಗುರುರಾಜ್‌ ಹೊಸಕೋಟೆ ಅವರು ಪ್ರಯಾಣಿಸುತ್ತಿದ್ದ ಕಾರು ಸೋರಗಾವಿ ಗ್ರಾಮದ ಬಳಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿದೆ. ಎದುರಿನಿಂದ ವೇಗವಾಗಿ ಬರುತ್ತಿದ್ದ ಕಾರಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾರನ್ನ ಪಕ್ಕಕ್ಕೆ ತಿರುಗಿಸಲಾಗಿದೆ. ಇದರಿಂದಾಗಿ ಗುರುರಾಜ್‌ ಹೊಸಕೋಟೆ ಅವರ ಕಾರು ಡಿವೈಡರ್‌ಗೆ ಕಾರು ಢಿಕ್ಕಿ ಹೊಡೆದು ಈ ಘಟನೆ ಸಂಬಂವಿಸಿದೆ ಎನ್ನಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ : ಮೀಸಲಾತಿ ವಿರೋಧಿಸಿ ಸಚಿವಾಲಯ ಕಟ್ಟಡದಿಂದ ಹಾರಿದ ಡೆಪ್ಯುಟಿ ಸ್ಪೀಕರ್ ಮತ್ತು ಇಬ್ಬರು ಶಾಸಕರು!

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಮೂಲದವರಾಗಿರುವ ಗುರುರಾಜ್‌ ಹೊಸಕೋಟೆ ಜನಪದ ಗಾಯಕರಾಗಿ ಬಹುಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ರಂಗಭೂಮಿ ಕಲಾವಿದರಾಗಿ ನಟರಾಗಿಯೂ ಖ್ಯಾತಿಗಳಿಸಿದ್ದಾರೆ. ಅಲ್ಲೇ ಇರುವುದು ನೋಡಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಗುರುರಾಜ್‌ ಹೊಸಕೋಟೆ, ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಕರಿಯ, ಮಹಾಕ್ಷತ್ರಿಯ, ಜೋಗಿ, ದಾಸ, ತನಂತನಂ, ಸುಂಕಟರಗಾಳಿ, ರಾಮ ಭಾಮ ಶಾಮ, ಅಂಬಿ, ಅಶೋಕ, ಶಂಭು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ತಿರುಪತಿ ಲಡ್ಡು ಪ್ರಕರಣದ ತನಿಖೆಗೆ ಸ್ವತಂತ್ರ ಎಸ್ ಐಟಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶ

ಅಷ್ಟೇ ಅಲ್ಲದೇ ಓ ಗುಲಾಬಿ, ಒಡಹುಟ್ಟಿದವರು, ಅಗ್ರಹಾರ ಸಿನಿಮಾಗಳಲ್ಲಿ ಗೀತ ರಚನೆಕಾರರಾಗಿ ಕೆಲಸ ಮಾಡಿದ್ದಾರೆ. ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಜಾನಪದ ಗಾನ ಸರಿ, ಜಾನಪದ ಕಲಾನಿಧಿ, ಜಾನಪದ ಕೋಗಿಲೆ, ಜಾನಪದ ಕಲಾಕೌಸ್ತುಬ, ಜಾನಪದ ನಿಧಿ ಸೇರಿದಂತೆ ಹಲವು ಬಿರುದುಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಕನ್ನಡದಲ್ಲಿಯೂ ನಡೆಯಲಿದೆ ರೈಲ್ವೇ ಇಲಾಖೆ ಮುಂಬಡ್ತಿ ಪರೀಕ್ಷೆ

Kannada Playback singer Gururaj Hosakote Car Accident

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular